ಹಸಿರು ಸೀರೆಯುಟ್ಟು ಮಲ್ಲಿಗೆ ಮುಡಿದ ವೈಷ್ಣವಿ ಗೌಡ, ನಮ್ ಸೀತೆ ಸಾಂಪ್ರದಾಯಿಕ ಗೊಂಬೆ ಎಂದ ನೆಟ್ಟಿಗರು!

Published : Dec 17, 2023, 07:42 PM ISTUpdated : Dec 17, 2023, 07:45 PM IST

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದುಕೊಂಡಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.

PREV
18
ಹಸಿರು ಸೀರೆಯುಟ್ಟು ಮಲ್ಲಿಗೆ ಮುಡಿದ ವೈಷ್ಣವಿ ಗೌಡ, ನಮ್ ಸೀತೆ ಸಾಂಪ್ರದಾಯಿಕ ಗೊಂಬೆ ಎಂದ ನೆಟ್ಟಿಗರು!

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದುಕೊಂಡಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.

28

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಗಿ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮೆರೂನ್ ಜರಿಯಂಚಿನ ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟು ಮಿಂಚುತ್ತಿದ್ದಾರೆ. ವೈಷ್ಣವಿ ಗೌಡ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 

38

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ನೆಟ್ಟಿಗರು ಸಹ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ.

48

ಸೀತಾರಾಮ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಅವರ ಪಾತ್ರವು ಕೂಡಾ ಅಮೋಘವಾಗಿ ಮೂಡಿಬರುತ್ತಿದೆ.

58

ಇದಲ್ಲದೆ ಸೀರಿಯಲ್‌ನಲ್ಲಿ ಈಗ ನಟಿಯ ಹೆಣ್ಣು ನೋಡುವ ಶಾಸ್ತ್ರದ ಶೂಟಿಂಗ್ ನಡೆಯುತ್ತಿದ್ದು, ಹೀಗಾಗಿ ವೈಷ್ಣವಿ ಗೌಡ ಹೆಚ್ಚು ಹೆಚ್ಚಾಗಿ ಸೀರೆಯಲ್ಲಿ ಫೋಟೋಶೂಟ್ ಮಾಡಿಸ್ಕೊಂಡು ಪೋಸ್ಟ್ ಮಾಡುತ್ತಿದ್ದಾರೆ.

68

ವೈಷ್ಣವಿ ಗೌಡ ಮಾರ್ಡನ್‌ ಡ್ರೆಸ್‌ನಲ್ಲಿಯೂ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಆದರೆ, ಸೀರೆಯಲ್ಲಿ ಕಾಣಿಸುವ ಹಾಗೆ ಮುದ್ದಾಗಿ ಮಾಡರ್ನ್ ಡ್ರೆಸ್‌ನಲ್ಲಿ ವೈಷ್ಣವಿ ಕಾಣಿಸುವುದಿಲ್ಲ.

78

ಇದೀಗ ಸೀರೆ ತೊಟ್ಟು, ಅದಕ್ಕೆ ತಕ್ಕ ಹಾಗೆಯೇ ಸಿಂಪಲ್ ಮೇಕಪ್ ಮಾಡಿಕೊಂಡು , ಅದಕ್ಕೆ ಅನುಗುಣವಾಗಿ ಸಿಂಪಲ್ ಆಭರಣಗಳನ್ನೂ ತೊಟ್ಟುಕೊಂಡು ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಾರೆ. 

88

ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ ವೈಷ್ಣವಿ ಗೌಡ. ಇದೀಗ ಸೀತಾ ರಾಮ ಧಾರಾವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. 

Read more Photos on
click me!

Recommended Stories