ಪ್ಯಾರಿಸ್‌ ಫ್ಯಾಶನ್ ವೀಕ್‌ನಲ್ಲಿ ಮತ್ಸ್ಯಕನ್ಯೆಯಾದ ಜಾನ್ವಿ ಕಪೂರ್; ಹಿಟ್ ಆಯ್ತು ಹಾಟ್ ಬ್ಯೂಟಿಯ ನೋಟ

First Published | Jun 25, 2024, 12:45 PM IST

ಜಾನ್ವಿ ಕಪೂರ್ ಪ್ರತಿಷ್ಠಿತ ಪ್ಯಾರಿಸ್ ಹಾಟ್ ಕೌಚರ್ ವೀಕ್‌ನಲ್ಲಿ ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡಿ, ನೋಡುಗರನ್ನು ಮತ್ಸಕನ್ಯೆಯ ಲುಕ್‌ನಿಂದ ಬೆರಗಾಗಿಸಿದರು.

ಲೆಜೆಂಡರಿ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್ 2018ರಿಂದ ತನ್ನ ಬಾಲಿವುಡ್ ಉದ್ಯಮದಲ್ಲಿ ಅಲೆಗಳನ್ನು ಎಬ್ಬಿಸುತ್ತಿದ್ದಾರೆ.

ಯುವ ಮತ್ತು ಪ್ರತಿಭಾವಂತ ನಟಿ ಈಗ ಪ್ಯಾರಿಸ್ ಹಾಟ್ ಕೌಚರ್‌ನಲ್ಲಿ ತನ್ನ ಅದ್ಭುತ ನೋಟದಿಂದ ಫ್ಯಾಷನ್ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾರೆ.

Tap to resize

ರಾಹುಲ್ ಮಿಶ್ರಾ ಅವರ ಹೊಸ ಕೌಚರ್ ಕಲೆಕ್ಷನ್ 'ಔರಾ' ದಿಂದ ಕಪ್ಪು ಬಸ್ಟಿಯರ್ ಮತ್ತು ಸ್ಕರ್ಟ್ ಸಂಯೋಜನೆಯಲ್ಲಿ ಜಾನ್ವಿಯ ರ್ಯಾಂಪ್ ವಾಕ್ ವಿಡಿಯೋಗಳು ವೈರಲ್ ಆಗಿವೆ. 

ಜಾನ್ವಿಯ ಈ ಮತ್ಸ್ಯಕನ್ಯೆ ನೋಟ ಎಲ್ಲರ ಮಚ್ಚುಗೆಗೆ ಪಾತ್ರವಾಗುತ್ತಿದೆ. ಜಾಗತಿಕ ಫ್ಯಾಶನ್ ಜಗತ್ತಿನಲ್ಲಿ ಭಾರತದ ಫ್ಯಾಶನ್ ಕೂಡಾ ಉತ್ತಮ ಸ್ಥಾನ ಗಳಿಸುವಲ್ಲಿ ಈ ವಿನ್ಯಾಸ ಮತ್ತು ಜಾನ್ವಿಯ ಸೌಂದರ್ಯ ಕೆಲಸ ಮಾಡಿದೆ. 

ಈ ಹಿಂದೆ ರಾಹುಲ್ ಮಿಶ್ರಾ ಮತ್ತೊಬ್ಬ ಬಾಲಿವುಡ್ ನಟಿ ಅನನ್ಯಾ ಪಾಂಡೆಗಾಗಿ ಚಿಟ್ಟೆಗಳ ಬಟ್ಟೆ ತಯಾರಿಸಿ ಪ್ರಶಂಸೆ ಪಡೆದಿದ್ದರು. 

ಜಾನ್ವಿ ಕೂಡಾ ಈವೆಂಟ್ ಬಳಿಕ ತನ್ನ ನೋಟದ ಫೋಟೋಗಳನ್ನು ಸೋಷ್ಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಇಂಟರ್ನೆಟ್‌ಗೆ ಬೆಂಕಿ ಹಚ್ಚೋದು ಸರಿನಾ ಕೇಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಜಾನ್ವಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರ್ಯಾಂಪ್ ವಾಕ್ ಮಾಡಿದ್ದು, ಇದು ಆಕೆಯ ಬದುಕಿನ ಮೈಲಿಗಲ್ಲಾಗಿದೆ. 

ಆದರೆ, ನಟಿಯ ನೋಟ, ಡ್ರೆಸ್ ಎಲ್ಲವನ್ನೂ ಜನರು ತುಂಬಾ ಇಷ್ಟಪಟ್ಟರೂ ಆಕೆಯ ರ್ಯಾಂಪ್ ವಾಕ್‌ಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದೆ. 

ಕೆಲವರು ಈ ನಡಿಗೆ 'ಕಾಲುಗಳ ಮಧ್ಯೆ ಏನೋ ಇಟ್ಟುಕೊಂಡು ಅದು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ನಡೆದಂತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. 

ಯಾಕೆ ಭಾರತೀಯ ಸೆಲೆಬ್ರಿಟಿಗಳು ರ್ಯಾಂಪ್ ವಾಕ್‌ನಲ್ಲಿ ಹೀಗೆ ಸೋಲುತ್ತಾರೋ ಅರ್ಥವಾಗುವುದಿಲ್ಲ ಎಂದು ಮತ್ತೊಬ್ಬರು ಸೇರಿಸಿದ್ದಾರೆ. 

Latest Videos

click me!