ಮಾನಸಾ 21 ಮಾರ್ಚ್ 1997 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಅವರು ಹುಟ್ಟಿದ ಕೆಲವು ದಿನಗಳ ನಂತರ, ಅವರ ತಂದೆ ಮಲೇಷ್ಯಾಕ್ಕೆ ಸ್ಥಳಾಂತರಗೊಂಡರು. 10ನೇ ತರಗತಿವರೆಗೆ ಅಲ್ಲಿ ಶಿಕ್ಷಣ ಪಡೆದ ಮಾನಸ ನಂತರ ಅವರು ಭಾರತಕ್ಕೆ ಹಿಂದಿರುಗಿದರು ಮತ್ತು ಭಾರತದಲ್ಲಿ 12ನೇ ಅಧ್ಯಯನ ಮತ್ತು ಪದವಿ ಮುಗಿಸಿದ್ದಾರೆ.
ಓದು ಮುಗಿದ ನಂತರ ಮಾನಸ ಖಾಸಗಿ ಕಂಪನಿಯೊಂದರಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿರುವ ಮಾನಸ ಈಜು, ಟೇಬಲ್ ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಆಡುವುದನ್ನುಎಂಜಾಯ್ ಮಾಡುತ್ತಾರೆ. ಅವರ ರೋಲ್ ಮಾಡೆಲ್ ಪ್ರಿಯಾಂಕಾ ಚೋಪ್ರಾ.
manasa varanasi
ಬಾಲ್ಯದಲ್ಲಿ ಅವರು ತುಂಬಾ ನಾಚಿಕೆಯ ಸ್ವಭಾವದವರಾಗಿದ್ದರು ಎಂದು ಮಾನಸಾ ಸ್ವತಃ ಹೇಳುತ್ತಾರೆ. ಭರತನಾಟ್ಯ ಮತ್ತು ಸಂಗೀತದಲ್ಲಿ ಅಪಾರ ಒಲವು ಹೊಂದಿರುವ ಮಾನಸಾ ಅವರಿಗೆ ಕನಸು ಕಾಣಲು ತುಂಬಾ ಇಷ್ಟವಂತೆ.
ಮಿಸ್ ಇಂಡಿಯಾ 2020 ವಿನ್ನರ್ ಮಾನಸಾ ತಮ್ಮ ತಾಯಿ, ಅಜ್ಜಿ ಮತ್ತು ತಂಗಿಯನ್ನು ತಮ್ಮ ಜೀವನದಲ್ಲಿ ಮೂರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳೆಂದು ಪರಿಗಣಿಸುತ್ತಾರೆ. ಈ ಮೂರು ಅವರ ಜೀವನದಲ್ಲಿ ಬಹಳ ಮುಖ್ಯ.
ಮಿಸ್ ಇಂಡಿಯಾ 2020 ಸ್ಪರ್ಧೆಯ ಸಮಯದಲ್ಲಿ, ಮಾನಸಾ ಕೆಲವು ಸ್ಪೂರ್ತಿದಾಯಕ ಸಾಲುಗಳನ್ನು ಹೇಳಿದ್ದರು. ಅದು ಎಲ್ಲರ ಹೃದಯವನ್ನು ಗೆದ್ದಿದೆ. 'ನೀನೇ ಒಂದು ಹೆಜ್ಜೆ ಇಡದ ಹೊರತು ನಿನ್ನ ಜೀವನದಲ್ಲಿ ಅಸಾಮಾನ್ಯವಾದುದೇನೂ ಆಗುವುದಿಲ್ಲ' ಎಂದು ಮಾನಸಾ ಹೇಳಿದ್ದರು.
ವಿಶ್ವ ಸುಂದರಿ 2021 ರ ಬಗ್ಗೆ ಮಾನಸಾ ವಾರಣಾಸಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹೆಚ್ಚು ವೈರಲ್ ಆಗುತ್ತಿರುವ ಅವರ ಫೋಟೋವನ್ನು ಜನರು ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಅವರೊಂದಿಗೆ ಹೋಲಿಸುತ್ತಿದ್ದಾರೆ.
ಮಾನಸ ಮಾಡೆಲಿಂಗ್ ಕೂಡ ಮಾಡುತ್ತಾರೆ. ಇದರೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ತೆಲಂಗಾಣ ಸರ್ಕಾರದ ಮಹಿಳೆಯರಿಗಾಗಿ ಆರಂಭಿಸಲಾದ '1908' ಅಭಿಯಾನದೊಂದಿಗೆ ಅವರು ಸಂಬಂಧ
ಹೊಂದಿದ್ದಾರೆ. ಈ ಅಭಿಯಾನದ ಸಹಾಯದಿಂದ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಮತ್ತು ಅವರ ಹಕ್ಕುಗಳನ್ನು ನೀಡಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.