ನೀತಾ ಅಂಬಾನಿ ಬಳಿ ಇರುವ ಲಕ್ಸುರಿ ವಾಚ್‌ಗಳು ಹಾಗೂ ಅವುಗಳ ದುಬಾರಿ ದರ

Published : Nov 13, 2024, 03:17 PM IST

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ  ಹಾಗೂ ಉದ್ಯಮಿ ಮುಕೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ಬಗ್ಗೆ ಎಲ್ಲರಿಗೂ ಗೊತ್ತು. ಅವರ ಐಷಾರಾಮಿ ಜೀವನ ಕೂಡ ಎಲ್ಲರನ್ನೂ ಆಕರ್ಷಿಸುತ್ತೆ. ಅವರ ಹತ್ತಿರ ಇರುವ ದುಬಾರಿ ವಾಚುಗಳು ಹಾಗೂ ಅವುಗಳ ದರದ ಬಗ್ಗೆ ಇಲ್ಲಿದೆ ಮಾಹಿತಿ  

PREV
15
ನೀತಾ ಅಂಬಾನಿ ಬಳಿ ಇರುವ ಲಕ್ಸುರಿ ವಾಚ್‌ಗಳು ಹಾಗೂ ಅವುಗಳ ದುಬಾರಿ ದರ

ನಮ್ಮ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಗ್ಗೆ ಎಲ್ಲರಿಗೂ ಗೊತ್ತು. ಅವರ ಪತ್ನಿ ನೀತಾ ಅಂಬಾನಿ ಕೂಡ ಎಲ್ಲರಿಗೂ ಪರಿಚಿತರು. ಅವರ ಉಡುಗೆ, ಆಭರಣಗಳಿಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ನೀತಾ ಅವರ ಬಳಿ ದುಬಾರಿ ಬಟ್ಟೆ, ಆಭರಣಗಳು ಮಾತ್ರವಲ್ಲದೆ ಚೆಂದದ ವಾಚುಗಳ ಸಂಗ್ರಹ ಕೂಡ ಇದೆ. ಅವರ ಬಳಿ ಎಷ್ಟು ದುಬಾರಿ ವಾಚುಗಳಿವೆ ಅಂತ ನೋಡೋಣ...

 

25

ಜಾಕೋಬ್ & ಕಂಪನಿ ವಾಚ್ :ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ನೀತಾ ಅಂಬಾನಿ Jacob & Co Fleurs De Jardin Pink Sapphire ವಾಚ್ ಧರಿಸಿದ್ದರು. 3.9 ಕೋಟಿ ಬೆಲೆಬಾಳುವ ಈ ವಾಚ್ 18 ಕ್ಯಾರೆಟ್ ಚಿನ್ನದಿಂದ ತಯಾರಿಸಲ್ಪಟ್ಟಿದೆ.

35

ಪಟೆಕ್ ಫಿಲಿಪ್ ನಾಟಿಲಸ್: ನೀತಾ ಅಂಬಾನಿ ಧರಿಸಿದ್ದ Patek Philippe Nautilus ವಾಚಿನ ಬೆಲೆ 54 ಲಕ್ಷ. 1976 ರಿಂದ ಕ್ರೀಡಾ ವಾಚುಗಳ ಬ್ರಾಂಡ್‌ಗಳಲ್ಲಿ ಇದು ಒಂದಾಗಿದ್ದು, ಐಷಾರಾಮಿ ಜೀವನದ  ಸಂಕೇತವಾಗಿದೆ.

45
ಪಟೆಕ್ ಫಿಲಿಪ್

ನೀತಾ ಅಂಬಾನಿ ಧರಿಸಿದ್ದ Patek Philippe Aquanaut Luce Haute Joaillerie ವಾಚ್‌ನ ದರ ಸುಮಾರು 1.3 ರಿಂದ 1.6 ಕೋಟಿವರೆಗೆ ಇದೆ. 

55

ಕಾರ್ಟಿಯರ್ ಲೈಬ್ರೆ: ನೀತಾ ಅಂಬಾನಿ ಬಳಿ ಇರುವ Cartier Libre WD000002 ವಾಚಿನ ಬೆಲೆ 25 ಲಕ್ಷ. 18 ಕ್ಯಾರೆಟ್‌ನ ರೋಸ್‌ ಗೋಲ್ಡ್‌ನಿಂದ ಈ ವಾಚನ್ನು ತಯಾರಿಸಲಾಗಿದೆ. 

Read more Photos on
click me!

Recommended Stories