ಜೆಎಲ್‌ಒ ಎಂದೇ ಪ್ರಸಿದ್ಧವಾಗಿರುವ ಅಮೆರಿಕನ್ ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಜೆನ್ನಿಫರ್ ಲೋಪೆಜ್‌ಗೆ ಪತಿ ಬೆನ್ ಅಫ್ಲೆಕ್ಸ್ ಅವರು ರತ್ನಖಚಿತ ಟಾಯ್ಲೆಟ್ ಸೀಟ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಜೆಎಲ್‌ಒ ಎಂದೇ ಪ್ರಸಿದ್ಧವಾಗಿರುವ ಅಮೆರಿಕನ್ ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಜೆನ್ನಿಫರ್ ಲೋಪೆಜ್ 1991ರಲ್ಲಿ ಮೊದಲ ಬಾರಿಗೆ ಸಿನಿಮಾರಂಗಕ್ಕೆ ಕಾಲಿರಿಸಿದಾಗಿನಿಂದ ಇಲ್ಲಿಯವರೆಗೂ ತನ್ನ ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ
29
ಈ ನಟಿ ತಮ್ಮ ನಟನೆ ಮಾತ್ರವಲ್ಲದೇ ತಮ್ಮ ವಿಭಿನ್ನ ಫ್ಯಾಷನ್ ಹಾಗೂ ತಾವು ಹೊಂದಿರುವ ವಿವಿಧ ಆಭರಣಗಳ ವಿಭಿನ್ನ ಕಲೆಕ್ಷನ್‌ನಿಂದಾಗಿ ತಮ್ಮ ಅಭಿಮಾನಿಗಳನ್ನು ಆಗಾಗ ಸೆಳೆಯುತ್ತಲೇ ಇರುತ್ತಾರೆ. ಇಂತಹ ನಟಿಗೆ ಈಗ ಅವರ ಪತಿ ಬೆನ್ ಅಫ್ಲೆಕ್ಸ್ ಅವರು ರತ್ನಖಚಿತ ಟಾಯ್ಲೆಟ್ ಸೀಟ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ.
39
ಜೆನ್ನಿಫರ್ ಲೋಪೆಜ್ ಹಾಗೂ ಬೆನ್ ಅಫ್ಲೆಕ್ ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಈ ದಂಪತಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸುಂದರ ಫೋಟೋಗಳನ್ನು ಹಾಕುವ ಮೂಲಕ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
49
ಈಗ ಬೆನ್ ಅಫ್ಲೆಕ್ ತಮ್ಮ ಪ್ರೀತಿಯ ಪತ್ನಿಗೆ 88 ಲಕ್ಷ ಮೌಲ್ಯದ ರತ್ನಖಚಿತ ಟಾಯ್ಲೆಟ್ ಸೀಟ್ ಉಡುಗೊರೆಯಾಗಿ ನೀಡಿದ್ದು, ಅಚ್ಚರಿಗೆ ಕಾರಣವಾಗಿದ್ದಾರೆ.
59
ಜೆನ್ನಿಫರ್ ಹಾಗೂ ಬೆನ್ ಅಫ್ಲೆಕ್ ಅವರ ಪ್ರೇಮ ಕತೆ ಈಗಾಗಲೇ ಬಹುತೇಕರಿಗೆ ಗೊತ್ತು. ಹಲವು ಅಡೆತಡೆಗಳನ್ನು ಮೀರಿ ಈ ಜೋಡಿ ಒಂದಾಗಿದ್ದು, ಇತ್ತೀಚೆಗೆ ಜೇ ಲೆನೋ ಅವರ ಶೋವೊಂದರಲ್ಲಿ ಈ ಜೋಡಿ ಭಾಗಿಯಾಗಿದ್ದರು.
69
ಆ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಬೆನ್ ಅಫ್ಲೆಕ್ಸ್ ಅವರು ತಾನು ತನ್ನ ಪತ್ನಿಗೆ 105,000 ಡಾಲರ್ ಮೊತ್ತದ ಟಾಯ್ಲೆಟ್ ಸೀಟನ್ನು ನೀಡಿದ್ದಾಗಿ ಹೇಳಿದ್ದಾರೆ.
79
ಈ ಶೌಚಾಲಯದ ಕಮೋಡ್ ಆಸನವೂ ಕಸ್ಟಮೈಸ್ ಆಗಿದ್ದು, ದುಬಾರಿ ಜ್ಯುವೆಲ್ಲರಿಗಳಾದ ಮುತ್ತು ಹವಳ, ನೀಲಮಣಿಗಳು ಹಾಗೂ ಅದಕ್ಕಿಂತ ಹೆಚ್ಚಾಗಿ ವಜ್ರಗಳನ್ನು ಹೊಂದಿದೆ ಎಂದು ಅವರು ಹೇಳಿದ್ದರು.
89
Ben Affleck and Jennifer Lopez
ಇದೇ ವೇಳೆ ತನ್ನ ಪತ್ನಿ ಜೆನ್ನಿಫರ್ ಸ್ವಚ್ಛತೆಯ ವಿಚಾರದಲ್ಲಿ ಕ್ಲೀನ್‌ನೆಸ್ ಫ್ರೀಕ್ ಆಗಿದ್ದಾಳೆ. ಹೀಗಾಗಿ ಯಾವ ಶೌಚಾಲಯಕ್ಕೂ ಸರಿ ಹೊಂದುವಂತಹ ಕಾಮೋಡ್ ಸೀಟನ್ನು ಆಕೆಗೆ ಗಿಫ್ಟ್ ಆಗಿ ನೀಡಿದ್ದಾಗಿ ಅವರು ಹೇಳಿದ್ದಾರೆ.
99
ಈ ಹಿಂದೆ ಜೆನ್ನಿಫರ್ ಲೋಪೆಜ್ ಮೈ ಕೈ ಎಲ್ಲಾ ಡೈಮಂಡ್ ಧರಿಸಿ ಬಾತ್‌ರೂಮ್‌ನಲ್ಲಿ ತೆಗೆದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಸಾಕಷ್ಟು ಸೆಳೆದಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.