ವಿಶ್ವ ಸುಂದರಿ Aishwarya Rai ಬ್ಯೂಟಿ ಸೀಕ್ರೆಟ್ ರಿವೀಲ್… ಬೆಳಗ್ಗೆ 5.30ಕ್ಕೆ ಎದ್ದು ಈ ಕೆಲ್ಸ ಮಾಡ್ತಾರಂತೆ

Published : Nov 19, 2025, 03:49 PM IST

Aishwarya Rai Beauty Secret: ಬಾಲಿವುಡ್ ನ ಬ್ಯೂಟಿ ಕ್ವೀನ್, ವಿಶ್ವ ಸುಂದರಿ ನಟಿ ಐಶ್ವರ್ಯಾ ರೈ ಅವರ ಸೌಂದರ್ಯವನ್ನು ನೋಡಿದರೆ, ಅವರಿಗೆ 52 ವರ್ಷ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅವರ ಹೊಳೆಯುವ ಚರ್ಮದ ರಹಸ್ಯ ಇದೀಗ ರಿವೀಲ್ ಆಗಿದೆ. ನಟಿ ಬೆಳಗ್ಗೆ 5.30ಕ್ಕೆ ಎದ್ದು ಈ ಕೆಲ್ಸ ಮಾಡ್ತಾರಂತೆ.

PREV
17
ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ

ಬಾಲಿವುಡ್‌ನ ಸುಂದರಿ ಐಶ್ವರ್ಯಾ ರೈ ಇತ್ತೀಚೆಗೆ ತಮ್ಮ 52 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದರೆ ಅವರ ಫಿಟ್‌ನೆಸ್ ನೋಡಿದರೆ, ಅವರಿಗೆ ಇಷ್ಟು ವಯಸ್ಸಾಗಿದೆ ಎಂದು ಹೇಳೊದಕ್ಕೆ ಸಾಧ್ಯವಿಲ್ಲ. ಐಶ್ವರ್ಯಾ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ಸರಿಯಾದ ದಿನಚರಿಯನ್ನು ಅನುಸರಿಸುತ್ತಾರೆ. ನಟಿಯ ಬ್ಯೂಟಿ ಸೀಕ್ರೆಟ್ ದುಬಾರಿ ಮೇಕಪ್ ಅಲ್ಲ, ಈ ಸರಳ ಉಪಾಯಗಳು.

27
ಐಶ್ವರ್ಯ ರೈ ದಿನಚರಿ

ಐಶ್ವರ್ಯ ಪ್ರತಿದಿನ ಬೆಳಿಗ್ಗೆ 5:30 ಕ್ಕೆ ಎದ್ದೇಳುತ್ತಾರೆ. ಇದು ಅವರ ದೀರ್ಘಕಾಲದ ಅಭ್ಯಾಸ. ಮಹಿಳೆಯರು ಏಕಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಬೇಕು ಅನ್ನೋದನ್ನು ನಟಿ ನಂಬುತ್ತಾರೆ. ಅವರು ಒಂದೇ ದಿನದಲ್ಲಿ ತಾಯಿ, ಹೆಂಡತಿ, ಮಗಳು ಮತ್ತು ನಟಿಯ ಪಾತ್ರ ನಿರ್ವಹಿಸುವುದರಿಂದ ಐಶ್ವರ್ಯ ಮಲ್ಟಿಪಲ್ ಟಾಸ್ಕರ್ ಅಂತಾನೆ ಹೇಳಬಹುದು.

37
ಐಶ್ವರ್ಯಾ ಹೇಗೆ ಇಷ್ಟೊಂದು ಫಿಟ್ ಆಗಿರುತ್ತಾರೆ?

ಫಿಟ್ ಆಗಿರಲು ಸಮತೋಲನ ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಐಶ್ವರ್ಯ. ಮಗಳು ಆರಾಧ್ಯಳನ್ನು ಶಾಲೆಗೆ ಬಿಡುವುದರಿಂದ ಹಿಡಿದು ಶೂಟಿಂಗ್ ವರೆಗೆ, ಎಲ್ಲಾ ಕೆಲಸಗಳ ಜೊತೆಗೆ ಫಿಟ್ನೆಸ್ ಆಕ್ಟಿವಿಟಿಗಳನ್ನು ಬ್ಯಾಲೆನ್ಸ್ ಆಗಿ ಮಾಡಿಕೊಂಡು ಬರುತ್ತಾರೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಐಶ್.

47
ಹೊಳೆಯುವ ಚರ್ಮದ ರಹಸ್ಯವೇನು?

ತಮ್ಮ ಹೊಳೆಯುವ ಚರ್ಮದ ಬಗ್ಗೆ ಮಾತನಾಡುತ್ತಾ, ಮಹಿಳೆಯರು ದಿನವಿಡೀ ಕೆಲಸ ಮಾಡಬೇಕಾಗುತ್ತದೆ, ಇದರಿಂದಾಗಿ ತಮ್ಮ ಚರ್ಮವನ್ನು ಹೈಡ್ರೇಟ್ ಮಾಡುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೆ ಮುಖ್ಯವಾಗಿದೆ ಎಂದು ಐಶ್ವರ್ಯಾ ಹೇಳುತ್ತಾರೆ.

57
ಸಿಂಪಲ್ ಟಿಪ್ಸ್

ಐಶ್ವರ್ಯ ತನ್ನ ಚರ್ಮಕ್ಕಾಗಿ ಸರಳ ರುಟಿನ್ ಅನುಸರಿಸುತ್ತಾರೆ. ಅವರು ಮನೆಮದ್ದುಗಳು ಮತ್ತು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸುತ್ತಾರೆ. ಯಾವಾಗಲೂ ತಮ್ಮ ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ ಮತ್ತು ಮಾಯಿಶ್ಚರೈಸರ್ ಬಳಸುತ್ತಾರೆ.

67
ಬೆಳಗ್ಗೆ ಎದ್ದು ಏನು ಮಾಡ್ತಾರೆ ನಟಿ

ಐಶ್ವರ್ಯ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ನಿಂಬೆ ಮತ್ತು ಜೇನುತುಪ್ಪ ಬೆರೆಸಿದ ನೀರನ್ನು ಕುಡಿಯುವ ಮೂಲಕ ತನ್ನ ದಿನವನ್ನು ಪ್ರಾರಂಭಿಸುತ್ತಾರೆ, ಇದು ಅವರ ಚರ್ಮವನ್ನು ಹೈಡ್ರೇಟ್ ಮಾಡುತ್ತೆ ಮತ್ತು ನಿರ್ವಿಷಗೊಳಿಸುತ್ತದೆ.

77
ಯಾವುದೇ ಡಯಟ್ ಮಾಡುವುದಿಲ್ಲ

ಐಶ್ವರ್ಯಾ ಸರಳವಾದ, ಮನೆಯಲ್ಲಿ ತಯಾರಿಸಿದ ಊಟವನ್ನು ಸೇವಿಸುತ್ತಾರೆ. ಅವರು ಯಾವುದೇ ಡಯಟ್ ಅನುಸರಿಸುವುದಿಲ್ಲ, ಬದಲಾಗಿ ಪೋರ್ಷನ್ ಕಂಟ್ರೋಲ್ ಮತ್ತು ಬ್ಯಾಲೆನ್ಸ್ಡ್ ಆಹಾರ ಸೇವಿಸುವ ಮೂಲಕ ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳುತ್ತಾರೆ. ಯೋಗ ಮತ್ತು ನಡಿಗೆಯ ಮೂಲಕ ಅವರು ತಮ್ಮನ್ನು ತಾವು ಶಕ್ತಿಯುತ, ಶಾಂತ ಮತ್ತು ಆರೋಗ್ಯವಾಗಿರಿಸಿಕೊಳ್ಳುತ್ತಾರೆ. ಜೀವನದಲ್ಲಿ ಸಂತೋಷವಾಗಿರುವುದೇ ಮುಖದ ಹೊಳಪಿಗೆ ಮುಖ್ಯ ಕಾರಣ ಎನ್ನುತ್ತಾರೆ.

Read more Photos on
click me!

Recommended Stories