Kanchipuram silk value: ಮದುವೆಗೆ ಸೀರೆ ತೆಗೆದುಕೊಳ್ಳುವಾಗ ಹೆಚ್ಚಿನವರ ಆಯ್ಕೆ ಕಾಂಚೀಪುರಂ. ತಮಿಳುನಾಡಿನಲ್ಲಿ ತಯಾರಾಗುವ ಕಾಂಚೀಪುರಂ ಸೀರೆಯ ರೇಂಜೇ ಬೇರೆ. ಇದು ಭಾರತೀಯ ಕರಕುಶಲತೆಗೆ ಜೀವಂತ ಉದಾಹರಣೆಯಾಗಿದೆ. ಅದಕ್ಕಾಗಿಯೇ ಅವುಗಳ ಬೆಲೆ ಲಕ್ಷಗಟ್ಟಲೇ ಇರುವುದು. ಅದ್ಯಾಕೆ ಅಂತ ಮುಂದೆ ಓದಿ..
ಕಾಂಚೀಪುರಂ ಸೀರೆಗಳನ್ನು ಶುದ್ಧ ಮಲ್ಬೆರಿ ರೇಷ್ಮೆಯನ್ನು ಬಳಸಿ ತಯಾರಿಸಲಾಗುತ್ತದೆ. ಸೀರೆಯಲ್ಲಿ ಚಿನ್ನ ಮತ್ತು ಬೆಳ್ಳಿ ಜರಿಯನ್ನು ಸಹ ಬಳಸಲಾಗುತ್ತದೆ. ಹೆಚ್ಚಿನ ಸೀರೆಗಳು ಬಾರ್ಡರ್ ಮತ್ತು ಪಲ್ಲು ಮೇಲೆ ಬೆಳ್ಳಿ ಮತ್ತು ಚಿನ್ನ ಲೇಪಿತ ಜರಿ ವರ್ಕ್ ಒಳಗೊಂಡಿರುತ್ತವೆ.
26
15 ರಿಂದ 30 ದಿನಗಳು ಬೇಕಾಗುತ್ತೆ
ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೀರೆಗಳನ್ನು ಕೈಯಿಂದ ತಯಾರಿಸಲಾಗುತ್ತದೆ. ಒಂದೇ ಸೀರೆಯನ್ನು ಕೈಯಿಂದ ತಯಾರಿಸಲು 15 ರಿಂದ 30 ದಿನಗಳು ಬೇಕಾಗುತ್ತದೆ. ವಿಶೇಷವಾಗಿ ದುಬಾರಿ ಸೀರೆಗಳ ಮೇಲಿನ ವರ್ಕ್ ಕೆಲಸ ಪೂರ್ಣಗೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.
36
ಹೊಲಿಗೆ ಎಂದಿಗೂ ಹರಿಯಲ್ಲ
ಕಾಂಚೀಪುರಂ ಸೀರೆಯ ಅಂಚು, ಬಾರ್ಡರ್ ಮತ್ತು ಪಲ್ಲುವನ್ನ ಪ್ರತ್ಯೇಕವಾಗಿ ನೇಯಲಾಗುತ್ತದೆ. ನಂತರ ಸೀರೆಯನ್ನು "ಕೊರ್ವೈ" ನೇಯ್ಗೆ ಬಳಸಿ ಜೋಡಿಸಲಾಗುತ್ತದೆ. ಈ ಹೊಲಿಗೆಯ ವಿಶೇಷತೆಯೆಂದರೆ ಸೀರೆ ಹರಿದಿದ್ದರೂ ಈ ಹೊಲಿಗೆ ಎಂದಿಗೂ ಹರಿಯುವುದಿಲ್ಲ.
ಈ ಸೀರೆಗಳ ವಿನ್ಯಾಸಗಳು ಅಂದರೆ ಡಿಸೈನ್ ದಕ್ಷಿಣ ಭಾರತದ ದೇವಾಲಯಗಳು, ಗುಹೆಗಳು ಮತ್ತು ಪ್ರಕೃತಿಯಲ್ಲಿರುವ ಶಿಲ್ಪಗಳಿಂದ ಪ್ರೇರಿತವಾಗಿವೆ. ಪ್ರತಿಯೊಂದು ಮಾದರಿಯು ತನ್ನದೇ ಆದ ಸಾಂಸ್ಕೃತಿಕ ಮಹತ್ವ ಮತ್ತು ಅರ್ಥವನ್ನು ಹೊಂದಿದೆ.
56
ವಧುವಿನ ಸೀರೆ
ಕಾಂಚೀಪುರಂ ಸೀರೆ ಕೇವಲ ಬಟ್ಟೆಯ ತುಣುಕಲ್ಲ, ಅದು ಪರಂಪರೆಯಾಗಿದೆ. ದಕ್ಷಿಣ ಭಾರತದಲ್ಲಿ ಇದು ವಧುವಿನ ಸೀರೆಯಾಗಿ ವಿಶೇಷ ಸ್ಥಾನವನ್ನು ಹೊಂದಿದೆ. ಅನೇಕ ಕುಟುಂಬಗಳಲ್ಲಿ ಇದನ್ನು ತಲೆಮಾರುಗಳಿಂದ ಅಮೂಲ್ಯವಾಗಿ ಸಂರಕ್ಷಿಸಲಾಗಿದೆ.
66
ಬೆಲೆ ಲಕ್ಷ ತಲುಪಲು ಕಾರಣವೇನು?
ಕಾಂಚೀಪುರಂ ಸೀರೆಗಳ ಬೆಲೆ ಹಲವಾರು ಅಂಶಗಳನ್ನು ಅವಲಂಬಿಸಿ ಬದಲಾಗುತ್ತದೆ. ಬಳಸಿದ ರೇಷ್ಮೆ ಮತ್ತು ಜರಿ, ವಿನ್ಯಾಸದ ಸಂಕೀರ್ಣತೆ, ಸೀರೆಯ ಉದ್ದ, ನೇಕಾರನ ಕರಕುಶಲತೆ ಮತ್ತು ಸಮಯ. ಜರಿಯಲ್ಲಿ ಬಳಸುವ ಚಿನ್ನ ಅಥವಾ ಬೆಳ್ಳಿ ಹೆಚ್ಚು ಜಟಿಲ ಮತ್ತು ಶುದ್ಧವಾಗಿದ್ದರೆ ಬೆಲೆ ಹೆಚ್ಚಾಗುತ್ತದೆ.