ಗುಜರಾತ್‌ನ ಜಾಮ್ನಾ ನಗರದಲ್ಲಿಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭ ಅದ್ಧೂರಿಯಾಗಿ ನಡೀತಿದೆ. ಕಳೆದ ಕೆಲವು ದಿನಗಳಿಂದ ನಡೀತಿರೋ ಕಾರ್ಯಕ್ರಮಗಳಲ್ಲಿ ನೀತಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ತೋರಿಸಿದ್ದಾರೆ. ಗ್ರ್ಯಾಂಡ್ ಸ್ಯಾರಿ ಹಾಗೂ ನೆಕ್ಲೇಸ್ ಎಲ್ಲರ ಗಮನ ಸೆಳೀತಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ 'ಹಸ್ತಾಕ್ಷರ' ಇವೆಂಟ್‌ನಲ್ಲಿ ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ನೀತಾ ಅಂಬಾನಿ ಸ್ಟನಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡರು. ಇದರ ಜೊತೆ ಧರಿಸಿದ ವಜ್ರದ ನೆಕ್ಲೇಸ್ ಎಲ್ಲರನ್ನೂ ಬೆರಗಾಗಿಸಿದೆ.
ನೀತಾ ಸಮಾರಂಭಕ್ಕೆ ಕಾಂಚೀಪುರಂ ಸೀರೆಯೊಂದಿಗೆ ಕೋಟಿಗಟ್ಟಲೆ ಬೆಲೆಬಾಳುವ ಪಚ್ಚೆ ಹೊದಿಸಿದ ವಜ್ರದ ನೆಕ್ಲೇಸ್ ಧರಿಸಿದ್ದರು. ಎರಡು ದೊಡ್ಡ ಗಾತ್ರದ ಪೆಂಡೆಂಟ್‌ಗಳಿಗೆ ಜೋಡಿಸಲಾದ ಪಚ್ಚೆಗಳನ್ನು ಒಳಗೊಂಡಿರುವ ಉದ್ದನೆಯ ನೆಕ್ಲೇಸ್ ಇದಾಗಿದೆ. ಜೊತೆಗೆ ಹೊಂದಾಣಿಕೆಯ ಸ್ಟಡ್ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರವನ್ನು ಧರಿಸಿದ್ದರು.
ನೀತಾ ಅವರ ಹಾರದಲ್ಲಿರುವ ಪಚ್ಚೆ ಮತ್ತು ವಜ್ರಗಳ ಗಾತ್ರವನ್ನು ನೋಡಿದರೆ, ಅದು ಹೆಚ್ಚು ಮೌಲ್ಯಯುತವಾದ ಕ್ಯಾರಟ್‌ಗಳು ಎಂದು ಅರ್ಥಮಾಡಿಕೊಳ್ಳಬಹುದು. ಪಿಒಪಿ ಡೈರೀಸ್‌ನಲ್ಲಿನ ವರದಿಯ ಪ್ರಕಾರ, ನೀತಾ ಅವರ ಆಭರಣಗಳ ಬೆಲೆ ಕೋಟಿಯಲ್ಲಿದೆ. ವರದಿಯನ್ನು ನಂಬುವುದಾದರೆ ಹಾರವೇ ಸುಮಾರು ರೂ. 400-500 ಕೋಟಿ ಬೆಲೆ ಬಾಳುತ್ತದೆ.
ಮಾರ್ಚ್ 3, 2024ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಗಳಲ್ಲಿ ಅಂತಿಮ ಕಾರ್ಯಕ್ರಮಕ್ಕಾಗಿ, ನೀತಾ ಅಂಬಾನಿ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಆರಿಸಿಕೊಂಡರು. ಇದರೊಂದಿಗೆ ಪಚ್ಚೆ ನೆಕ್ಲೇಸ್‌ನ್ನು ಪೇರ್ ಮಾಡಲಾಗಿತ್ತು. ಇದು ಕೊಹಿನೂರ್ ವಜ್ರಕ್ಕಿಂತ ಕಡಿಮೆಯಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.
ರಿಲಯನ್ಸ್‌ನ ಐಷಾರಾಮಿ ಚಿಲ್ಲರೆ ಬ್ರಾಂಡ್ ಸ್ವದೇಶ್ ಸಹಯೋಗದೊಂದಿಗೆ ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಇದನ್ನು ವಿನ್ಯಾಸಗೊಳಿಸಿದ್ದಾರೆ. ಸೀರೆಯು ಸ್ಕಲೋಪ್ಡ್ ಬಾರ್ಡರ್‌ಗಳಲ್ಲಿ ಕ್ಲಾಸಿಕ್ ಸಾಂಪ್ರದಾಯಿಕ ಜರ್ದೋಸಿ ವರ್ಕ್‌ನ್ನು ಒಳಗೊಂಡಿತ್ತು. ಸೀರೆಯ ಸ್ಲೀವ್ಸ್‌ನಲ್ಲಿ ವಿಶಿಷ್ಟವಾದ ಗೋಟಾ ವರ್ಕ್ ಮಾಡಲಾಗಿತ್ತು.
ಪ್ರಿ-ವೆಡ್ಡಿಂಗ್‌ನ ಮೊದಲ ದಿನದ ಸಮಾರಂಭಕ್ಕೆ ನೀತಾ ಅಂಬಾನಿ ವೈನ್ ಬಣ್ಣದ ಸ್ಟೈಲಿಶ್ ಗೌನ್‌ನ್ನು ಆಯ್ಕೆ ಮಾಡಿಕೊಂಡಿದ್ದರು.
ವೈನ್-ಹ್ಯೂಡ್ ಅಲಂಕರಿಸಿದ ಸ್ಟಿಲೆಟ್ಟೊಗಳು ಮತ್ತು ಪಚ್ಚೆ ಹೊದಿಕೆಯ ವಜ್ರದ ಆಭರಣಗಳನ್ನು ಧರಿಸಿದ್ದರು. ಇದು ಎಲ್ಲರ ಗಮನ ಸೆಳೆಯಿತು.