ಅಬ್ಬಬ್ಬಾ..ಚಿನ್ನವನ್ನೇ ಹೊದಿಸಿ ಮಾಡಿದ್ರಾ, ಕಣ್ಣು ಕೋರೈಸೋ ಗೋಲ್ಡನ್ ಲೆಹಂಗಾದಲ್ಲಿ ಮಿಂಚಿದ ಅಂಬಾನಿ ಹಿರಿ ಸೊಸೆ!

First Published | Mar 4, 2024, 10:58 AM IST

ಗುಜರಾತ್‌ನ ಜಾಮ್ನಾನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಪೂರ್ವ ಸಂಭ್ರಮಾಚರಣೆಗಳು ನಡೆಯುತ್ತಿವೆ. ಅಂಬಾನಿ ಕುಟುಂಬ ಸದಸ್ಯರು ಗ್ರ್ಯಾಂಡ್ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಅಂಬಾನಿ ಹಿರಿ ಸೊಸೆ ಶ್ಲೋಕಾ ಲುಕ್ ಕಣ್ಣು ಕೋರೈಸುವಂತಿದೆ.

ಗುಜರಾತ್‌ನ ಜಾಮ್ನಾನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಪೂರ್ವ ಸಂಭ್ರಮಾಚರಣೆಗಳು ನಡೆಯುತ್ತಿವೆ. ಅಂಬಾನಿ ಕುಟುಂಬ ಸದಸ್ಯರು ಗ್ರ್ಯಾಂಡ್ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಅಂಬಾನಿ ಹಿರಿ ಸೊಸೆ ಶ್ಲೋಕಾ ಲುಕ್ ಕಣ್ಣು ಕೋರೈಸುವಂತಿದೆ.

ಅಂಬಾನಿ ಕುಟುಂಬದ ಹಿರಿಯ ಸೊಸೆಯಾದ ಶ್ಲೋಕಾ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಸಮಾರಂಭಕ್ಕೆ ಹೇಳಿ ಮಾಡಿಸಿದ ವಸ್ತ್ರವಿನ್ಯಾಸದಿಂದ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದರು. ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಶ್ಲೋಕಾ ಮೆಹ್ತಾ ಗ್ರ್ಯಾಂಡ್ ಗೋಲ್ಡನ್ ಲೆಹಂಗಾ ಧರಿಸಿದ್ದರು.

Tap to resize

ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಕಸ್ಟಮ್-ಮೇಡ್ ಗೋಲ್ಡನ್ ಲೆಹೆಂಗಾದಲ್ಲಿ ಅಂಬಾನಿ ಹಿರಿ ಸೊಸೆ ಶ್ಲೋಕಾ ಮೆಹ್ತಾರನ್ನು ಅಲಂಕರಿಸಲಾಗಿತ್ತು. ಗಿಲ್ಡೆಡ್ ಚಿನ್ನದ ಬಣ್ಣದ ಪ್ಯಾಲೆಟ್‌ನ್ನು ಒಳಗೊಂಡ ಸ್ಕರ್ಟ್ ಹಾಗೂ ಬ್ಲೌಸ್‌ನ್ನು ಅಂಬಾನಿ ಹಿರಿ ಸೊಸೆ ಧರಿಸಿದ್ದರು. 

ಕಂಪ್ಲೀಟ್‌ ಗೋಲ್ಡನ್ ಬಣ್ಣದಲ್ಲಿ ಸಿಲ್ವರ್ ಕಸೂತಿ ಇರುವ ಹೆವಿ ಲೆಹಂಗಾವನ್ನು ಶ್ಲೋಕಾ ಧರಿಸಿದ್ದರು. ಇದು ಸಂಪೂರ್ಣವಾಗಿ ಚಿನ್ನದಿಂದ ನೇಯ್ದಿರುವಂತೆಯೇ ಗೋಚರಿಸುತ್ತಿತ್ತು. 

ಚಿನ್ನದ ಬಣ್ಣದ ಲೆಹಂಗಾ ಜೊತೆ ಶ್ಲೋಕಾ, ವಜ್ರದ ಕಿವಿಯೋಲೆ-ನೆಕ್ಲೇಸ್ ಸೆಟ್‌, ಮಾಂಗ್‌ಟೀಕಾವನ್ನು ಧರಿಸಿದ್ದರು. ಇದು ಆಕೆಯ ಗ್ರ್ಯಾಂಡ್‌ ಲುಕ್‌ಗೆ ರಾಜಮನೆತನದ ಆಕರ್ಷಣೆಯನ್ನು ಸೇರಿಸಿತು.

ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ ಪುನೀತ್ ಬಿ ಸೈನಿ, Instagramನಲ್ಲಿ ಹಂಚಿಕೊಂಡಿರುವ ಸುಂದರವಾದ ಚಿತ್ರಗಳಲ್ಲಿ ಶ್ಲೋಕಾ ಮೆಹ್ತಾರ ಬೆರಗುಗೊಳಿಸುವ ಸೌಂದರ್ಯವನ್ನು ನೋಡಬಹುದಾಗಿದೆ. ಇದಕ್ಕೆ 'ಗ್ಲಿಟ್ಜ್ ಮತ್ತು ಗ್ಲಾಮರ್‌ನಿಂದ ತುಂಬಿದ ರಾತ್ರಿ' ಎಂದು ಶೀರ್ಷಿಕೆ ನೀಡಲಾಗಿದೆ.

ಸ್ಟೈಲಿಸ್ಟ್ ದಿಯಾ ಮೆಹ್ತಾ ಜತಿಯಾ, ಶ್ಲೋಕಾ ಮೆಹ್ತಾ ಸ್ಟೈಲಿಶ್ ಆಗಿದ್ದು, ಪ್ರಿಯಾಂಕಾ ಬೋರ್ಕರ್ ಮತ್ತು ಕೇಶ ಪಟೇಲ್ ಹೇರ್‌ಸ್ಟೈಲಿಶ್ ಆಗಿದ್ದಾರೆ. ತಮ್ಮ ಗ್ರ್ಯಾಂಡ್‌ ಲುಕ್‌ನಿಂದ ಅಂಬಾನಿ ಕಿರಿ ಸೊಸೆ ಎಲ್ಲರ ಮನಗೆದ್ದಿದ್ದಂತೂ ಸುಳ್ಳಲ್ಲ.

Latest Videos

click me!