ಅಪ್ಪಟ ಚಿನ್ನದ ದಾರ ಪೋಣಿಸಿದ ದುಪ್ಪಟ್ಟಾದಲ್ಲಿ ದೇವತೆಯಂತೆ ಕಂಗೊಳಿಸಿದ ಅಂಬಾನಿ ಕಿರಿ ಸೊಸೆ!

Published : Mar 10, 2024, 08:49 AM IST

ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಇವೆಂಟ್ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ರಾಧಿಕಾ ಧರಿಸಿದ್ದ ಗ್ರ್ಯಾಂಡ್ ಲೆಹಂಗಾ, ದುಪ್ಪಟ್ಟಾ ಎಲ್ಲರ ಗಮನ ಸೆಳೆದಿದೆ. ಅಚ್ಚರಿಯ ವಿಷಯವೆಂದರೆ ಈ ದುಪ್ಪಟ್ಟಾ, ಅಪ್ಪಟ ಚಿನ್ನದ ದಾರದಿಂದ ಪೋಣಿಸಿ ಮಾಡಿಸಿದ್ದಾಗಿದೆ.

PREV
18
ಅಪ್ಪಟ ಚಿನ್ನದ ದಾರ ಪೋಣಿಸಿದ ದುಪ್ಪಟ್ಟಾದಲ್ಲಿ ದೇವತೆಯಂತೆ ಕಂಗೊಳಿಸಿದ ಅಂಬಾನಿ ಕಿರಿ ಸೊಸೆ!

ಗುಜರಾತ್‌ನ ಜಾಮ್ನಾ ನಗರದಲ್ಲಿ ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಮಗ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಇವೆಂಟ್ ಅದ್ಧೂರಿಯಾಗಿ ನಡೆದಿದೆ. ವಿವಾಹ ಪೂರ್ವ ಸಮಾರಂಭ ನಡೆದು ಹಲವು ದಿನಗಳು ಕಳೆದರೂ ಮದುವೆಯ ಅದ್ಧೂರಿತನದ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇದೆ.

28

ಮೂರು ದಿನಗಳ ಅದ್ಧೂರಿ ಸಮಾರಂಭಕ್ಕೆ ಬರೋಬ್ಬರಿ 1000 ಕೋಟಿ ರೂ. ಖರ್ಚು ಮಾಡಲಾಗಿದೆ. ಜೊತೆಗೆ ವಧು-ವರರ ಗ್ರ್ಯಾಂಡ್ ಡ್ರೆಸ್, ಆಸೆಸ್ಸರೀಸ್ ಎಲ್ಲರ ಗಮನ ಸೆಳೆದಿದೆ.

38

ಭಾವೀ ವಧು ಪ್ರಿ ವೆಡ್ಡಿಂಗ್‌ ಇವೆಂಟ್‌ಗಳಿಗೆ ಅತ್ಯಾಕರ್ಷಕ ಉಡುಗೆಗಗಳನ್ನು ಧರಿಸಿದ್ದರು. ಜಂಗಲ್‌ ಥೀಮ್‌ ಡ್ರೆಸ್, ಪಾರ್ಟಿ ವೇರ್‌, ಗ್ರ್ಯಾಂಡ್ ಲೆಹಂಗಾ ಎಲ್ಲರ ಗಮನ ಸೆಳೆಯಿತು.

48

ಹಸ್ತಾಕ್ಷರ್‌ ಸಮಾರಂಭಕ್ಕೆ ರಾಧಿಕಾ ಧರಿಸಿದ್ದ ಗ್ರ್ಯಾಂಡ್ ಲೆಹಂಗಾ, ದುಪ್ಪಟ್ಟಾ ಎಲ್ಲರ ಗಮನ ಸೆಳೆದಿದೆ. ಅಚ್ಚರಿಯ ವಿಷಯವೆಂದರೆ ಇದು ಅಪ್ಪಟ ಚಿನ್ನದ ದಾರದಿಂದ ಪೋಣಿಸಿ ಮಾಡಿಸಿದ ದುಪ್ಪಟ್ಟವಾಗಿದೆ. ಸ್ವತಃ ರಾಧಿಕಾ ಮರ್ಚೆಂಟ್ ಈ ವಿಚಾರವನ್ನು ಬಹಿರಂಗಪಡಸಿದ್ದಾರೆ.

58

ಅದ್ಧೂರಿ ಗ್ರ್ಯಾಂಡ್ ಲೆಹಂಗಾದಲ್ಲಿ ರಾಧಿಕಾ ದೇವತೆಯಂತೆ ಕಾಣಿಸುತ್ತಿದ್ದರು. ಇದಕ್ಕೆ ಚಿನ್ನದ ದಾರದ ದುಪ್ಪಟ್ಟಾ ಇನ್ನಷ್ಟು ಮೆರುಗು ನೀಡಿತ್ತು. 

68

ಗೋಲ್ಡನ್‌ ದುಪ್ಪಟ್ಟಾವನ್ನು ಬರೋಬ್ಬರಿ ಆರು ತಿಂಗಳು ಸಮಯ ತೆಗೆದುಕೊಂಡು ಮನೀಷ್ ಮಲ್ಹೋತ್ರಾ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿಯೇ ಇದು ಅತ್ಯಂತ ಹೊಳಪಿನಿಂದ ಕೂಡಿತ್ತು. ಜುಲೈನಲ್ಲಿ ಅನಂತ್ ಮತ್ತು ರಾಧಿಕಾ ಮದುವೆ ನಿಗದಿಯಾಗಿದೆ.

78

ಪ್ರಿ ವೆಡ್ಡಿಂಗ್ ಇವೆಂಟ್‌ನ ಇತರ ಕಾರ್ಯಕ್ರಮಗಳಿಗೂ ರಾಧಿಕಾ ಅದ್ಧೂರಿ ಉಡುಗೆಗಳನ್ನು ಧರಿಸಿದ್ದರು. ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಮೇಳ ರೂಜ್ ಸಮಾರಂಭಕ್ಕಾಗಿ,  ಮನೀಷ್ ಮಲ್ಹೋತ್ರಾ  ಡಿಸೈನ್‌ ಮಾಡಿದ ಸ್ಟೀಲ್ ಬ್ಲೂ ಲೆಹೆಂಗಾವನ್ನು ಧರಿಸಿದ್ದರು.

88

ಲೆಹೆಂಗಾವು ಸ್ವರೋವ್ಸ್ಕಿ ಹರಳುಗಳಿಂದ ಅಲಂಕರಿಸಲಾಗಿದೆ. ರಾಧಿಕಾ ಅವರ ಲೆಹೆಂಗಾದಲ್ಲಿ ಒಟ್ಟು 300,000 ಜಾಗತಿಕವಾಗಿ ಮೂಲದ ಸ್ವರೋವ್ಸ್ಕಿ ಹರಳುಗಳಿವೆ ಎಂದು   ಡಿಸೈನರ್ ಮನೀಶ್ ಮಲ್ಲೋತ್ರಾ ಬಹಿರಂಗಪಡಿಸಿದ್ದಾರೆ.

Read more Photos on
click me!

Recommended Stories