59 ವಯಸ್ಸಲ್ಲೂ 20ರ ಹುಡುಗಿಯಂತೆ ಕಾಣುವ ಈ ಮಹಿಳೆಯ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?

First Published Feb 8, 2024, 5:10 PM IST

ವಿಕ್ಕಿ ಡೆರೋಸಾ ಎಂಬ ಈ ಮಹಿಳೆ ತಮ್ಮ 60ನೇ ವಯಸ್ಸಿನಲ್ಲೂ 20 ರ ಹುಡುಗಿಯರು ನಾಚುವಂತಹ ಸೌಂದರ್ಯ ಹೊಂದಿದ್ದಾರೆ. ಯಾವುದೇ ದುಬಾರಿ ಸ್ಕಿನ್ ಕೇರ್ ಪ್ರಾಡಕ್ಟ್ ಬಳಕೆ ಮಾಡದೆ, ನ್ಯಾಚುರಲ್ ಇಂಗ್ರೀಡಿಯಂಟ್ಸ್ ಬಳಸಿ ಹೇಗೆ ತಮ್ಮ ಸೌಂದರ್ಯ ಕಾಯ್ದುಕೊಂಡಿದ್ದಾರೆ ನೋಡಿ. 

ಎಷ್ಟೇ ವಯಸ್ಸಾದರೂ ತಮ್ಮ ಚರ್ಮ ಮತ್ತು ಫಿಟ್ನೆಸ್ ನಿಂದಾಗಿ ಇಳಿ ವಯಸ್ಸಿನಲ್ಲೂ ಎವರ್ ಗ್ರೀನ್(evergreen beauty) ಆಗಿರುವ ಅನೇಕ ಜನರಿದ್ದಾರೆ. ಕೆಲವರಂತೂ 40-50 ರ ವಯಸ್ಸಿನಲ್ಲೂ ಚಿರಯುವಕರಂತೆ ಕಾಣಿಸುವ ಮೂಲಕ, ಅವರ ನಿಜ ವಯಸ್ಸು ಯಾವುದು ಅನ್ನೋದೇ ಗೊತ್ತಾಗೋದಿಲ್ಲ. ಅಂತದ್ದೇ ಒಬ್ಬ ಮಹಿಳೆಯರ ಬಗ್ಗೆ ಇಲ್ಲಿ ನಾವು ಹೇಳುತ್ತೇವೆ. ಅವರು ತಮ್ಮ 60 ರ ವಯಸ್ಸಿನಲ್ಲೂ 30 ರ ಹುಡುಗಿಯಂತೆ ಕಾಣಿಸುತ್ತಾರೆ. 

ಹೌದು 59 ವರ್ಷದ ಮಹಿಳೆ ಹೆಸರು ವಿಕ್ಕಿ ಡೆರೋಸಾ (Vicky Derosa). ಆಕೆ ಪ್ರಸ್ತುತ ತನ್ನ ಸೌಂದರ್ಯದಿಂದಾಗಿಯೇ ಚರ್ಚೆಯಲ್ಲಿದ್ದಾರೆ. ಆಕೆ ವೃತ್ತಿಯಲ್ಲಿ ಬ್ಯೂಟಿ ಇನ್ ಫ್ಲೂಯೆನ್ಸರ್ . ಇತ್ತೀಚೆಗೆ, ಅವರು ತಮ್ಮ ಯಂಗ್ ಚರ್ಮದ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ, ಇದು ಸದ್ಯಕ್ಕಂತೂ ಎಲ್ಲರ ಗಮನ ಸೆಳೆಯುತ್ತಿದೆ. ವಿಕ್ಕಿ ತುಂಬಾನೆ ಯಂಗ್ ಆಗಿ ಕಾಣಲು ಯಾವುದೇ ದುಬಾರಿ ಕ್ರೀಮ್ಗಳು ಮತ್ತು ಪೌಡರ್ಗಳನ್ನು ಬಳಸುವುದಿಲ್ಲ ಎಂದು ಸ್ವತಃ ಡೆರೊಸಾ ಹೇಳಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. 

ವಿಕ್ಕಿ ಸೌಂದರ್ಯವನ್ನು ಕಾಪಾಡಲು ಎಂದಿಗೂ ಫಿಲ್ಲರ್ ಗಳು ಅಥವಾ ಬೊಟೊಕ್ಸ್ (Botox) ನಂತಹ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ, ಹ್ಯಾಂಡಿ ಹ್ಯಾಕ್ ಟ್ರೈ ಮಾಡ್ತಾರೆ. ಇದಕ್ಕಾಗಿ, ಅವರು ಬಿಳಿ ಮೃದುವಾದ ಫ್ಲಾನೆಲ್ ಟವೆಲ್ ತೆಗೆದುಕೊಂಡು ಇದನ್ನು ಬಿಸಿ ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿ ಹಿಂಡಿ ಮುಖದ ಮೇಲೆ ಸ್ವಲ್ಪ ಸಮಯ ಇರಿಸುತ್ತಾರೆ. ಅದನ್ನು ತೆಗೆದುಹಾಕಿದ ನಂತರ, ಒಣಗಿದ ಟವೆಲ್ ನಿಂದ ಮುಖವನ್ನು ತಟ್ಟಿ ಒರೆಸುತ್ತಾರೆ.ಮುಖವನ್ನು ಟವೆಲ್ ನಿಂದ ಎಂದಿಗೂ ಉಜ್ಜಬಾರದು ಎಂದು ಅವರು ಹೇಳ್ತಾರೆ. ಇದರಿಂದ ಚರ್ಮ ತಾಜಾತನ ಕಾಯ್ದುಕೊಳ್ಳುತ್ತದೆ. 

ವಿಕ್ಕಿ ಡೆರೋಸಾ ಅಮೆರಿಕದ ಕ್ಯಾಲಿಫೋರ್ನಿಯಾದ ನಿವಾಸಿ. ಸೋಷಿಯಲ್ ಮೀಡಿಯಾದಲ್ಲಿ (social media) ಅವರಿಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ, ಅವರ ಸೌಂದರ್ಯದ ರಹಸ್ಯ ವೈರಲ್ ಆದ ನಂತರ, ಅವರ ಅಭಿಮಾನಿಗಳು ಅವರ ಬ್ಯೂಟಿ ಸೀಕ್ರೆಟ್ ನ್ನು ಮೆಚ್ಚಿಕೊಂಡಿದ್ದಾರೆ. ಯಾವುದೇ ದುಬಾರಿ ಸ್ಕಿನ್ ಕೇರ್ ಬಳಸದೇ ಸಿಂಪಲ್ ವಿಧಾನದ ಮೂಲಕ ತ್ವಚೆಯನ್ನು ಯಂಗ್ ಆಗಿರಿಸುವ ಈ ವಿಧಾನ ಎಲ್ಲರಿಗೂ ಇಷ್ಟವಾಗಿದೆ. 

ಕೆಲವು ದಿನಗಳ ಹಿಂದೆ, ಇದೇ ರೀತಿಯ ಘಟನೆ ಸದ್ದು ಮಾಡಿತ್ತು,  ಮಹಿಳೆಯೊಬ್ಬಳು ತನ್ನ ಸೌಂದರ್ಯ ಸಲಹೆಗಳಿಗಾಗಿ ವೈರಲ್ ಆಗಿದ್ದು, 70 ನೇ ವಯಸ್ಸಿನಲ್ಲಿಯೂ ಮಹಿಳೆ ತುಂಬಾನೆ ಯಂಗ್ ಆಗಿ ಕಾಣಿಸುತ್ತಾರೆ. ಇವರು ತಮ್ಮ ಬ್ಯೂಟಿ ಸೀಕ್ರೆಟ್ ಹಂಚಿಕೊಂಡಿದ್ದು,  ಮೇಕಪ್ ವೈಪ್ ಗಳನ್ನು (makeup wipes) ಬಳಸುವುದನ್ನು ತಪ್ಪಿಸಬೇಕು, ನಿಮ್ಮ ಚರ್ಮವನ್ನು ಎಳೆಯದೇ ಇರೋದು ಮತ್ತು ಪ್ರತಿದಿನ ರೆಟಿನಾಲ್ ಲೋಷನ್ ಹಚ್ಚುವುದು. ಇವುಗಳನ್ನು ಪಾಲಿಸಿದ್ರೆ ಸ್ಕಿನ್ ತುಂಬಾನೆ ಚೆನ್ನಾಗಿರುತ್ತಂತೆ. 

ಅಷ್ಟೇ ಅಲ್ಲ, ಆಹಾರವೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ತಮ್ಮ ಎತ್ತರ-ತೂಕದ ಅನುಪಾತ ಮತ್ತು ತಮ್ಮ ದೈನಂದಿನ ಆಹಾರದಲ್ಲಿ ಆಯ್ಕೆ ಮಾಡುವ ಆಹಾರಗಳ ಮೇಲೆ ಸರಿಯಾದ ನಿಗಾ ಇಡಬೇಕು ಎಂದು ಅವರು ಹೇಳಿದ್ದಾರೆ. ನೀವು ಸಹ ಯಂಗ್ ಆಗಿ ಕಾಣಲು ಬಯಸಿದ್ರೆ ಈ ಸಲಹೆಗಳನ್ನು ಫಾಲೋ ಮಾಡೋದನ್ನು ಮರೆಯಬೇಡಿ. 

click me!