Fashion Tips: ಸೀರೆ ಭಾರತೀಯ ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಉಡುಗೆಯಾಗಿದ್ದು, ಯಾವುದೇ ಸಂದರ್ಭಕ್ಕೂ ಅದ್ಭುತವಾದ ಸೊಬಗನ್ನು ನೀಡುತ್ತದೆ; ಆದರೂ, ನಿಮ್ಮ ನೆಚ್ಚಿನ ಸೀರೆಯನ್ನು ಧರಿಸಿದ ನಂತರವೂ, ಟಾಲ್ ಆಗಿ ಕಾಣದೇ ಇದ್ದಾಗ ಈ ಟ್ರಿಕ್ಸ್ ಟ್ರೈ ಮಾಡಿ
ನೀವು ಸೀರೆಯಲ್ಲಿ ಎತ್ತರವಾಗಿ ಮತ್ತು ಸ್ಲಿಮ್ ಆಗಿ ಕಾಣಬೇಕೆಂದು ಬಯಸಿದರೆ, ಕೇವಲ ಬಟ್ಟೆಯಿಂದ ಸಾಧ್ಯ ಇಲ್ಲ. ನೀವು ಅದನ್ನು ಉಡುವ ವಿಧಾನವೂ ಅಷ್ಟೇ ಮುಖ್ಯ. ನಾವು ಸೀರೆಯನ್ನು ಉಡುವಾಗ ಕೆಲವೊಂದು ಸಣ್ಣ ತಪ್ಪುಗಳನ್ನು ಮಾಡುತ್ತೇವೆ, ಅದು ನಮ್ಮನ್ನು ದಪ್ಪ ಅಥವಾ ಕುಳ್ಳಗೆ ಕಾಣುವಂತೆ ಮಾಡುತ್ತದೆ. ಹಾಗಾಗಿ ನಿವು ಯಾವ ಮಿಸ್ಟೇಕ್ ಅವಾಯ್ಡ್ ಮಾಡಬೇಕು ನೋಡೋಣ.
26
ಸೀರೆ ಉಟ್ಟ ನಂತರ ಪಾದರಕ್ಷೆ ಹಾಕಿಕೊಳ್ಳುವುದು
ಹೆಚ್ಚಿನ ಮಹಿಳೆಯರು ಮಾಡುವ ಸಾಮಾನ್ಯ ತಪ್ಪು ಇದು. ಸೀರೆ ಉಡಲು ಪ್ರಾರಂಭಿಸುವ ಮೊದಲು ಯಾವಾಗಲೂ ನಿಮ್ಮ ಸ್ಯಾಂಡಲ್ ಅಥವಾ ಹೀಲ್ಸ್ ಅನ್ನು ಧರಿಸಿ. ನೀವು ಸೀರೆ ಉಟ್ಟ ನಂತರ ಹೀಲ್ಸ್ ಧರಿಸಿದರೆ, ಸೀರೆಯು ನಿಮ್ಮ ಪಾದಗಳಿಂದ ಮೇಲಕ್ಕೆ ನಿಂತುಕೊಳ್ಳುತ್ತದೆ. ಇದು ಸೀರೆಯ ಡ್ರಾಪ್ ಅನ್ನು ಹಾಳುಮಾಡುವುದಲ್ಲದೆ ನಿಮ್ಮ ಕಾಲುಗಳನ್ನು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ, ಇದರಿಂದಾಗಿ ನೀವು ಕುಳ್ಳಗೆ ಕಾಣುತ್ತೀರಿ. ಹಾಗಾಗಿ ಹೀಲ್ಸ್ ಧರಿಸಿ ಅದಕ್ಕೆ ತಕ್ಕಂತೆ ಸೀರೆಯನ್ನು ಕೆಳಗಿನವರೆಗೂ ಡ್ರೇಪ್ ಮಾಡಿ.
36
ಬಹಳ ಅಗಲವಾದ ನೆರಿಗೆ ಹಿಡಿಯುವುದು
ಸೀರೆಯ ಮುಂಭಾಗದ ನೆರಿಗೆಗಳು ನಿಮ್ಮ ಸಂಪೂರ್ಣ ಲುಕ್ ಬದಲಾಯಿಸಬಹುದು. ಬೇಗನೆ ರೆಡಿಯಾಗುವ ಅವಸರದಲ್ಲಿ ನಾವು ಹೆಚ್ಚಾಗಿ ಅಗಲವಾದ ನೆರಿಗೆ ಹಿಡಿಯುತ್ತೇವೆ. ಇದರಿಂದಾಗಿ ಹೊಟ್ಟೆಯ ಬಳಿ, ಹೆಚ್ಚು ಬಟ್ಟೆ ಸಂಗ್ರಹವಾಗುತ್ತದೆ. ಇದು ಹೆವಿ ಲುಕ್ ನೀಡುತ್ತದೆ. ಸ್ಲಿಮ್ ಆಗಿ ಕಾಣಲು, ಯಾವಾಗಲೂ ತೆಳುವಾದ, ಅಚ್ಚುಕಟ್ಟಾಗಿ , ಒಂದೇ ರೀತಿಯಾಗಿರುವ ಪ್ಲೀಟ್ಸ್ ಮಾಡಿ ಚೆನ್ನಾಗಿ ಪಿನ್ ಮಾಡಿ.ಇದರಿಂದ ನೀವು ಸ್ಲಿಮ್ ಆಗಿ ಕಾಣುವಿರಿ.
ನಿಮ್ಮ ಪೆಟಿಕೋಟ್ ಅಥವಾ ಶೇಪ್‌ವೇರ್‌ನ ಸ್ಥಾನ ಕೂಡ ನಿಮ್ಮ ಎತ್ತರವನ್ನು ನಿರ್ಧರಿಸುತ್ತದೆ. ಸೀರೆಯನ್ನು ನಾಭಿಗಿಂತ ತುಂಬಾ ಮೇಲೆ ಕಟ್ಟುವುದರಿಂದ ನಿಮ್ಮ ಮೇಲ್ಭಾಗವು ಚಿಕ್ಕದಾಗಿ ಕಾಣುತ್ತದೆ, ಅದನ್ನು ತುಂಬಾ ಕೆಳಗೆ ಕಟ್ಟುವುದರಿಂದ ಲುಕ್ ಹಾಳಾಗುತ್ತದೆ ಮತ್ತು ನಡೆಯಲು ಕಷ್ಟವಾಗುತ್ತದೆ. ಹಾಗಾಗಿ ಯಾವಾಗಲೂ ನಾಭಿಯ ಸುತ್ತಲೂ ಅಥವಾ ಸ್ವಲ್ಪ ಕೆಳಗೆ ಕಟ್ಟಿಕೊಳ್ಳಿ. ಪೆಟಿಕೋಟ್ ಬದಲಿಗೆ 'ಸೀರೆ ಶೇಪ್‌ವೇರ್' ಧರಿಸಿ. ಇದು ಸ್ಲಿಮ್ ಲುಕ್ ನೀಡುತ್ತದೆ.
56
ಪಲ್ಲು ಉದ್ದವಾಗಿರಲಿ
ನಾವು ಸಾಮಾನ್ಯವಾಗಿ ಪಲ್ಲು ಹಾಕುವಾಗ ಅದನ್ನು ಚಿಕ್ಕದಾಗಿ ಮಾಡುತ್ತೇವೆ. ನೀವು ಎತ್ತರವಾಗಿ ಕಾಣಲು ಬಯಸಿದರೆ, ಯಾವಾಗಲೂ ಪಲ್ಲು ಉದ್ದವಾಗಿಡಿ. ಏಕೆಂದರೆ ಉದ್ದವಾದ ಪಲ್ಲು ಲಂಬ ರೇಖೆಯನ್ನು ಸೃಷ್ಟಿಸುತ್ತದೆ, ಇದು ನಿಮ್ಮನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಪಲ್ಲು ಪ್ಲೀಟ್‌ಗಳನ್ನು ತುಂಬಾ ಬಿಗಿಯಾಗಿ ಪಿನ್ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ನಿಮ್ಮ ಭುಜಗಳನ್ನು ಅಗಲವಾಗಿ ಮತ್ತು ಹೆವಿಯಾಗಿ ಕಾಣುವಂತೆ ಮಾಡುತ್ತದೆ.
66
ಆಯ್ಕೆ ಮಾಡುವ ಸೀರೆಯೂ ಮುಖ್ಯ
ಡ್ರೇಪಿಂಗ್ ಸ್ಟೈಲ್ ಜೊತೆಗೆ, ಬಟ್ಟೆಯ ಬಗ್ಗೆಯೂ ಗಮನ ಕೊಡಿ. ಚಿಫೋನ್, ಜಾರ್ಜೆಟ್ ಮತ್ತು ಸ್ಯಾಟಿನ್ ನಂತಹ ಬಟ್ಟೆಗಳು ದೇಹಕ್ಕೆ ಅಂಟಿಕೊಳ್ಳುತ್ತವೆ, ಇದು ನಿಮ್ಮನ್ನು ತೆಳ್ಳಗೆ ಮತ್ತು ಎತ್ತರವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.