ಏನೇನೋ ಹಾಕಿ ಮುಖ ಹಾಳು ಮಾಡ್ಕೋಬೇಡಿ, ನ್ಯಾಚುರಲ್ face wash try ಮಾಡಿ

Published : Apr 15, 2026, 09:44 PM IST

Homemade face wash : ಫೇಸ್ ವಾಶನ್ನು ದುಬಾರಿ ಹಣಕೊಟ್ಟು ಖರೀದಿ ಮಾಡ್ಬೇಕಾಗಿಲ್ಲ. ನೀವು ಮನೆಯಲ್ಲಿಯೇ ಫೇಸ್ ವಾಶ್ ತಯಾರಿಸಬಹುದು. ಇದು ಚರ್ಮಕ್ಕೂ ಒಳ್ಳೆಯದು. ಜೇಬು ಕೂಡ ಉಳಿಯುತ್ತೆ. 

PREV
15
ನೈಸರ್ಗಿಕ ಫೇಸ್ ವಾಶ್

ಒಳ್ಳೆ ಸುಹಾಸನೆಯುಳ್ಳ ಫೇಸ್ ವಾಶ್ ಜನರು ಇಷ್ಟಪಡ್ತಾರೆ. ಮಾರ್ಕೆಟ್ ನಲ್ಲಿ ಸಾಕಷ್ಟು ಫೇಸ್ ವಾಶ್ ಲಭ್ಯವಿದೆ. ಆದ್ರೆ ಫೇಸ್ ವಾಶ್ ಗೆ ಕೆಮಿಕಲ್ ಬಳಸ್ತಾರೆ. ಇದು ಆರಂಭದಲ್ಲಿ ಸ್ಕಿನ್ ಹೊಳೆಯುವಂತೆ ಮಾಡಿದ್ರೂ ದೀರ್ಘಕಾಲ ಬಳಕೆಯಿಂದ ಸ್ಕಿನ್ ಹಾಳಾಗುತ್ತೆ. ಮಾರ್ಕೆಟ್ ನಲ್ಲಿ ಸಿಗೋ ಫೇಸ್ ವಾಶ್ ಬಳಸೋಕೆ ಭಯ ಎನ್ನುವವರು ಮನೆಯಲ್ಲೇ ಇದನ್ನು ತಯಾರಿಸಬಹುದು.

25
ಫೇಸ್ ವಾಶ್ ತಯಾರಿಕೆ ಬೇಕಾಗುವ ವಸ್ತು

ಲಿಕ್ವಿಡ್ ಕ್ಯಾಸ್ಟೈಲ್ ಸೋಪ್/ಬೇಬಿ ಶಾಂಪೂ - 1/2 ಕಪ್, ಅಲೋವೆರಾ ಜೆಲ್ - 2 ಸ್ಪೂನ್, 

ರೋಸ್ ವಾಟರ್ - 3 ಸ್ಪೂನ್, ಗ್ಲಿಸರಿನ್ - 1 ಟೀಚಮಚ,  ಬೇವಿನ ಪುಡಿ - 1/2 ಟೀಚಮಚ, ವಿಟಮಿನ್ ಇ ಕ್ಯಾಪ್ಸುಲ್ ಫೇಸ್‌ ವಾಶ್‌ ತಯಾರಿಸಲು ಅಗತ್ಯವಿರುವ ವಸ್ತುಗಳು. 

35
ಫೇಸ್ ವಾಶ್ ತಯಾರಿಸುವ ವಿಧಾನ

ಅಲೋವೆರಾ ಜೆಲ್, ರೋಸ್ ವಾಟರ್ ಮತ್ತು ಗ್ಲಿಸರಿನ್ ಅನ್ನು ಒಂದು ಬಟ್ಟಲಿನಲ್ಲಿ ಇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇವಿನ ಪುಡಿಯನ್ನು ಸೇರಿಸಿ, ಸರಿಯಾಗಿ ಮಿಕ್ಸ್ ಮಾಡಿ. ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಕತ್ತರಿಸಿ ಅದರ ಎಣ್ಣೆಯನ್ನು ಸೇರಿಸಿ. ನಂತ್ರ ಅದಲ್ಲೆ ಕ್ಯಾಸ್ಟೈಲ್ ಸೋಪ್ ಅಥವಾ ಬೇಬಿ ಶಾಂಪೂ ಸೇರಿಸಿ ಮತ್ತು ನಿಧಾನವಾಗಿ ಮಿಕ್ಸ್ ಮಾಡಿ. ಕೊನೆಗೆ, ಸಾರಭೂತ ತೈಲವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ತಯಾರಿಸಿದ ಮಿಶ್ರಣವನ್ನು ಶುದ್ಧ ಬಾಟಲ್ ಅಥವಾ ಖಾಲಿ ಫೇಸ್ ವಾಶ್ ಬಾಟಲಿಗೆ ಹಾಕಿ.

45
ಫೇಸ್ ವಾಶ್ ಬಳಸುವ ವಿಧಾನ

ಮೊದಲು ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಿ. ನಂತ್ರ 1-2 ಹನಿ ಫೇಸ್ ವಾಶ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 30-40 ಸೆಕೆಂಡುಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತ್ರ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ.

55
ಈ ಫೇಸ್ ವಾಶ್ ನಿಂದ ಆಗುವ ಪ್ರಯೋಜನ

ನೀವು ಮನೆಯಲ್ಲೇ ಮಾಡಿದ ಈ ಫೇಸ್ ವಾಶ್ ನಿಮ್ಮ ಮುಖವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಮುಖದ ಮೇಲಿರುವ ಕೊಳ್ಳೆಯನ್ನು ತೆಗೆಯುತ್ತದೆ. ಮೊಡವೆ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಚರ್ಮವನ್ನು ಮೃದು, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ.ನೀವು ಮನೆಯಲ್ಲಿ ತಯಾರಿಸಿದ ಫೇಸ್ ವಾಶನ್ನು ಪ್ರತಿ ದಿನ ಬಳಸಬೇಡಿ. 15-20 ದಿನಕ್ಕೆ ಒಮ್ಮೆ ಇದನ್ನು ಬಳಸಿ. ಇದನ್ನು ಬಳಸುವ ಮೊದಲು ಪ್ಯಾಚ್ ಪರೀಕ್ಷೆ ಮಾಡಲು ಮರೆಯಬೇಡಿ. ಹಚ್ಚಿದಾಗ ಉರಿ ಕಾಣಿಸಿಕೊಂಡ್ರೆ ತಕ್ಷಣ ಬಳಕೆಯನ್ನು ನಿಲ್ಲಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories