ಬೆಂಗಳೂರಿನಲ್ಲಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್ ಯೂನಿವರ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಮಿಸ್ ಯೂನಿವರ್ಸ್ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ಗೆಲುವು ಸಾಧಿಸಿದ್ದಾರೆ. Miss universe Karnataka 2026 ಕಿರೀಟವನ್ನು ಬಾಚಿಗೊಂಡಿದ್ದಾರೆ. 38 ಬ್ಯೂಟಿಗಳು ಇದರಲ್ಲಿ ಭಾಗವಹಿಸಿದ್ದರು. ಕೊನೆಗೆ ಲೇಖನಾ ಗೆಲುವು ಸಾಧಿಸಿದ್ದು, ಮೊದಲ ರನ್ನರ್ ಅಪ್ ಸ್ಫೂರ್ತಿ ಶೆಟ್ಟಿ, ಜಾಗೃತಿ ಚೋಪ್ರಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು. ಮಿಸ್ ಟೀನ್ ಟೈಟಲ್‌ಗಾಗಿಯೂ ಸ್ಪರ್ಧೆ ನಡೆಸಲಾಯಿತು. ಸಮೀಕ್ಷಾ ಮಿಸ್ ಟೀನ್ ಆಗಿ ಆಯ್ಕೆಗೊಂಡು ಕಿರೀಟ ಮುಡಿಗೇರಿಸಿಕೊಂಡರೆ, ವರ್ಷಾ ಹಾಗೂ ಆಯುಷ್ಮಾ ಶಾಂಭವಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು.
26
ಏಷ್ಯಾನೆಟ್ ಸುವರ್ಣದ ಜೊತೆ ಸಂದರ್ಶನ
ಈ ಕುರಿತು ಲೇಖನಾ ಅವರು ಏಷ್ಯಾನೆಟ್ ಸುವರ್ಣದ ಜೊತೆ ಮಾತನಾಡಿದ್ದಾರೆ. ಲೇಖನಾ ಹೆಗ್ಡೆ ಅವರು ಮಾಡೆಲ್ ಮತ್ತು ಅಥ್ಲೀಟ್ ಆಗಿ ಗುರುತಿಸಿಕೊಂಡವರು. ಲಂಡನ್ನಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಅಷ್ಟಕ್ಕೂ ತಮಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವ ಆಸೆ ಇರಲಿಲ್ಲ. ಆದರೆ, ಬಾಸ್ಕೆಟ್ ಬಾಲ್ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ ಇತ್ತು. ಆದರೆ ಆಗಿದ್ದೇ ಬೇರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಲೇಖನಾ.
36
ಆಗುವುದೆಲ್ಲಾ ಒಳ್ಳೆಯದ್ದಕ್ಕೇ...
ಆಗುವುದೆಲ್ಲಾ ಒಳ್ಳೆಯದ್ದೇ ಎನ್ನುವ ಮಾತು ಕೆಲವೊಮ್ಮೆ ಕೆಲವರ ಲೈಫ್ನಲ್ಲಿ ನಿಜವಾಗಿ ಬಿಡುತ್ತದೆ. ಅಂಥವರಲ್ಲಿ ಒಬ್ಬರು ಲೇಖನಾ. ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಆಸೆ ಪಟ್ಟಿದ್ದ ಲೇಖನಾ ಅವರಿಗೆ ಬಿದ್ದು ಗಾಯವಾಗಿತ್ತಂತೆ. ಅದಕ್ಕಾಗಿಯೇ ಅವರು ಅಲ್ಲಿ ಕ್ವಾಲಿಫೈ ಆಗಿರಲಿಲ್ಲ. ಹಾಗೆಂದು ಲೇಖನಾ ಕುಗ್ಗಲಿಲ್ಲ. ದೇಶವನ್ನು ಪ್ರತಿನಿಧದಿಸುವ ತಮ್ಮ ಆಸೆಯನ್ನಂತೂ ಈಡೇರಿಸಿಕೊಳ್ಳಲೇಬೇಕು ಎನ್ನುವ ಪಣ ತೊಟ್ಟಾಗಲೇ ಕಂಡದ್ದು ಮಾಡೆಲಿಂಗ್ ಕ್ಷೇತ್ರ.
ಮಾಡೆಲಿಂಗ್ ಆಯ್ದುಕೊಂಡ ಲೇಖನಾ, ಬ್ಯೂಟಿ ಸ್ಪರ್ಧೆ ಗೆದ್ದಿರುವ ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಅವರ ವಿಡಿಯೋಗಳನ್ನೆಲ್ಲಾ ನೋಡಿ, ಛಲ ಬೆಳೆಸಿಕೊಂಡರಂತೆ, ಮಾತನಾಡುವ ಸ್ಟೈಲ್ ಕಲಿತರಂತೆ. ಅದನ್ನೆಲ್ಲಾ ಕಲಿತು ಮಾಡೆಲಿಂಗ್ ಟ್ರೈನಿಂಗ್ ಪಡೆದು ಅದೃಷ್ಟ ಪರೀಕ್ಷೆಗೆ ಮಿಸ್ ಯೂನಿವರ್ಸ್ ಕರ್ನಾಟಕ ಪ್ರತಿನಿಧಿಸಿ, ಕಿರೀಟ ಮುಡಿಲಿಗೇರಿಸಿಕೊಂಡಿದ್ದಾರೆ.
56
ಅಪ್ಪು ಎಂದ್ರೆ ಇಷ್ಟ
ಸದ್ಯ ಮಿಸ್ ಯೂನಿವರ್ಸ್ನಲ್ಲಿ ಭಾರತವನ್ನು ಇವರು ಪ್ರತಿನಿಧಿಸಲಿದ್ದಾರೆ. ಜೊತೆಗೆ ಕ್ರೀಡೆಯ ಕನಸನ್ನೂ ನನಸು ಮಾಡಿಕೊಳ್ಳಲಿದ್ದೇನೆ ಎನ್ನುತ್ತಾರೆ ಲೇಖನಾ. ಸದ್ಯ ಸಿನಿಮಾಗಳಿಂದಲೂ ಆಫರ್ ಬರುತ್ತಿವೆ, ಆದರೆ ಸದ್ಯ ನನ್ನ ಗಮನ ಮಿಸ್ ಯೂನಿವರ್ಸ್ ಕಡೆಗೆ ಎಂದಿದ್ದಾರೆ. ಅಪ್ಪು ಎಂದ್ರೆ ನನಗೆ ತುಂಬಾ ಇಷ್ಟ. ಅವರ ಜೊತೆ ನಟನೆ ಮಾಡುವ ಆಸೆ ಇತ್ತು. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ಈಚೆಗೆ ಯಶ್ ಅವರ ಟೀಸರ್ ನೋಡಿದ ಮೇಲೆ ಅವರ ಜೊತೆ ನಟಿಸುವ ಆಸೆ ಇದೆ. 100 ಪರ್ಸೆಂಟ್ ಆ ಆಸೆ ಈಡೇರುವ ಭರವಸೆ ಇದೆ ಎನ್ನುತ್ತಾರೆ ಲೇಖನಾ.
66
ಬ್ಯೂಟಿ ಸ್ಪರ್ಧೆಯಲ್ಲಿ
ಅಂದಹಾಗೆ ಈ ಬ್ಯೂಟಿ ಸ್ಪರ್ಧೆಯಲ್ಲಿ, ಫ್ಯಾಷನ್ ಕ್ಷೇತ್ರದ ದಿಗ್ಗಜರಾದ ನಿಕಿಲ್ ಆನಂದ್, ಅಮ್ಜದ್ ಖಾನ್, ಮಹಮ್ಮದ್ ಸೈಜಲ್, ಮಿಸ್ ಯೂನಿವರ್ಸ್ ಇಂಡಿಯಾ 2025 ಮಣಿಕಾ ವಿಶ್ವಕರ್ಮಾ ಹಾಗೂ ಕಳೆದ ಬಾರಿ ಗೆಲುವು ಸಾಧಿಸಿದ್ದ ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ ಉದಯ್ ಜ್ಯೂರಿ ಟೀಮ್‌ನಲ್ಲಿದ್ದರು. ಶೋ ಡೈರೆಕ್ಟರ್ ಶ್ರೀಕಾಂತ್ ಶೆಟ್ಟರ್ ಬ್ಯೂಟಿ ಪೇಜೆಂಟ್‌ನ ಉಸ್ತುವಾರಿ ವಹಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.