ಆಕೆಯದೇ ಚಿನ್ನ, ವಜ್ರ, ರತ್ನದ ಆಭರಣಗಳನ್ನು ಸೇರಿಸಿ ಹೊಲಿದ ಬ್ಲೌಸ್ ಧರಿಸಿದ ಇಶಾ ಅಂಬಾನಿ

Published : Mar 07, 2024, 12:04 PM IST

ಹಿಂದೆ ರಾಣಿ ಮಹಾರಾಣಿಯರೂ ಹೀಗಿರ್ತಿದ್ರೋ ಇಲ್ವೋ?! ಅಂಬಾನಿ ಮನೆಯ ಹೆಣ್ಣುಮಕ್ಕಳ ವಸ್ತ್ರ ಒಡವೆ ಬಾಲಿವುಡ್ ದಿವಾಗಳನ್ನೇ ಡಲ್ ಆಗಿಸಿದೆ. ಇಲ್ಲಿ ನೋಡಿ ಇಶಾ ಅಂಬಾನಿಯ ಬ್ಲೌಸ್..   

PREV
18
ಆಕೆಯದೇ ಚಿನ್ನ, ವಜ್ರ,  ರತ್ನದ ಆಭರಣಗಳನ್ನು ಸೇರಿಸಿ ಹೊಲಿದ ಬ್ಲೌಸ್ ಧರಿಸಿದ ಇಶಾ ಅಂಬಾನಿ

ಇಲ್ಲಿ ನೋಡಿ, ಇಶಾ ಅಂಬಾನಿ ಧರಿಸಿರುವ ಒಡವೆ ನೆಕ್ಲೇಸ್, ಬಳೆ, ಕಿವಿಯೋಲೆ ಅಷ್ಟೇ ಅಲ್ಲ.. ಸ್ವಲ್ಪ ಝೂಮ್ ಮಾಡಿ- ಆಕೆಯ ಬ್ಲೌಸ್ ತುಂಬಾ ಒಡವೆ ಒಡ್ಯಾಣಗಳೇ ತುಂಬಿವೆ.

28

ಹೌದು, ತಮ್ಮ ಅನಂತ್ ಅಂಬಾನಿಯ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಇಶಾ ಅಂಬಾನಿ ಧರಿಸಿದ ಲೆಹೆಂಗಾದ ಬ್ಲೌಸ್ ಕೋಟಿ ಕೋಟಿ ಬೆಲೆಯನ್ನು ಹಾಸಿ ಹೊದ್ದಿದೆ.

38

ಇದು ಇಶಾ ಅಂಬಾನಿಯ ಒಡವೆಗಳ ಸಂಗ್ರಹದ ಸಣ್ಣ ಝಲಕ್ ನೀಡುತ್ತಿದ್ದು, ಆಕೆಯ ವೈಯಕ್ತಿಕ ಸಂಗ್ರಹದ ಚಿನ್ನ, ವಜ್ರ, ಮುತ್ತು, ರತ್ನ, ಪಚ್ಚೆ, ಹವಳಗಳನ್ನು ಸೇರಿಸಿ ಇಡೀ ಬ್ಲೌಸ್ ತಯಾರಿಸಲಾಗಿದೆ. 

48

ಇದನ್ನು ತಯಾರಿಸುವ ವಿಡಿಯೋ ಈಗ ಹೊರ ಬಿದ್ದಿದ್ದು, ಸ್ವತಃ ನೂರಾರು ಕೋಟಿಗಳ ಒಡತಿಯರಾದ ಬಾಲಿವುಡ್ ನಟಿಯರೂ ಈ ಲಕ್ಷುರಿ ನೋಡಿ ಅಬ್ಬಬ್ಬಾ ಎಂದು ಕಣ್ಣು ಬಾಯಿ ಬಿಡುತ್ತಿದ್ದಾರೆ.

58

ಇಶಾ ಅಂಬಾನಿಯ ಈ ರಾಯಲ್ ಲುಕ್ ನೋಡಿದ ನೆಟ್ಟಿಗರು, ಹಿಂದೆ ರಾಣಿ ಮಹಾರಾಣಿಯರಿಗೂ ಈ ಐಶಾರಾಮಿತನವಿರಲಿಲ್ಲ ಎನಿಸುತ್ತದೆ. ಇವರಂತೂ ಈಗ ಭೂಮಿಯ ಮೇಲಿರುವ ಅತಿ ಅದೃಷ್ಟವಂತೆಯೇ ಸರಿ ಎನ್ನುತ್ತಿದ್ದಾರೆ. 

68

ಡಿಸೈನರ್‌ಗಳಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಹಂಚಿಕೊಂಡ ವೀಡಿಯೊದಲ್ಲಿ, ಆ ಆಭರಣಗಳು ಇಶಾ ಅವರ 'ವೈಯಕ್ತಿಕ ಸಂಗ್ರಹ'ದಿಂದ ಬಂದವು ಎಂದು ಸಂದೀಪ್ ವಿವರಿಸಿದ್ದಾರೆ. ಕೆಂಪು ಬಟ್ಟೆಯನ್ನು ಆಧಾರವಾಗಿ ಬಳಸಿ ಮೇಲೆ ಒಡವೆಗಳನ್ನೇ ಡಿಸೈನ್ ಆಗಿ ಬಳಸಲಾಗಿದೆ. 

78

ಮಾಣಿಕ್ಯ, ವಜ್ರಗಳು, ಪಚ್ಚೆಗಳು, ಚಿನ್ನ ಹೀಗೆ ನೀವು ಯಾವುದೇ ರತ್ನವನ್ನು ಹೆಸರಿಸಿ- ಅವು ಈ ಬ್ಲೌಸ್‌ನಲ್ಲಿವೆ. ಕ್ರಿಯೇಟಿವಿಟಿ ಹಾಗೂ ಅದ್ಧೂರಿತನಕ್ಕಾಗಿ ಈ ಬ್ಲೌಸ್ ತಯಾರಿಕೆಯ ವಿಡಿಯೋ ವೈರಲ್ ಆಗಿದೆ.

88

ಇಶಾ ಅಂಬಾನಿ, ರಾಧಿಕಾ ಮರ್ಚೆಂಟ್ ಹಾಗೂ ಶ್ಲೋಕಾ ಅಂಬಾನಿ ಹಾಗೂ ನೀತಾ ಅಂಬಾನಿ ಈ ಒಂದು ವಿವಾಹಪೂರ್ವ ಸಮಾರಂಭದ ನಂತರ ತಮ್ಮ ಜೀವನಶೈಲಿ, ಫ್ಯಾಶನ್, ಒಡವೆವಸ್ತ್ರಗಳ ಕಾರಣದಿಂದ ಸಖತ್ ಸುದ್ದಿಯಾಗುತ್ತಿದ್ದಾರೆ. 

Read more Photos on
click me!

Recommended Stories