ಮಿಸ್ ಯೂನಿವರ್ಸ್ 2021 ಸ್ಪರ್ಧೆಯು ಈ ವರ್ಷ ಇಸ್ರೇಲ್‌ನಲ್ಲಿ ನಡೆಯಿತು. ಈ ಸ್ಪರ್ಧೆಯ ಪ್ರಾಥಮಿಕ ಹಂತದಲ್ಲಿ 75ಕ್ಕೂ ಹೆಚ್ಚು ಸುಂದರ ಸ್ಪರ್ಧಿಗಳು ಭಾಗವಹಿಸಿದ್ದರು. ಇವರೆಲ್ಲರನ್ನೂ ಸೋಲಿಸಿ ಹರ್ನಾಜ್ ಸಂಧು ತಮ್ಮ ಹೆಸರಿನಲ್ಲಿ ಕಿರೀಟವನ್ನು ಅಲಂಕರಿಸಿದರು.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕೊಹಾಲಿ ಗ್ರಾಮದಲ್ಲಿ ಜನಿಸಿದ ಹರ್ನಾಜ್ ಕೌರ್ ಸಂಧು ಇಂದು ಇಡೀ ಜಗತ್ತಿಗೆ ಪರಿಚಿತರಾಗಿದ್ದಾರೆ, ಸಿಖ್ ಕುಟುಂಬದಲ್ಲಿ ಜನಿಸಿದ ಹರ್ನಾಜ್ ಅವರ ಇಡೀ ಕುಟುಂಬವು ಕೃಷಿಯೊಂದಿಗೆ ಸಂಬಂಧ ಹೊಂದಿದೆ.
ಅದೇ ಸಮಯದಲ್ಲಿ, ತಾಯಿ ಚಂಡೀಗಢದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರಾಗಿದ್ದಾರೆ. ಬಾಲ್ಯದಿಂದಲೂ ತನ್ನ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಇವರು ನ್ನ ಫ್ಯಾಷನ್ ಬಗ್ಗೆ ತುಂಬಾ ಗಂಭೀರವಾಗಿರುತ್ತಿದ್ದರು ಆದರೆ, ರೈತನ ಮಗಳು ಮಾಡೆಲ್ ಆಗುವುದು ದೊಡ್ಡ ಸವಾಲಾಗಿತ್ತು.
ಹರ್ನಾಜ್ ಶಾಲೆ, ಕಾಲೇಜಿನಲ್ಲಿ ಸ್ಟೇಜ್ ಮೇಲೆ ಮಾಡೆಲಿಂಗ್ ಮಾಡುವಾಗ ಹಳ್ಳಿಯ ಜನರು ಹಾಗೂ ಸಹ ವಿದ್ಯಾರ್ಥಿಗಳು ಆಕೆಯನ್ನು ಗೇಲಿ ಮಾಡುತ್ತಿದ್ದರು. ಶಾಲಾ ದಿನಗಳಲ್ಲಿ ಅವರು ತೆಳ್ಳಗಿದ್ದರು ಎಂದು ಅಪಹಾಸ್ಯಕ್ಕೆ ಒಳಗಾಗಿದ್ದರು. ಈ ಕಾರಣಕ್ಕೆ ಆಕೆ ಖಿನ್ನತೆಗೆ ಒಳಗಾಗಿದ್ದರು. ಆದರೆ ಕುಟುಂಬವು ಯಾವಾಗಲೂ ಅವರನ್ನು ಬೆಂಬಲಿಸಿತು.
ನಂತರ 2017 ರಲ್ಲಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಮೊದಲ ಹಂತದ ಪ್ರದರ್ಶನವನ್ನು ನೀಡಿದರು. ಅಂದಿನಿಂದ ಮಿಸ್ ಯೂನಿವರ್ಸ್ ತಲುಪುವ ಅವಳ ಪ್ರಯಾಣ ಪ್ರಾರಂಭವಾಯಿತು.ಹರ್ನಾಜ್ ಸಂಧು ಫಿಟ್ನೆಸ್ ಮತ್ತು ಯೋಗ ಪ್ರೇಮಿ.
ಹರ್ನಾಜ್ ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಚಂಡೀಗಢದಲ್ಲಿಯೇ ಪದವಿ ಪಡೆದ ನಂತರ ಇಲ್ಲಿಂದಲೇ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ಈ ಮೊದಲು ಮಾಡೆಲಿಂಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಆದರೆ ಅವರ ಓದಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ಹರ್ನಾಜ್ ಅವರ ತಾಯಿ ಅವರು ನ್ಯಾಯಾಧೀಶರಾಗಬೇಕೆಂದು ಬಯಸಿದ್ದರು.
ಹರ್ನಾಜ್ ಸಂಧು ಪ್ರಸ್ತುತ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮಾಡೆಲಿಂಗ್‌ನ ಹೊರತಾಗಿ, ಅವರು ಚಲನಚಿತ್ರಗಳತ್ತ ಒಲವು ಹೊಂದಿದ್ದಾರೆ. ವರದಿಗಳ ಪ್ರಕಾರ , ಅವರು ಬಾಲಿವುಡ್‌ನಲ್ಲಿಯೂ ಕೆಲಸ ಮಾಡಬಹುದು.
ಹರ್ನಾಜ್‌ಗೆ ಕುದುರೆ ಸವಾರಿ, ಈಜು, ನಟನೆ, ನೃತ್ಯ ಮತ್ತು ಪ್ರವಾಸ ತುಂಬಾ ಇಷ್ಟ. 2017 ರಲ್ಲಿ, ಅವರು ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ ಪ್ರಶಸ್ತಿ ಗೆದಿದ್ದರು.
ಅಷ್ಟೇ ಅಲ್ಲ ಅವರಿಗೆ ಎರಡು ಪಂಜಾಬಿ ಚಿತ್ರಗಳಿಗೂ ಆಫರ್ ಬಂದಿದೆ. ಅವರು ಶೀಘ್ರದಲ್ಲೇ ಪಂಜಾಬಿ ಚಿತ್ರಗಳಾದ ಯಾರಾ ದಿಯಾ ಪು ಬರನ್ ಮತ್ತು ಬಾಯಿ ಜಿ ಕುಟ್ಟಂಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ನಾಜ್ ಸಂಧು, ವಿಶೇಷ ಕ್ಷಣಕ್ಕಾಗಿ ತನ್ನ ಪೋಷಕರಿಗೆ ಧನ್ಯವಾದ ಹೇಳಿದ್ದಾರೆ. ತಂದೆ-ತಾಯಿಯ ಮಾರ್ಗದರ್ಶನದಿಂದ ಈ ಸ್ಥಾನಕ್ಕೆ ಏರಲು ಸಾಧ್ಯವಾಯಿತು ಎಂದರು. ಅಲ್ಲದೆ ಎಲ್ಲರ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದ ಹೇಳಿದರು.