Harnaaz Sandhu: 21 ವರ್ಷದ ನಂತರ ಭಾರತದ ಚೆಲುವೆಗೆ ಭುವನ ಸುಂದರಿ ಪಟ್ಟ

First Published | Dec 13, 2021, 11:14 AM IST

Harnaaz Sandhu: ಬರೋಬ್ಬರಿ 21 ವರ್ಷಗಳ ನಂತರ ಭಾರತದ ಚೆಲುವೆಗೆ ಭುವನ ಸುಂದರಿ(Miss Universe 2021) ಪಟ್ಟ ಸಿಕ್ಕಿದೆ. 21 ಹರೆಯದ ಹರ್ನಾಝ್ ಸಂಧು ಭಾರತಕ್ಕೆ ಭುವನಸುಂದರಿ ಕಿರೀಟ ಗೆದ್ದುಕೊಂಡ ಚೆಲುವೆ

LIVA Miss Diva Universe 2021: ಭಾರತದ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ 2021 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಹರ್ನಾಝ್ ಗೆಲುವಿಗೆ ಮುನ್ನ ಮಿಸ್ ಪರಾಗ್ವೆ ಮತ್ತು ಮಿಸ್ ಸೌತ್ ಆಫ್ರಿಕಾ ವಿರುದ್ಧ ಅಂತಿಮವಾಗಿ ಮುನ್ನಡೆ ಸಾಧಿಸಿದ್ದಾರೆ. ಕೊನೆಯ ಸುತ್ತಿನಲ್ಲಿ ಇಬ್ಬರನ್ನು ಸೋಲಿಗೆ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಹರ್ನಾಜ್ ಅವರು ಟಾಪ್ 10 ರಿಂದ ಟಾಪ್ 3 ಗೆ ಮುನ್ನಡೆದ ನಂತರ ಫೈನಲ್‌ನಲ್ಲಿ ಶೋ-ಸ್ಟಾಪರ್ ಆಗಿದ್ದರು. ಕೊನೆಗೆ ವಿಜೇತರೆಂದು ಘೋಷಿಸುವ ಮೊದಲು ಶೋ ವೀಕ್ಷಿಸುತ್ತಿದ್ದ ಅನೇಕ ಭಾರತೀಯರ ಹೃದಯ ಬಡಿತವನ್ನು ಹೆಚ್ಚಿಸಿದರು. ಕೊನೆಗೂ ಫಲಿತಾಂಶ ಘೋಷಿಸಿದಾಗ ಹರ್ನಾಜ್ ಈಗ 70 ನೇ ಭುವನ ಸುಂದರಿ 2021 ಮತ್ತು ಈ ಪ್ರಶಸ್ತಿಯನ್ನು ಗೆದ್ದ ಭಾರತದ ಮೂರನೇ ಸುಂದರಿ ಎಂದು ಘೋಷಿಸಿದಾಗ ಭಾವುಕರಾಗಿದ್ದರು ಹರ್ನಾಝ್.

Tap to resize

ಹರ್ನಾಜ್ ನಮ್ಮದೇ ಆದ ಅಸಾಧಾರಣ ದೇಸಿ ಹುಡುಗಿಯಂತೆ ಕಾಣುತ್ತಿರುವಾಗ ಆಕೆಯ ಭಾರತೀಯ ಮೂಲವನ್ನು ಪ್ರತಿನಿಧಿಸಿದ್ದಾರೆ. ಈಜುಡುಗೆ ಸುತ್ತಿನ ಸಮಯದಲ್ಲಿ, ಹರ್ನಾಜ್ ಅವರು ಮೆರೂನ್ ಕ್ಯಾಪ್-ತೋಳಿನ ಮೊನೊಕಿನಿಯನ್ನು ಧರಿಸಿದ್ದರು.

ಸಮಚಿತ್ತದಿಂದ ರ‍್ಯಾಂಪ್‌ನಲ್ಲಿ ನಡೆಯುತ್ತಿದ್ದಾಗ ಹಾಟ್ ಆಗಿ ಕಾಣಿಸಿದ್ದರು ಹರ್ನಾಝ್. ಟಾಪ್ 10 ನಲ್ಲಿ ಹರ್ನಾಝ್ ಸ್ಥಾನ ಪಡೆದಿದ್ದೇಕೆ ಎಂಬುದನ್ನು ಆಕೆಯ ಫೋಟೋ ನೋಡಿಯೇ ತಿಳಿಯಬಹುದು.

ಐತಿಹಾಸಿಕ ಕ್ಷಣಕ್ಕಾಗಿ ಹರ್ನಾಜ್ ಸೀಕ್ವಿನ್ಡ್ ಗೌನ್‌ ಆರಿಸಿಕೊಂಡಿದ್ದರು. ಮಿಲಿಯನ್-ಡಾಲರ್ ಸ್ಮೈಲ್ ಕೊಡುವ ಮೂಲಕ ಮಿನುಗುತ್ತಿದ್ದರು ಹರ್ನಾಝ್. ಹರ್ನಾಝ್ ಸೌಂದರ್ಯವು ಸಂಪೂರ್ಣವಾಗಿ ಭುವನ ಸುಂದರಿ ಪಟ್ಟಕ್ಕೆ ಅರ್ಹವಾಗಿದೆ.

ಸ್ಪರ್ಧೆಯು ಇಂದು ಕೊನೆಗೊಳ್ಳಲಿದ್ದು, ಪರಾಗ್ವೆಯ ನಾಡಿಯಾ ಫೆರೇರಾ ಮೊದಲ ರನ್ನರ್ ಅಪ್ ಆಗಿದ್ದು, ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಫಿಲಿಪೈನ್ಸ್‌ನ ಬೀಟ್ರಿಸ್ ಗೊಮೆಜ್ ಸ್ಪರ್ಧೆಯ ಟಾಪ್ 5 ರಲ್ಲಿ ಸ್ಥಾನ ಪಡೆದರು.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಅಂತಹ ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವ ತನ್ನ ಕನಸಿನ ಬಗ್ಗೆ ಹರ್ನಾಜ್ ಮಾತನಾಡಿದ್ದರು.

ನಾನು ಯಾವಾಗಲೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಎಂದು ಕರೆಯುವುದನ್ನು ಕೇಳಲು ಬಯಸಿದ್ದೆ. ಈಗ ಅದು ನಡೆಯುತ್ತಿದೆ. ವಿಶ್ವ ವೇದಿಕೆಯಲ್ಲಿ ನನ್ನ ದೇಶದ 1.3 ಶತಕೋಟಿ ಜನರನ್ನು ಪ್ರತಿನಿಧಿಸುವ ಅವಕಾಶವನ್ನು ನಾನು ಪಡೆದುಕೊಂಡಿದ್ದೇನೆ. ನಾನು ಪಡೆದ ಅವಕಾಶಗಳಿಗಾಗಿ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.

ಈಗ ಆಕೆಯ ಕನಸು ಅಂತಿಮವಾಗಿ ನನಸಾಗಿದೆ. ಈ ವರ್ಷದ ಭುವನ ಸುಂದರಿ ಸ್ಪರ್ಧೆಯನ್ನು ಮುನ್ನಡೆಸುವುದು ಭಾರತವಲ್ಲದೆ ಬೇರೆ ಯಾರೂ ಅಲ್ಲ. ಹರ್ನಾಜ್ ಅವರು ಭಾರತದ ಮೂರನೇ ಭುವನ ಸುಂದರಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳು.

Latest Videos

click me!