ಮಗಳ ಮದುವೆಯಲ್ಲಿ ಮೊಳಕಾಲ್ಮೂರು ಸೀರೆಯುಟ್ಟ ಸಚಿವೆ ನಿರ್ಮಲಾ ಸೀತಾರಾಮನ್

Published : Jun 08, 2023, 01:34 PM IST

ಭಾರತೀಯ ಸಾಂಪ್ರದಾಯಿಕ ಸೀರೆ ಎಂದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ತುಂಬಾ ಅಚ್ಚುಮೆಚ್ಚು. ಅವರು ಹಲವು ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಸೀರೆಯಾದ ಇಳಕಲ್‌, ಮೊಳಕಾಲ್ಮೂರು, ರೇಷ್ಮೆ ಸೀರೆಯಲ್ಲಿ ಮಿಂಚುತ್ತಾರೆ. ಅದೇ ರೀತಿ ಮಗಳ ಮದುವೆಯಲ್ಲೂ ಸಚಿವೆ ಸಾಂಪ್ರದಾಯಿಕ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

PREV
16
ಮಗಳ ಮದುವೆಯಲ್ಲಿ ಮೊಳಕಾಲ್ಮೂರು ಸೀರೆಯುಟ್ಟ ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಸೀರೆಯನ್ನು ತುಂಬಾ ಇಷ್ಟಪಡುತ್ತಾರೆ. ಯಾವಾಲೂ ರೇಷ್ಮೆ, ಇಳಕಲ್, ಮೊಳಕಾಲ್ಮೂರು, ಧಾರವಾಡ ಕಸೂತಿ ಸೀರೆಯನ್ನುಟ್ಟು ಮಿಂಚುತ್ತಾರೆ. ಇತ್ತೀಚಿಗೆ ತಮ್ಮ ಏಕೈಕ ಪುತ್ರಿ ವಾಙ್ಮಯಿ ಮದ್ವೆಯಲ್ಲೂ ಮೊಳಕಾಲ್ಮೂರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

26

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಏಕೈಕ ಪುತ್ರಿ ವಾಙ್ಮಯಿ ಅವರ ವಿವಾಹ ಪ್ರತೀಕ್ ಎಂಬವರ ಜೊತೆ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ನೆರವೇರಿತು. ಬೆಂಗಳೂರಿನ ಪ್ರತಿಷ್ಠಿತ ವಿವಾಹ ಮತ್ತು ಆರತಕ್ಷತೆ ಸ್ಥಳವೊಂದರಲ್ಲಿ ಮದುವೆ ನೆರವೇರಿತು.

36

ವಧು ಹಸಿರು ಬಣ್ಣದ ಬ್ಲೌಸ್ ಮತ್ತು ನಸುಕೆಂಪು ಬಣ್ಣದ ಸೀರೆ ಉಟ್ಟಿದ್ದರು. ವರ ಬಿಳಿ ಪಂಚೆ, ಶಾಲನ್ನು ಧರಿಸಿದ್ದರು. ಅದ್ಧೂರಿ ಮದುವೆಯಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊಳಕಾಲ್ಮೂರು ಸೀರೆಯನ್ನು ಉಟ್ಟಿದ್ದು ವಿಶೇಷವಾಗಿತ್ತು. 

46

ಅದಮಾರು ಮಠದ ವೈದಿಕ ಕ್ರಮದಲ್ಲಿ ವಿವಾಹ ನಡೆಯಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ ಕಳುಹಿಸಿದ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿ ಹರಸಿದರು. ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಪೌರೋಹಿತ್ಯರು ನಿರ್ಮಲ ಸೀತಾರಾಮನ್ ಅವರಿಗೆ ನೀಡಿದರು. 

56

nirmala sitaraman

ಬಜೆಟ್ ಮಂಡನೆಯ ಸಂದರ್ಭದಲ್ಲಿಯೂ ನಿರ್ಮಲಾ ಸೀತಾರಾಮನ್ ಈ ರೀತಿಯ ಸಾಂಪ್ರದಾಯಿಕ ಸೀರೆಯನ್ನು ಉಡುತ್ತಾರೆ. 2019ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದ ನಂತರ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ದಿನ ಕೈಮಗ್ಗ ಸೀರೆಗಳನ್ನು ಧರಿಸುತ್ತಾ ಬಂದಿದ್ದಾರೆ. ಭಾರತೀಯ ಸೀರೆ ಎಂದರೆ ಹಣಕಾಸು ಸಚಿವೆಗೆ ಸಹಜವಾಗಿ ಅಚ್ಚುಮೆಚ್ಚು.  
 

66

2019ರಲ್ಲಿ, ಅವರು ಭಾರತೀಯ ಜವಳಿಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. 'ರೇಷ್ಮೆ ಅಥವಾ ಹತ್ತಿ, ಒರಿಸ್ಸಾ-ಕೈಮಗ್ಗ ಸೀರೆಗಳು ನನ್ನ ಅಚ್ಚುಮೆಚ್ಚು. ಅವುಗಳ ಬಣ್ಣ, ನೇಯ್ಗೆ, ವಿನ್ಯಾಸ, ತುಂಬಾ ಚೆನ್ನಾಗಿರುತ್ತದೆ' ಎಂದು ಹೇಳಿಕೊಂಡಿದ್ದರು. ಈ ವರ್ಷದ ಬಜೆಟ್‌ಗೆ ಸಚಿವೆ ಗಾಢ ಕೆಂಪು ಬಣ್ಣದ ಇಳಕಲ್ ಸೀರೆಯನ್ನು ಧರಿಸಿದ್ದರು . ಈ ಸೀರೆಗೆ ವಿಶೇಷವಾಗಿ ಧಾರವಾಡ ನಗರದ ಮಹಿಳೆಯರು ಕಸೂತಿ ಹಾಕಿದ್ದರು. 

Read more Photos on
click me!

Recommended Stories