ನೀತಾ ಅಂಬಾನಿ ಬಳಿಯಿದೆ ಪ್ರಪಂಚದ ಅತೀ ಕಾಸ್ಟ್ಲೀ ವಾಚ್‌, ಅಬ್ಬಬ್ಬಾ ಬೆಲೆ ಕೇಳಿದ್ರೆ ತಲೆ ಸುತ್ತುತ್ತೆ!

First Published | Nov 26, 2023, 12:18 PM IST

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಅಪರೂಪದ ಮತ್ತು ಅತಿ ದುಬಾರಿ ವಸ್ತುಗಳ ಸಂಗ್ರಹವನ್ನು ಹೊಂದಿದ್ದಾರೆ. ಹಾಗೆಯೇ ಅವರು ಇತ್ತೀಚಿಗೆ ಪಾರ್ಟಿಯೊಂದರಲ್ಲಿ ಧರಿಸಿದ ವಾಚ್‌ ಎಲ್ಲರ ಗಮನ ಸೆಳೆದಿದೆ. ಅದರ ಬೆಲೆ ಎಷ್ಟೂಂತ ಗೊತ್ತಾದ್ರೆ ನೀವು ದಂಗಾಗೋದು ಖಂಡಿತ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಅಪರೂಪದ ಮತ್ತು ಅತಿ ದುಬಾರಿ ವಸ್ತುಗಳ ಸಂಗ್ರಹವನ್ನು ಹೊಂದಿದ್ದಾರೆ. ಅವರ ಕಾಸ್ಟ್ಲೀ ಡ್ರೆಸ್, ಬ್ಯಾಗ್‌, ಚಪ್ಪಲ್‌,
ಆಸೆಸ್ಸರೀಸ್ ಕಲೆಕ್ಷನ್ ಆಗಾಗ ಎಲ್ಲರೂ ನಿಬ್ಬೆರಗಾಗುವಂತೆ ಮಾಡುತ್ತದೆ.

ಅಂಬಾನಿ ಕುಟುಂಬ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ನೀತಾ ಅಂಬಾನಿ ಈ ಅಪರೂಪದ ದುಬಾರಿ ವಾಚ್‌ನ್ನು ಧರಿಸಿದ್ದರು. ಸುಂದರವಾದ ವಾಚ್‌ ಲಿಮಿಟೆಡ್‌ ಅಡಿಶನ್ ಆಗಿದೆ. ಈ ವಾಚ್‌ ವಿಶಿಷ್ಟವಾಗಿದ್ದು ಎಲ್ಲರ ಗಮನ ಸೆಳೆದಿದೆ.

Tap to resize

ಇತ್ತೀಚಿಗೆ ನೀತಾ ಅಂಬಾನಿ, ಮಗಳು ಇಶಾ ಅಂಬಾನಿ ಅವಳಿಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆಯುವಂಥಾ ವಾಚ್‌ನ್ನು ಧರಿಸಿದ್ದರು. 
Instagram ಖಾತೆಯ indianhorology ಗುರುತಿಸಿದಂತೆ, ನೀತಾ ಅಂಬಾನಿ ಅವರು ಜಾಕೋಬ್ ಮತ್ತು ಕೋ ಆಸ್ಟ್ರೋನೊಮಿಯಾ ಫ್ಲ್ಯೂರ್ಸ್ ಡಿ ಜಾರ್ಡಿನ್ ವಾಚ್ ಅನ್ನು ಹೊಂದಿದ್ದಾರೆ. ಅದರ ಬೆಲೆ 3 ಕೋಟಿ ರೂ.ಗಿಂತ ಹೆಚ್ಚು.

ಸೂಕ್ಷ್ಮವಾದ ಚಿಟ್ಟೆ ಹಾರುವ ಟೂರ್‌ಬಿಲ್ಲನ್, ಸಮಯ ಪ್ರದರ್ಶನ ಮತ್ತು ಮೇಲಿನ ಹಂತದ ಗುಲಾಬಿ ನೀಲಮಣಿ ಗಾಳಿಪಟದ ಆಕಾರದ ಹೂವುಗಳು ಹತ್ತು ನಿಮಿಷಗಳಲ್ಲಿ ಡಯಲ್ ಸುತ್ತಲೂ ಪ್ರದಕ್ಷಿಣಾಕಾರವಾಗಿ ತಿರುಗುತ್ತವೆ, ಆದರೆ ಗುಲಾಬಿ ನೀಲಮಣಿಗಳೊಂದಿಗೆ ಹೊಂದಿಸಲಾದ ಮದರ್-ಆಫ್-ಪರ್ಲ್ ಬೇಸ್ ಅದೇ ವೇಗದಲ್ಲಿ ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ.

ಫ್ಲ್ಯೂರ್ಸ್ ಡಿ ಜಾರ್ಡಿನ್ ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ತಿರುಗುವ ಬೇಸ್ ಡಯಲ್‌ನ ಮೇಲಿರುವ ಅಂಶಗಳನ್ನು ಒಳಗೊಂಡಿದೆ. ಡಯಲ್‌ನ ಮೇಲೆ ಫ್ಲೈಯಿಂಗ್ ಟೂರ್‌ಬಿಲ್ಲನ್, ಟೈಮ್ ಡಿಸ್‌ಪ್ಲೇ ಮತ್ತು ಮೂರು ರತ್ನದ ಹೂವುಗಳನ್ನು ಹೊಂದಿರುವ ಫ್ರೇಮ್ ಇದೆ. ಇದು ಹತ್ತು ನಿಮಿಷಗಳಲ್ಲಿ ಪ್ರದಕ್ಷಿಣಾಕಾರವಾಗಿ ತಿರುಗುತ್ತದೆ. ಹತ್ತು ನಿಮಿಷಗಳಲ್ಲಿ ಡಯಲ್ ಸುತ್ತಲೂ ಹೋಗುವಾಗ ಹೆಚ್ಚುವರಿ ರತ್ನದ ಹೂವು ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ.

ಇದು ಸುಂದರವಾದ ಹೂವುಗಳ ಡಿಸೈನ್‌ನ್ನು ಒಳಗೊಂಡಿದೆ. 18k ಗುಲಾಬಿ ಚಿನ್ನದ ಕೇಸ್ ಗುಲಾಬಿ ನೀಲಮಣಿಗಳೊಂದಿಗೆ ಬೆಜೆಲ್ ಮತ್ತು ಒಳಗಿನ ಉಂಗುರವನ್ನು ಹೊಂದಿದೆ.  288-ಮುಖದ ಟ್ಸಾವೊರೈಟ್ ಜಾಕೋಬ್ ಕಟ್ ಇದರ ವಿಶೇಷತೆ.

ಮದುವೆಯೊಂದರಲ್ಲಿ ನೀತಾ ಅಂಬಾನಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಇಡೀ ಪ್ರಪಂಚದ ಅತ್ಯಂತ ದುಬಾರಿ ಸೀರೆ ಎಂದು ಪರಿಗಣಿಸಲಾಗಿದೆ. 2015ರಲ್ಲಿ, ಮಾಜಿ ರಾಜ್ಯಸಭಾ ಸಂಸದ ಪರಿಮಳಾ ನಾಥ್ವಾನಿ ಅವರ ಮಗನ ಮದುವೆಯಲ್ಲಿ ನೀತಾ ಈ ಸೀರೆ ಧರಿಸಿದ್ದರು. ಈ ಸೀರೆ ಗಿನ್ನೆಸ್ ಪುಸ್ತಕದಲ್ಲಿ ಅತ್ಯಂತ ದುಬಾರಿ ಸೀರೆ ಎಂಬ ದಾಖಲೆಯನ್ನು ಸಹ ಹೊಂದಿದೆ.

ಅದ್ದೂರಿ ಸೀರೆಯನ್ನು ಚೆನ್ನೈ ಸಿಲ್ಕ್ಸ್‌ನ ನಿರ್ದೇಶಕ ಶಿವಲಿಂಗಂ ವಿನ್ಯಾಸಗೊಳಿಸಿದ್ದಾರೆ. ಗುಲಾಬಿ ಬಣ್ಣದ ಕೈಯಿಂದ ಕಸೂತಿ ಮಾಡಿದ ಸೀರೆಯು ನಿಜವಾದ ಮುತ್ತುಗಳು, ಪಚ್ಚೆಗಳು, ಮಾಣಿಕ್ಯಗಳು, ಪುಖರಾಜ್ ಮತ್ತು ಇತರ ಬೆಲೆಬಾಳುವ ಕಲ್ಲುಗಳಿಂದ ಅಲಂಕರಿಸಲ್ಪಟ್ಟಿದೆ. ಈ ಸೀರೆಯ ಬೆಲೆ ಬರೋಬ್ಬರಿ 40 ಲಕ್ಷ ರೂ.

Latest Videos

click me!