ಕಾಂಚೀಪುರಂ ಸೀರೆಯಲ್ಲಿ ಕಂಗೊಳಿಸಿದ ನೀತಾ ಅಂಬಾನಿ, ಸ್ಯಾರಿಯಲ್ಲಿದೆ ಅನಂತ್-ರಾಧಿಕಾ ಹೆಸರು!

First Published | Mar 7, 2024, 9:12 PM IST

ಅನಂತ್ ಅಂಬಾನಿ- ರಾಧಿಕಾ ಮದುವೆಯಲ್ಲಿ ನವ ಜೋಡಿಗಳ ಜೊತೆಗೆ ಅಂಬಾನಿ ಕುಟುಂಬಸ್ಥರೂ ಅಷ್ಟೇ ಸೆಂಟರ್ ಆಫ್ ಅಟ್ರಾಕ್ಷನ್. ಅಧರಲ್ಲೂ ನೀತಾ ಅಂಬಾನಿ ಫ್ಯಾಶನ್, ಸ್ಟೈಲ್, ಕೋಟಿ ಬೆಲೆಬಾಳುವ ಆಭರಣ, ಸೀರೆ ಎಲ್ಲೆಡೆ ಸದ್ದುಮಾಡುತ್ತಿದೆ. ಇದೀಗ ನೀತಾ ಅಂಬಾನಿ ಕಾಂಚೀಪುರಂ ಸೀರೆಯಲ್ಲಿ ಕಂಗೊಳಿಸಿದ್ದಾರೆ. ನೀತಾ ಅಂಬಾನಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ಈ ಸೀರೆಯಲ್ಲಿ ಹಲವು ವಿಶೇಷತೆಗಳಿವೆ.
 

ಅಂಬಾನಿ ಕುಟುಂಬದಲ್ಲಿನ ಮದುವೆ ಸಡಗರಕ್ಕೆ ವಿಶ್ವವೇ ಬೆರಗಾಗಿದೆ. ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ವಿಶ್ವದ ದಿಗ್ಗಜರೇ ಆಗಮಿಸಿದ್ದಾರೆ. ನವ ಜೋಡಿಗಳಾದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಡ್ರೆಸ್, ಫ್ಯಾಶನ್, ಆಭರಣಗಳು ಭಾರಿ ಸಂಚಲನ ಸೃಷ್ಟಿಸಿದೆ

ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬಸ್ಥರು ಅಷ್ಟೇ ಮಿಂಚುತ್ತಿದ್ದಾರೆ. ಪ್ರತಿಯೊಬ್ಬರ ಉಡುಗೆ ತೊಡುಗಳಿಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಪೈಕಿ ನೀತಾ ಅಂಬಾನಿಯ ಫ್ಯಾಶನ್,ವಸ್ತ್ರಗಳು ಎಲ್ಲರ ಕಣ್ಣು ಕುಕ್ಕುತ್ತಿದೆ.
 

Tap to resize

ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ಬಳಿಕ ನೀತಾ ಅಂಬಾನಿ ಜಗತ್ಪ್ರಸಿದ್ಧ ಕಾಂಚೀಪುರಂ ಸೀರೆಯಲ್ಲಿ ಕಂಗೊಳಿಸಿದ್ದಾರೆ. ನೀತಾ ಅಂಬಾನಿಗಾಗಿ ನುರಿತ ಕುಶಲಕರ್ಮಿಗಳು ಈ ಸೀರೆಯನ್ನು ಸಿದ್ಧಪಡಿಸಿದ್ದಾರೆ.
 

ಈ ಸೀರೆಯಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹೆಸರಿಲ್ಲಿನ ಇನಿಷಿಯಲ್‌ ಒಳಗೊಂಡಿದೆ. ಇದರ ಜೊತೆಗೆ ಸೂಕ್ಷ್ಮ ಕುಶಲತೆಯನ್ನೂ ಈ ಸೀರೆಯಲ್ಲಿ ಗಮನಿಸಬಹುದು.
 

ಅನಂತ್-ರಾಧಿಕಾ  ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ಜಾಮ್ ನಗರದ ರಿಲಯನ್ಸ್ ಪರಿವಾರಕ್ಕೆ ಧನ್ಯವಾದ ಹೇಳಲು ನೀತಾ ಅಂಬಾನಿ ಕಾಂಚೀಪುರಂ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.  
 

ನೀತಾ ಅಂಬಾನಿ ಉಟ್ಟಿರುವ ಈ ಸೀರೆಯಲ್ಲಿ ಸಾಂಪ್ರದಾಯಿಕ ಕಾಂಚೀಪುರಂ ರೇಷ್ಮೆ ಸೀರೆ ಮಾದರಿಗಳಲ್ಲಿ ಕಾಣಸಿಗುವ 102 ವಿನ್ಯಾಸಗಳನ್ನು (ಮೋಟಿಫ್) ಅಡಕ ಮಾಡಲಾಗಿದೆ.
 

ಶ್ರೀಮಂತ ಪರಂಪರೆ ಹಾಗೂ ಕರಕುಶಲತೆಯನ್ನು ಬಿಂಬಿಸುವ ಏಕೈಕ ಮೇರು ಕೃತಿ ಎಂಬಂತೆ ಈ ಸೀರೆಯನ್ನು ಕರಕುಶಲಕರ್ಮಿಗಳು ಅತೀ ಸೂಕ್ಷ್ಮವಾಗಿ ಸಿದ್ದಪಡಿಸಿದ್ದಾರೆ.

Latest Videos

click me!