ರ್ಯಾಪಿಡ್ ರಶ್ಮಿ ಸೀರೆ ಸಂತೆ ಬಗ್ಗೆ ಎಲ್ಲರಿಗೂ ಗೊತ್ತು. ಸದ್ಯ ಅವರು ಅಂಗಡಿ ಶುರುಮಾಡಿದ್ದಾರೆ. ಆದ್ರೆ ಅವರ ಜರ್ನಿ ಸುಲಭ ಆಗಿರಲಿಲ್ಲ. ಇದು ನನ್ನ ಕನಸಲ್ಲ ಹಠದಿಂದ ಹುಟ್ಟಿಕೊಂಡಿದ್ದು ಅಂತ ರ್ಯಾಪಿಡ್ ರಶ್ಮಿ ಹೇಳಿದ್ದಾರೆ. ಅನೇಕ ಬ್ಯುಸಿನೆಸ್ ಉತ್ಸಾಹಿಗಳಿಗೆ ತಮ್ಮ ಮಾತಿನ ಮೂಲಕ ಪ್ರೋತ್ಸಾಹ ನೀಡಿದ್ದಾರೆ.
ರ್ಯಾಪಿಡ್ ರಶ್ಮಿ ಈಗ ದೊಡ್ಡ ಸೀರೆ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ. ಸಣ್ಣದಾಗಿ ಶುರುವಾದ ಬ್ಯುಸಿನೆಸ್ ಈಗ ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸಿದೆ. ರ್ಯಾಪಿಡ್ ರಶ್ಮಿ ರಾಧಾ ಹೆಸರಿನಲ್ಲಿ ಸೀರೆ ಮಾರಾಟ ಮಾಡ್ತಿದ್ದಾರೆ. ಆರಂಭದಲ್ಲಿ ಅವರು ಆನ್ಲೈನ್ ಮೂಲಕ ಸೀರೆ ಮಾರಾಟ ಶುರು ಮಾಡಿದ್ರು. ನಾನಿಲ್ದೆ ಇರುವಾಗ್ಲೂ ನನ್ನ ಹೆಸರಿನಲ್ಲಿ ಒಂದು ಬ್ಯುಸಿನೆಸ್ ನಡೆಯಬೇಕು ಎನ್ನುವ ಆಶಯದಲ್ಲಿ ಶುರುವಾಗಿದ್ದು ಈ ಸೀರೆ ಬ್ಯುಸಿನೆಸ್.
24
ಆನ್ಲೈನ್ ಮಾರಾಟ
ಸೀರೆಗಳನ್ನು ಅತಿ ಹೆಚ್ಚು ಉಡ್ತಿದ್ದ ರಶ್ಮಿ, ಸೀರೆ ಮಾರಾಟವನ್ನೆ ಬ್ಯುಸಿನೆಸ್ ಮಾಡ್ಕೊಂಡ್ರು. ಆನ್ಲೈನ್ ನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸೀರೆ ಮಾರಾಟವಾಗಿತ್ತು. ಎಲ್ಲರಂತೆ ಇವರೂ ಮಾರಾಟದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಎರಡು ತಿಂಗಳಲ್ಲಿ ಅವರು ಮಾರಾಟ ಮಾಡಿದ್ದು ಬರೀ 170 ಸೀರೆ ಮಾತ್ರ. ಆದ್ರೆ ಇದ್ರಲ್ಲೇ ಖುಷಿ ಕಂಡಿದ್ದರು ರ್ಯಾಪಿಡ್ ರಶ್ಮಿ ಇದನ್ನೇ ಮುಂದೆ ದೊಡ್ಡ ಬ್ಯುಸಿನೆಸ್ ಆಗಿ ವಿಸ್ತರಿಸಿದ್ದಾರೆ.
34
ಹಠದಿಂದ ಶುರುವಾಯ್ತು ಸೀರೆ ಸಂತೆ
ಡಿಸೆಂಬರ್ ಕ್ರಿಸ್ ಮಸ್ ಸಂದರ್ಭದಲ್ಲಿ ರಶ್ಮಿ ಕೂಡ ಸೀರೆ ಸ್ಟಾಲ್ ಹಾಕಲು ಬಯಸಿದ್ರು. ಆದ್ರೆ ಅವರಿಗೆ ಸ್ಟಾಲ್ ಸಿಕ್ಕಿರಲಿಲ್ಲ. ಮೀಡಿಯಾದಲ್ಲಿ ಪ್ರಸಿದ್ಧಿ ಪಡೆದಿದ್ರೂ ಸ್ಟಾಲ್ ಸಿಗ್ಲಿಲ್ಲ ಎನ್ನುವ ಅವಮಾನ ಹಠವಾಗಿ ಬದಲಾಯ್ತು. ತನ್ನದೇ ಸೀರೆ ಸ್ಟಾಲ್ ಶುರು ಮಾಡುವ ನಿರ್ಧಾರಕ್ಕೆ ಬಂದ್ರು. ಆಗ ಬಂದಿದ್ದೇ ಸೀರೆ ಸಂತೆ. ಸೀರೆ ಸಂತೆಯಲ್ಲಿ ರಶ್ಮಿ ಈವರೆಗೆ 60 ಸಾವಿರ ಸೀರೆ ಮಾರಾಟ ಮಾಡಿದ್ದಾರಂತೆ.
ರ್ಯಾಪಿಡ್ ರಶ್ಮಿ ಈಗ ಸೀರೆ ಮಳಿಗೆ ಶುರು ಮಾಡಿದ್ದಾರೆ. ಶ್ರದ್ಧೆಯಲ್ಲಿ ಕೆಲ್ಸ ಮಾಡಿದ್ರೆ ಎಲ್ಲ ಸಾಧ್ಯ ಎನ್ನುವ ರಶ್ಮಿ ತಾವು ನಡೆದ ಬಂದ ದಾರಿಯನ್ನು ನೆನಪಿಸಿಕೊಂಡಿದ್ದಾರೆ. ಎಷ್ಟೇ ಕಷ್ಟಪಟ್ಟರೂ ಜನ ಕೈ ಹಿಡಿದಾಗ ಖುಷಿಯಾಗುತ್ತೆ ಅಂತ ರಶ್ಮಿ ಹೇಳಿದ್ದಾರೆ. ಈಗ ರ್ಯಾಪಿಡ್ ರಶ್ಮಿ ರಾಧಾ ಸ್ಟೋರ್ ಓಪನ್ ಮಾಡಿದ್ದು, ಅವರ ಸೀರೆ ಸೆಲೆಬ್ರಿಟಿಗಳ ಅಚ್ಚುಮೆಚ್ಚಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.