ಏನ್ರೀ ಇದು ಅನ್ಯಾಯ? ಕಾರ್ಯಕ್ರಮ ಅನಂತ್ ರಾಧಿಕಾದ್ದು; ವಧುಗಿಂತ ಗ್ರ್ಯಾಂಡ್ ಡ್ರೆಸ್ ಹಾಕ್ಕೊಂಡು ಮೆರಿದಿದ್ದು ಜಾನ್ವಿ ಕಪೂರ್!

First Published | Jul 7, 2024, 3:34 PM IST

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಸಂಗೀತ ಕಾರ್ಯಕ್ರಮದಲ್ಲಿ ಒಬ್ಬರಿಗಿಂತ ಒಬ್ಬರು ಮಿರಿಮಿರಿ ಮಿನುಗೋ ಬಟ್ಟೆಯನ್ನು ಹಾಕಿದ್ದರು. ಅಂಬಾನಿ ಮನೆಯವರಂತೂ ಬಿಡಿ, ನೈಜ ವಜ್ರವನ್ನೇ ಬಟ್ಟೆ ತುಂಬಾ ಹಾಕಿಕೊಂಡಿದ್ದರೂ ಅಚ್ಚರಿ ಇಲ್ಲ. ಆದರೆ, ಅಷ್ಟೊಂದು ಸೆಲೆಬ್ರಿಟಿಗಳ ನಡುವೆ ಎಲ್ಲರ ಮೆಚ್ಚುಗೆ ಪಡೆದು ಗಮನ ಸೆಳೆದಿದ್ದು ಮಾತ್ರ ಬಾಲಿವುಡ್ ನಟಿ ಜಾನ್ವಿ ಕಪೂರ್ ಧರಿಸಿದ್ದ ಲೆಹೆಂಗಾ.

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಸಂಗೀತ ಕಾರ್ಯಕ್ರಮದಲ್ಲಿ ಒಬ್ಬರಿಗಿಂತ ಒಬ್ಬರು ಮಿರಿಮಿರಿ ಮಿನುಗೋ ಬಟ್ಟೆಯನ್ನು ಹಾಕಿದ್ದರು. ನೀತಾ ಅಂಬಾನಿ, ಶ್ಲೋಕಾ, ಇಶಾ, ರಾಧಿಕಾ ಪ್ರತಿಯೊಬ್ಬರೂ ಲೆಹೆಂಗಾದ ತುಂಬಾ ಚಿನ್ನ ವಜ್ರವನ್ನೇ ಹೊದ್ದಿದ್ದರೂ ಅಚ್ಚರಿ ಇಲ್ಲ. 

ಇನ್ನು ಅಲ್ಲಿ ಬಂದ ನೆಂಟರಿಷ್ಟರು, ಬಾಲಿವುಡ್ ನಟನಟಿಯರೆಲ್ಲರೂ ಥೀಮ್‌ನಂತೆ ಮಿರಿಮಿರಿ ಮಿಂಚೋ ಲೆಹೆಂಗಾ ಹಾಕಿಕೊಂಡಿದ್ದರು. ಆದರೆ, ಎಲ್ಲರ ನಡುವೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು ಬಾಲಿವುಡ್ ನಟಿ ಜಾನ್ವಿ ಕಪೂರ್ ಧರಿಸಿದ್ದ ಲೆಹೆಂಗಾ. 

Tap to resize

ನೀಲಿ ಹಸಿರು ಬಣ್ಣದ ಲೆಹೆಂಗಾ ತೊಟ್ಟು ನವಿಲೇ ಗರಿ ಬಿಚ್ಚಿ ನಡೆಯುತ್ತಿದ್ದಂತೆ ಕಾಣುತ್ತಿದ್ದರು ಜಾನ್ವಿ ಕಪೂರ್. ಜಾನ್ವಿ ಕಪೂರ್ ಫೋಟೋ ನೋಡಿದವರೆಲ್ಲರೂ ವಧು ರಾಧಿಕಾ ಮರ್ಚೆಂಟ್‌ಗಿಂತ ಗ್ರ್ಯಾಂಡಾಗಿ ರೆಡಿಯಾಗಿ ಬಂದಿದ್ದು ತಪ್ಪಲ್ಲವೇ ಎಂದು ಕೇಳುತ್ತಿದ್ದಾರೆ. 

ಮನೀಷ್ ಮಲ್ಹೋತ್ರಾ ಸಿದ್ಧಪಡಿಸಿದ ಈ ಲೆಹೆಂಗಾವನ್ನು ಜಾಮ್ನಗರದಲ್ಲಿ ಹೆಜ್ಜೆಗೊಂದು ಸಿಗುವ ನವಿಲುಗಳಿಂದ ಪ್ರೇರಿತವಾಗಿ ತಯಾರಿಸಲಾಗಿದೆ ಎಂದಿದ್ದಾಳೆ ಜಾನ್ವಿ. 

ಈ ನೀಲಿ, ಹಸಿರು ಬಣ್ಣದ ಅದ್ಧೂರಿ ಲೆಹೆಂಗಾ ಜೊತೆಗೆ ಹಸಿರು ಬಿಳಿ ಹರಳುಗಳ ನೆಕ್ಲೇಸ್ ಹಾಗೂ ಇಯರಿಂಗ್ ಹಾಕಿಕೊಂಡು ತ್ರಿಲೋತ್ತಮೆಯಂತೆ ಕಾಣುತ್ತಿದ್ದ ಜಾನ್ವಿ ಕಾರ್ಯಕ್ರಮದ ಎನರ್ಜಿಯನ್ನೇ ಬದಲಿಸಿದಳು.

ಇನ್ನು ಸಮಾರಂಭದಲ್ಲಿ ಜಾನ್ವಿ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ನೃತ್ಯ ಮಾಡಿದ್ದು, ಶಿಖರ್ ಆಕೆಯ ಲೆಹೆಂಗಾ ಸರಿಪಡಿಸಿದ ಫೋಟೋಗಳು ವೈರಲ್ ಆಗಿವೆ. 

ಜಾನ್ವಿ ಕಪೂರ್ ಪೀಕಾಕ್ ಲೆಹೆಂಗಾ ನೋಡಿದ ಹೆಣ್ಣುಮಕ್ಕಳು ಇದು ತಾವು ನೋಡಿದ್ದರಲ್ಲೇ ಅತಿ ಸುಂದರ ಲೆಹೆಂಗಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಪ್ರತಿ ಬಾರಿಯೂ ಜಾನ್ವಿ ಧರಿಸುವ ಬಟ್ಟೆಗಳು ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಸದ್ದು ಮಾಡುತ್ತವೆ. ಆಕೆ, ಗ್ಲ್ಯಾಮನ್ನು ಲೀಲಾಜಾಲವಾಗಿ ಕ್ಯಾರಿ ಮಾಡುತ್ತಾ ಎಲ್ಲರನ್ನೂ ಬೆರಗುಗೊಳಿಸುತ್ತಾಳೆ. 

ಇನ್ನು ಚಿತ್ರಗಳ ವಿಚಾರಕ್ಕೆ ಬಂದರೆ, ಜಾನ್ವಿ ನಟನೆಯ 'ಮಿ ಆ್ಯಂಡ್ ಮಿಸಸ್ ಮಾಹಿ' ಬಿಡುಗಡೆಯಾಗಿದ್ದು, ಆ.2ರಂದು 'ಉಲ್ಜಾ' ಬಿಡುಗಡೆಗೆ ಸಜ್ಜಾಗಿದೆ. 

Latest Videos

click me!