73 ವರ್ಷದ ಡಿಸೈನರ್ ಫಿಟ್ನೆಸ್ ಮುಂದೆ ಶಿಲ್ಪಾ ಶೆಟ್ಟಿ, ಮಲೈಕಾ ಏನೇನೂ ಅಲ್ಲ

Published : Feb 26, 2023, 12:26 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟ, ಮಲೈಕಾ ಅರೋರಾ ಫಿಟ್ನೆಸ್ ಬಗ್ಗೆ ಎಲ್ಲೆಡೆ ಚರ್ಚಿಸಲಾಗುತ್ತದೆ. 47 ವರ್ಷದ ಶಿಲ್ಪಾ ಮತ್ತು 49 ವರ್ಷದ ಮಲೈಕಾ ಫಿಟ್ನೆಸ್ ವಿಷಯದಲ್ಲಿ 20-22 ವರ್ಷದ ನಟಿಯರಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ. ಆದರೆ, ಈಗ ವಿದೇಶಿ ಡಿಸೈನರ್ ಒಬ್ಬರು ತಮ್ಮ ಫಿಟ್ನೆಸ್ ನಿಂದಾಗಿ ಎಷ್ಟು ಸುದ್ದಿಯಲ್ಲಿದ್ದಾರೆ ಎಂದರೆ ನೀವು ಮಲೈಕಾ-ಶಿಲ್ಪಾ ಅವರ ಫಿಟ್ನೆಸ್ ಅನ್ನು ಮರೆತುಬಿಡುತ್ತೀರಿ. ಬನ್ನಿ ಆ ಡಿಸೈನರ್ ವಿಶೇಷತೆ ಏನು ತಿಳಿಯೋಣ.   

PREV
18
73 ವರ್ಷದ ಡಿಸೈನರ್ ಫಿಟ್ನೆಸ್ ಮುಂದೆ ಶಿಲ್ಪಾ ಶೆಟ್ಟಿ, ಮಲೈಕಾ ಏನೇನೂ ಅಲ್ಲ

ವಿದೇಶಿ ಫ್ಯಾಷನ್ ಡಿಸೈನರ್ ವೆರಾ ವಾಂಗ್ (Fashion designer Vera Wang) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ ಮತ್ತು ಅವರ ಫಿಟ್ ನೆಸ್ ಚರ್ಚೆಗೆ ಬರಲು ಕಾರಣವಾಗಿದೆ. ಅವರ ಹೆಸರು ವೆರಾ ವಾಂಗ್, ಅವರು ಡಿಸೈನರ್ ಮತ್ತು ನಟಿ. ವೆರಾ ತನ್ನ ಅದ್ಭುತ ಫಿಟ್ನೆಸ್ ಮತ್ತು ಲುಕ್ ನಿಂದಾಗಿ ಸುದ್ದಿಯಲ್ಲಿದ್ದಾಳೆ. ಇತ್ತೀಚೆಗೆ ಅವರು ಬಾಫ್ತಾ ಪ್ರಶಸ್ತಿಗಳಿಗೆ ಆಗಮಿಸಿದರು, ಅಲ್ಲಿ ಎಲ್ಲರೂ ಆಕೆಯನ್ನು ನೋಡಿ ಶಾಕ್ ಆಗಿದ್ದಾರೆ. ಈಕೆಯ ಫಿಟ್ನೆಸ್ ಮುಂದೆ ಶಿಲ್ಪಾ ಶೆಟ್ಟಿ, ಮಲೈಕಾ ಅರೋರಾ ಕೂಡ ಸೈಡ್ ಲ್ಲಿ ನಿಲ್ಲಬೇಕಾಗುತ್ತೆ.  
 

28

ಅಷ್ಟಕ್ಕೂ ಈಕೆ ಫಿಟ್ನೆಸ್ ನಿಂದ (fitness) ಯಾಕೆ ಸುದ್ದಿಯಲ್ಲಿದ್ದಾರೆ ಎಂದರೆ. ಈ ಮಾಡೆನ್ ವಯಸ್ಸು. ಹೌದು, 73 ವರ್ಷದ ಈ ಮಾಡೆಲ್ ನ್ನು (73 year old model) ನೋಡಿದ್ರೆ  20 ರ ಹರೆಯದ ಯುವತಿಯಂತೆ ಕಾಣುತ್ತಾರೆ. ಹಾಗಿದೆ ಅವರ ಲುಕ್. 23 ನೇ ವಯಸ್ಸಿನಲ್ಲಿ ಹೇಗೆ ಕಾಣಬೇಕು ಎಂಬುದನ್ನು ಯಾರಾದರೂ ವೆರಾ ವಾಂಗ್ ಅವರಿಂದ ಕಲಿಯಬೇಕು ಎಂದು ಬಳಕೆದಾರರು ಹೇಳುತ್ತಾರೆ.  

38

ವೆರಾ ವಾಂಗ್ ಕಪ್ಪು ಮತ್ತು ಬಿಳಿ ಉಡುಗೆಯಲ್ಲಿ (black and white dress) ಬಾಫ್ಟಾ 2023 ಗೆ ಆಗಮಿಸಿದರು, ಈ ಸಮಯದಲ್ಲಿ ಅವರು ಅತ್ಯಂತ ಸ್ಟೈಲಿಶ್ ಮತ್ತು ಫಿಟ್ ಆಗಿ ಕಾಣಿಸಿಕೊಂಡರು. ಅವರನ್ನು ನೋಡಿದವರು ಯಾರೂ ಸಹ ಆಕೆಗೆ 73 ವರ್ಷ ವಯಸ್ಸಾಗಿದೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅಷ್ಟೊಂದು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ ಈ ನಟಿ. 
 

48

ಈ ಸಮಯದಲ್ಲಿ, ವೆರಾಗೆ 73 ವರ್ಷ ಎಂದು ಯಾರೂ ಹೇಳಲು ಸಾಧ್ಯವಾಗಲಿಲ್ಲ, ಈ ಕಾರ್ಯಕ್ರಮದಲ್ಲಿ ಆಕೆಯನ್ನು ನೋಡಿ ಎಲ್ಲರೂ ಶಾಕ್ ಆಗಿ, ಕಣ್ಣು ಕಣ್ಣು ಬಿಟ್ಟು ನೋಡುವಂತಾಗಿದೆ. ಏಕೆಂದರೆ, ಹೆಚ್ಚುತ್ತಿರುವ ವಯಸ್ಸು ವೆರಾ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. 

58

ಹಾಲಿವುಡ್ ನ ಅತ್ಯಂತ ಸ್ಟೈಲಿಶ್ ಮತ್ತು ಫಿಟ್ ಸೆಲೆಬ್ರಿಟಿಗಳಲ್ಲಿ (stylish celebrety) ವೆರಾ ವಾಂಗ್ ಒಬ್ಬರು. ಬಾಫ್ಟಾದಲ್ಲಿಯೂ, ಅವರು ತಮ್ಮ ತೆಳ್ಳಗಿನ ಆಕಾರವನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಅವರ ಫಿಟ್ನೆಸ್ ಗೆ ಯುವ ನಟ-ನಟಿಯರು ಫಿದಾ ಆಗಿದ್ದಾರೆ. 
 

68

ಈ ಸಮಯದಲ್ಲಿ, ಅವರು ರೇಷ್ಮೆಯಿಂದ ಮಾಡಿದ ಕಪ್ಪು ಕ್ರಾಪ್ ಟಾಪ್ (crop top)ಮೇಲೆ ಬಿಳಿ ರ್ಯಾಪ್ ಉಡುಪನ್ನು ಧರಿಸಿದ್ದರು. ಈ ಉಡುಗೆ ಅವಳ ಆಕಾರವನ್ನು ಮತ್ತಷ್ಟು ಚೆನ್ನಾಗಿ ಕಾಣುವಂತೆ ಮಾಡಿದ್ದು, ಅದು ಅವರ ಮೇಲೆ ತುಂಬಾ ಸುಂದರವಾಗಿ ಕಾಣುತ್ತಿತ್ತು ಅನ್ನೋದಂತೂ ನಿಜಾ.

78

ಉಡುಗೆಯಲ್ಲಿ, ವೆರಾ ತನ್ನ ಹೊಟ್ಟೆಯನ್ನು, ಸೊಂಟವನ್ನು ಪ್ರದರ್ಶಿಸಿ ಅದ್ಭುತ ಶೈಲಿಯಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ವೆರಾ ಈಗ ತನ್ನ ಸ್ಟೈಲಿಶ್ ಲುಕ್ ಮತ್ತು ಫಿಟ್ ನೆಸ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿರುತ್ತಾರೆ ನಟಿ. 

88

73 ನೇ ವಯಸ್ಸಿನಲ್ಲಿ 23 ನೇ ವಯಸ್ಸಿನಲ್ಲಿ ಕಾಣುವ ವೆರಾ ತನ್ನ ಅದ್ಭುತ ವೆಡ್ಡಿಂಗ್ ಡಿಸೈನ್ ಗಳಿಗೆ ಹೆಸರುವಾಸಿಯಾಗಿದ್ದಾರೆ, ಇವರ ಸ್ಟೈಲಿಶ್ ವಧುವಿನ ಉಡುಗೆಗಳು (wedding dress) ಹಾಲಿವುಡ್ ಸೆಲೆಬ್ರಿಟಿಗಳ ಮೊದಲ ಆಯ್ಕೆಯಾಗಿದೆ.ಇವರ ಅದ್ಭುತ ಲುಕ್ ಗಾಗಿ ನೀವು ಅವರ ಇನ್ ಸ್ಟಾಗ್ರಾಂ ಪೇಜ್ ನೋಡಬಹುದು. 
 

Read more Photos on
click me!

Recommended Stories