ಕನಸುಗಳನ್ನು ನನಸು ಮಾಡಿಕೊಳ್ಳೋಕೆ ಇರೋ ಒಂದೇ ದಾರಿ ಎಂದರೆ ಕಠಿಣ ಶ್ರಮ. ಆಟೋ ಚಾಲಕನ ಮಗಳು ಮಾನ್ಯಾ ಸಿಂಗ್ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಆಗಿದ್ದು ಕನಸಿನಂತೆಯೇ ಇರುವ ಒಂದು ಚಂದದ ನೈಜ್ಯ ಕಥೆ
undefined
ಉತ್ತರ ಪ್ರದೇಶ ಮೂಲಕ ಮಾನ್ಯ ಸಿಂಗ್ ಬಾಲ್ಯದ ದಿನಗಳನ್ನು ಕಷ್ಟದಲ್ಲಿಯೇ ಕಳೆದಿದ್ದಳು. ಒಪ್ಪೊತ್ತಿನ ಊಟ, ನಿದ್ರೆ ಇಲ್ಲದ ದಿನಗಳಾಗಿತ್ತವು.
undefined
ಫೆಮಿನಾ ಮಿಸ್ ಇಂಡಿಯಾದ ಇನ್‌ಸ್ಟಾಗ್ರಾಂ ಖಾತೆ ಡಿಸೆಂಬರ್ 2020ರಂದು ಮಿಸ್ ಇಂಡಿಯಾ ರನ್ನರ್ ಅಪ್ ಬಗ್ಗೆ ಆಕೆಯ ಮನೆಯಿಂದ 14ನೇ ವಯಸ್ಸಿನಲ್ಲಿ ಓಡಿ ಹೋದ ಬಗ್ಗೆ ಪೋಸ್ಟ್ ಮಾಡಿತ್ತು.
undefined
14ನೇ ವರ್ಷಕ್ಕೆ ಮನೆ ಬಿಟ್ಟು ಹೋದಾಕೆ ತನ್ನಶಿಕ್ಷಣವನ್ನು ಮುಗಿಸಿದ್ದಳು.
undefined
ತಾನು ಈಗಿರುವ ಸ್ಥಳಕ್ಕೆ ತಲುಪಲು ಕಷ್ಟದ ಕೆಲಸವನ್ನೆಲ್ಲ ಮೀರಿ ಬಂದಿದ್ದಳು.
undefined
ನಿದ್ದೆ ಊಟವಿಲ್ಲದೆ ನಾನು ಬಹಳಷ್ಟು ರಾತ್ರಿ ಕಳೆದಿದ್ದೇನೆ. ಬಹಳಷ್ಟು ದಿನ ಮಧ್ಯಾಹ್ನದ ಹೊತ್ತಲ್ಲಿ ಮೈಲುಗಟ್ಟಲೆ ನಡೆದಿದ್ದೀನೆ ಎಂದಿದ್ದಾರೆ ಮಾನ್ಯ.
undefined
ನನ್ನ ಕಣ್ಣೀರು, ರಕ್ತ, ಬೆವರು ನನ್ನ ಕನಸನ್ನು ನನಸು ಮಾಡಿತು. ರಿಕ್ಷಾ ಚಾಲಕನ ಮಗಳಾಗಿ ನನಗೆ ಶಾಲೆಗೆ ಹೋಗುವ ಬದಲು ಚಿಕ್ಕ ವಯಸ್ಸಿನಲ್ಲಿಯೇ ದುಡಿಯಬೇಕಾಯ್ತು ಎಂದಿದ್ದಾರೆ.
undefined
ಪುಸ್ತಕಗಳಿಗಾಗಿ ನಾನು ಹಾತೊರೆಯುತ್ತಿದೆ, ಆದರೆ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ ಎನ್ನುತ್ತಾರೆ ಮಾನ್ಯ.
undefined
ನನ್ನಮ್ಮನಲ್ಲಿದ್ದ ಸ್ವಲ್ಪ ಆಭರಣ ಅಡವಿಟ್ಟು ನನ್ನ ಪರೀಕ್ಷೆ ಶುಲ್ಕ ಕಟ್ಟಿದರು. 14ನೇ ವಯಸ್ಸಿಗೆ ಮನೆಯಿಂದ ಓಡಿ ಹೋದೆ ಎಂದಿದ್ದಾರೆ
undefined
ಹಗಲಲ್ಲಿ ಕಲಿತು, ಸಂಜೆ ಮನೆ ಮನೆಯ ಪಾತ್ರೆ ತೊಳೆದು, ರಾತ್ರಿ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಿದ್ದೆ ಎಂದಿದ್ದಾರೆ.
undefined
ನಾನು ನನ್ನ ಅಪ್ಪ ಅಮ್ಮ ಸೋದರರನ್ನು ಪ್ರತಿನಿಧಿಸಿ ನಮ್ಮ ಕನಸುಗಳಿಗೆ ನಾವು ಬದ್ಧರಾಗಿದ್ದರೆ ಏನನ್ನೂ ಸಾಧಿಸಬಹುದೆಂದು ಜಗತ್ತಿಗೆ ತೋರಿಸಲು ನಾನಿಲ್ಲಿ ನಿಂತಿದ್ದೇನೆ ಎಂದಿದ್ದಾರೆ.
undefined