ಅಪ್ಪಿ ತಪ್ಪಿಯೂ ಲಿಪ್ ಸ್ಟಿಕ್ ಈ ರೀತಿ ಬಳಕೆ ಮಾಡಲೇಬೇಡಿ

Published : Mar 11, 2024, 04:58 PM IST

ನೀವು ಯಾವತ್ತಾದ್ರೂ ಪರ್ಫೆಕ್ಟ್ ಲುಕ್ ಪಡೆಯೋದಕ್ಕೆ ನಿಮ್ಮ ನೆಚ್ಚಿನ ಪಿಂಕ್ ಲಿಪ್ ಸ್ಟಿಕ್ ಅನ್ನು ನಿಮ್ಮ ಕೆನ್ನೆಗಳು ಮತ್ತು ಕಣ್ಣುರೆಪ್ಪೆಗಳಿಗೆ ಹಚ್ಚಿದ್ದೀರಾ? ಇದು ನಾವೆಲ್ಲರೂ ಇಷ್ಟಪಡುವಂತಹ ಹ್ಯಾಕ್ ಆಗಿದೆ, ಆದರೆ ಸ್ಕಿನ್ ಕೇರ್ ಎಕ್ಸ್ ಪರ್ಟ್ ಮಾತ್ರ ಇಂತಹ ತಪ್ಪು ಮಾಡಬೇಡಿ ಅಂದಿದ್ದಾರೆ. 

PREV
110
ಅಪ್ಪಿ ತಪ್ಪಿಯೂ  ಲಿಪ್ ಸ್ಟಿಕ್ ಈ ರೀತಿ ಬಳಕೆ ಮಾಡಲೇಬೇಡಿ

ಮೇಕಪ್ ಸಾಮಾಗ್ರಿಗಳು (makeup products) ತುಂಬಾನೆ ದುಬಾರಿಯಾಗಿದೆ, ಒಂದೇ ಸಲಕ್ಕೆ ದುಬಾರಿ ಮೇಕಪ್ ಖರೀದಿಸಿದರೆ, ಅದರಿಂದ ಜೇಬಿಗೆ ಕತ್ತರಿಯೂ ಬೀಳುತ್ತೆ. ನಮ್ಮ ಸೌಂದರ್ಯವರ್ಧಕ ಉತ್ಪನ್ನಗಳು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಿದಾಗ, ನಾವು ಅದನ್ನು ಖಂಡಿತವಾಗಿಯೂ ಇಷ್ಟಪಡ್ತೀವಿ ಅಲ್ವಾ?.ಹೆಚ್ಚಾಗಿ ನಾವು, ನಮ್ಮ ಲಿಪ್ ಸ್ಟಿಕ್ ಅನ್ನು ಬ್ಲಶ್ ಅಥವಾ ಐಶಾಡೋ ಆಗಿ ಬಳಸ್ತೀವಿ, ಆದರೆ ಇದು ಎಷ್ಟೊಂದು ಹಾನಿ ಮಾಡುತ್ತೆ ಗೊತ್ತಾ?

210

ನಾವು ಹೆಚ್ಚಾಗಿ ಈ ಬ್ಯೂಟಿ ಪ್ರಾಡಕ್ಟ್  ಗಳನ್ನು ಬಳಕೆ ಮಾಡೋವಾಗ ಹೆಚ್ಚಾಗಿ ಬೇರೆ ಬೇರೆ ಹ್ಯಾಕ್ ಗಳನ್ನ ಟ್ರೈ ಮಾಡೋದಕ್ಕೆ ಇಷ್ಟಪಡ್ಟೀವಿ ಅಲ್ವಾ? ಆದರೆ ಈ ಹ್ಯಾಕ್ ಗಳಿಂದ ಚರ್ಮಕ್ಕೆ ಹಾನಿಯಾಗುತ್ತೆ ಅನ್ನೋದು ನಿಮಗೆ ಗೊತ್ತೇ? ಲಿಪ್ ಸ್ಟಿಕ್ ನ್ನು ಬ್ಲಶ್ ಅಥವಾ ಐಶಾಡೋ (blush or eye shadow) ಆಗಿ ಬಳಕೆ ಮಾಡೋದ್ರಿಂದ ತುಂಬಾನೆ ಹಾನಿಯಾಗುತ್ತೆ. ಬನ್ನಿ ಅದರ ಬಗ್ಗೆ ತಿಳಿಯೋಣ. 
 

310

ಲಿಪ್ ಸ್ಟಿಕ್ ನಲ್ಲಿ ಏನಿದೆ?: ತಜ್ಞರು ಹೇಳುವಂತೆ ತುಟಿ ಉತ್ಪನ್ನಗಳು ಅಥವಾ ಲಿಪ್ ಸ್ಟಿಕ್  (lipstick)ಸಾಮಾನ್ಯವಾಗಿ ಮೇಣಗಳು, ಎಣ್ಣೆಗಳು, ವರ್ಣದ್ರವ್ಯಗಳು ಮತ್ತು ಎಮೋಲಿಯಂಟ್ಗಳ ಕಾಂಬಿನೇಶನ್ ಆಗಿದೆ. ಅಷ್ಟೇ ಆಲ್ಲ ಇದರಲ್ಲಿ ಜೇನು ಮೇಣ, ಕಾರ್ನೌಬಾ ಮೇಣ, ಹರಳೆಣ್ಣೆ ಮತ್ತು ಖನಿಜ ತೈಲದಂತಹ ವಿವಿಧ ಎಣ್ಣೆಗಳು, ಬಣ್ಣಕಾರಕಗಳು ಮತ್ತು ಶಿಯಾ ಬಟರ್ ಅಥವಾ ಲ್ಯಾನೋಲಿನ್ ನಂತಹ ಮಾಯಿಶ್ಚರೈಸಿಂಗ್ ಏಜೆಂಟ್ ಗಳು ಸೇರಿವೆ. ಜೊತೆಗೆ ಸುಗಂಧಕ್ಕಾಗಿ ಇತರ ಪದಾರ್ಥಗಳನ್ನು ಸಹ ಸೇರಿಸುತ್ತಾರೆ
 

410

ಟ್ರೆಂಡ್ ಗಳನ್ನು ಕಣ್ಣು ಮುಚ್ಚಿ ಫಾಲೋ ಮಾಡ್ಬೇಡಿ: ಆನ್ ಲೈನ್ ನಲ್ಲಿ ಮುಖದ ಇತರ ಭಾಗಗಳಿಗೆ ಲಿಪ್ ಸ್ಟಿಕ್ ಬಳಸುವುದನ್ನು  ನೀವು ನೊಡಿರುತ್ತೀರಿ, ಅದು ನಿಮಗೂ ಸಹ ಇಷ್ಟವಾಗುತ್ತೆ. ಆದರೆ ಇದನ್ನು ನೀವು ಫಾಲೋ ಮಾಡೋದು ತಪ್ಪು. ಯಾಕಂದ್ರೆ ಲಿಪ್ ಸ್ಟಿಕ್ ಗಳಲ್ಲಿ ಹೆಚ್ಚು ವರ್ಣದ್ರವ್ಯ ಮತ್ತು ಸುಗಂಧ ದ್ರವ್ಯ ಇರೋದರಿಂದ, ಅವುಗಳನ್ನು ಕಣ್ಣುರೆಪ್ಪೆಗಳ ಮೇಲೆ ಹಚ್ಚೋದು ಅಪಾಯ ಎಂದು ಹೇಳಲಾಗುತ್ತದೆ. 

510

ಕಣ್ಣುರೆಪ್ಪೆಗಳು ದೇಹದಲ್ಲಿನ ತೆಳುವಾದ ಚರ್ಮವನ್ನು ಹೊಂದಿರುತ್ತವೆ ಮತ್ತು ಆದ್ದರಿಂದ, ಅವು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಲಿಪ್ ಸ್ಟಿಕ್ ಗಳಲ್ಲಿನ  ಪೆರುವಿನ ಬಾಲ್ಸಮ್ (perfumes), ಇಸಿಸಿನ್ ಬಣ್ಣಗಳು, ಮೆಂಥೋಲ್ ಅಥವಾ ಸಿನಮನ್ ಆಸಿಡ್ ಮೊದಲಾದ ಅಂಶಗಳಿವೆ, ಅವು ಕಣ್ಣಿನ ರೆಪ್ಪೆಯ ಚರ್ಮದ ಉರಿಯೂತಕ್ಕೆ ಕಾರಣವಾಗಬಹುದು.
 

610

ತುಟಿ ಉತ್ಪನ್ನಗಳನ್ನು (lip products)ಬ್ಲಶ್ ಅಥವಾ ಐಶಾಡೋ ಆಗಿ ಬಳಸುವಾಗ ನೀವು ಜಾಗರೂಕರಾಗಿರಬೇಕು. ಎಂದು ಚರ್ಮರೋಗ ತಜ್ಞರು ಎಚ್ಚರಿಸುತ್ತಾರೆ. ಇದರಿಂದ ಇನ್ನು ಏನೆಲ್ಲಾ ಅಡ್ಡಪರಿಣಾಮಗಳಿವೆ ನೋಡಿ… ಇನ್ನು ಮುಂದೆ ಲಿಪ್ ಸ್ಟಿಕ್ ನ್ನು ಐಶ್ಯಾಡೋ, ಬ್ಲಶ್ ಆಗಿ ಬಳಕೆ ಮಾಡೋದನ್ನು ಬಿಡಿ.. 

ಕಿರಿಕಿರಿ (irritation): ಸುಗಂಧ ದ್ರವ್ಯಗಳು ಅಥವಾ ಕೆಲವು ಬಣ್ಣಗಳಂತಹ ಲಿಪ್ ಪ್ರಾಡಕ್ಟ್ ಗಳಲ್ಲಿನ  ಪದಾರ್ಥಗಳು ಕಣ್ಣುಗಳು ಅಥವಾ ಕೆನ್ನೆಗಳಂತಹ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಕಿರಿಕಿರಿಗೊಳಿಸಬಹುದು.
 

710

ಅಲರ್ಜಿಯ ಪ್ರತಿಕ್ರಿಯೆಗಳು: ತುಟಿ ಉತ್ಪನ್ನಗಳಲ್ಲಿನ ನಿರ್ದಿಷ್ಟ ಪದಾರ್ಥಗಳಿಗೆ ನೀವು ಅಲರ್ಜಿಯನ್ನು ಹೊಂದಿದ್ದರೆ, ಅವುಗಳನ್ನು ಇತರ ಮುಖದ ಪ್ರದೇಶಗಳಿಗೆ ಹಚ್ಚೋದರಿಂದ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗಬಹುದು, ಇದರ ಪರಿಣಾಮವಾಗಿ ಕೆಂಪಾಗುವಿಕೆ, ತುರಿಕೆ ಅಥವಾ ಊತ ಉಂಟಾಗುತ್ತದೆ.
 

810

ಬ್ರೇಕ್ಔಟ್ಗಳು: ಕೆಲವು ತುಟಿ ಉತ್ಪನ್ನಗಳು ಕಾಮೆಡೋಜೆನಿಕ್ ಪದಾರ್ಥಗಳನ್ನು ಹೊಂದಿರುತ್ತವೆ, ಅದು ರಂಧ್ರಗಳನ್ನು ಮುಚ್ಚುತ್ತದೆ ಮತ್ತು ತೈಲ ಗ್ರಂಥಿಗಳನ್ನು ಹೊಂದಿರುವ ಪ್ರದೇಶಗಳಿಗೆ ಇದನ್ನು ಹಚ್ಚಿದ್ರೆ ಮೊಡವೆ (pimples) ಅಥವಾ ಬಿರುಕುಗಳಿಗೆ ಕಾರಣವಾಗಬಹುದು.
 

910

ಶುಷ್ಕತೆ: ಲಿಪ್ ಸ್ಟಿಕ್ ಗಳು ಹೆಚ್ಚಾಗಿ ತುಟಿಗಳಿಗೆ ಸೂಕ್ತವಾದ ಮಾಯಿಶ್ಚರೈಸಿಂಗ್ ಏಜೆಂಟ್ಗಳನ್ನು ಹೊಂದಿರುತ್ತವೆ, ಆದರೆ ಅವು ಇತರ ಮುಖದ ಪ್ರದೇಶಗಳಿಗೆ ಒಂದೇ ಮಟ್ಟದ ಹೈಡ್ರೇಶನ್ ಒದಗಿಸುವುದಿಲ್ಲ, ಇದು ಶುಷ್ಕತೆಗೆ (dryness)ಕಾರಣವಾಗಬಹುದು.

1010

ನೈರ್ಮಲ್ಯದ ಕಾಳಜಿಗಳು: ತುಟಿಗಳು ಮತ್ತು ಇತರ ಮುಖದ ಪ್ರದೇಶಗಳ ನಡುವೆ ತುಟಿ ಉತ್ಪನ್ನಗಳನ್ನು ಹಂಚಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಎಲ್ಲೆಡೆ ಹರಡಲೂ ಬಹುದು, ಇದು ಸೋಂಕುಗಳು ಅಥವಾ ಮೊಡವೆಗಳಿಗೆ ಕಾರಣವಾಗಬಹುದು.

click me!

Recommended Stories