ಕ್ರಿಸ್‌ಮಸ್‌ಗೆ ರೆಡ್‌ ಸ್ಯಾರಿಯಲ್ಲಿ ಮಿಂಚಿದ ನಟಿ, ಹೇಗಿಷ್ಟು ಕ್ಯೂಟಾಗಿದ್ದೀರಿ ಕೇಳಿದ ಫ್ಯಾನ್ಸ್‌!

Published : Dec 28, 2023, 03:35 PM ISTUpdated : Dec 28, 2023, 03:45 PM IST

ಎಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ವಿಶಸ್ ಹೇಳುತ್ತಿದ್ದಾರೆ. ಹೀಗಿರುವಾಗ  ಮಲಯಾಳಂ ನಟಿ ಮಿಯಾ ಚಾರ್ಜ್‌ ಸಹ ರೆಡ್‌ ಕಲರ್ ಸೀರೆಯುಟ್ಟ ಫೋಟೋಸ್ ಶೇರ್ ಮಾಡಿದ್ದಾರೆ. ಕ್ಯೂಟ್ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

PREV
18
ಕ್ರಿಸ್‌ಮಸ್‌ಗೆ ರೆಡ್‌ ಸ್ಯಾರಿಯಲ್ಲಿ ಮಿಂಚಿದ ನಟಿ, ಹೇಗಿಷ್ಟು ಕ್ಯೂಟಾಗಿದ್ದೀರಿ ಕೇಳಿದ ಫ್ಯಾನ್ಸ್‌!

ಎಲ್ಲೆಡೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ನಟ-ನಟಿಯರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಹಾಗೆಯೇ ಮಲಯಾಳಂ ನಟಿ ಮಿಯಾ ಚಾರ್ಜ್‌ ಸಹ ರೆಡ್‌ ಕಲರ್ ಸೀರೆಯುಟ್ಟ ಫೋಟೋಸ್ ಶೇರ್ ಮಾಡಿದ್ದಾರೆ.

28

ರೆಡ್ ಕಲರ್ ಸೀರೆಯುಟ್ಟ ಮಿಯಾ ಚಾರ್ಜ್‌ ಮುದ್ದಾಗಿ ಫೋಸ್ ಕೊಟ್ಟಿದ್ದು, ಅದಕ್ಕೆ ಸ್ಟೈಲಿಶ್ ನೆಕ್ಲೇಸ್‌ನ್ನು ಸಹ ಪೇರ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

38

ಕ್ರಿಸ್‌ಮಸ್‌ ಹಬ್ಬದ ಸಂಭ್ರಮದ ಮಧ್ಯೆ ಎಲ್ಲಾ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ವಿಶಸ್ ಹೇಳುತ್ತಿದ್ದಾರೆ. ಜೊತೆಗೆ ರೆಡ್‌ ಕಲರ್‌ನಲ್ಲಿ ಫೋಟೋಗಳನ್ನು ಸಹ ಶೇರ್ ಮಾಡುತ್ತಿದ್ದಾರೆ.

48

ಮಿಯಾ ಚಾರ್ಜ್‌ ಸುಂದರ ಫೋಟೋಗಳಿಗೆ ಫ್ಯಾನ್ಸ್ ಲೈಕ್ಸ್ ಹಾಗೂ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್‌, ಮೆರಿ ಕ್ರಿಸ್‌ಮಸ್‌ ಎಂದೆಲ್ಲಾ ತಿಳಿಸಿದ್ದಾರೆ.

58

ಮಿಯಾ ಮುಂಬೈನ ಡೊಂಬಿವ್ಲಿಯಲ್ಲಿ ಜಾರ್ಜ್ ಜೋಸೆಫ್ ಮತ್ತು ಮಿನಿ ಜಾರ್ಜ್‌ಗೆ ಮಗಳಾಗಿ ಜನಿಸಿದರು, ಅವರ ತಂದೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಿರೋ ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ. ನಂತರ, ನಾಲ್ಕನೇ ವಯಸ್ಸಿನಲ್ಲಿ, ಅವರು ಕೊಟ್ಟಾಯಂನ ಪಾಲಾಗೆ ತೆರಳಿದರು. ಕೇರಳದಲ್ಲಿಯೇ ತಮ್ಮ ಶಿಕ್ಷಣವನ್ನು ಪೂರೈಸಿದರು.

68

ಮಿಯಾ ಚಾರ್ಜ್‌ ಮಾಡೆಲ್‌ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು, ನಂತರ ದೂರದರ್ಶನ ಕಾರ್ಯಕ್ರಮಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸದ್ಯ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಮುಖ್ಯವಾಗಿ ನಟಿಸುತ್ತಾರೆ.

78

ಒರು ಸ್ಮಾಲ್ ಫ್ಯಾಮಿಲಿ (2010), ಡಾಕ್ಟರ್ ಲವ್ (2011) ಮತ್ತು ಈ ಅದುತಾ ಕಾಲತು (2012) ನಂತಹ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅವರು ತಮ್ಮ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು . 2012ರಲ್ಲಿ ಕೇರಳದ ಮಿಸ್ ಫಿಟ್ನೆಸ್ ಆಗಿ ಆಯ್ಕೆಯಾದರು ಮತ್ತು ಅದೇ ವರ್ಷ ಮಲಯಾಳಂ ಚಲನಚಿತ್ರ ಚೆಟ್ಟಯೀಸ್‌ನಲ್ಲಿ ಅವರ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು .

88

ಕೊಟ್ಟಾಯಂ ಮೂಲದ ಉದ್ಯಮಿ ಅಶ್ವಿನ್ ಫಿಲಿಪ್ ಅವರನ್ನು ಮಿಯಾ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದರು. ದಂಪತಿಗೆ ಒಂದು ಗಂಡು ಮಗುವಿದೆ.

Read more Photos on
click me!

Recommended Stories