5 ಕೋಟಿ ವಾಚ್, 9 ಲಕ್ಷದ ಟಾಪ್ ಪ್ಯಾಂಟ್, ಹತ್ತಾರು ಕೋಟಿ ಲೆಹೆಂಗಾ..ಸಾವ್ರಗಳಲ್ಲಿರೋ ಏನನ್ನೂ ಧರಿಸೋದೇ ಇಲ್ವಾ ಶ್ಲೋಕಾ ಅಂಬಾನಿ?

First Published | Mar 6, 2024, 6:50 PM IST

ಮುಖೇಶ್ ಅಂಬಾನಿಯ ಹಿರಿಸೊಸೆ ಶ್ಲೋಕಾ ಮೆಹ್ತಾ ಕೈನಲ್ಲಿ ಕಣ್ಣು ಕೋರೈಸುವಂತೆ ಹೊಳೆಯುತ್ತಿದ್ದ ವಾಚ್ ಬರೋಬ್ಬರಿ 5 ಕೋಟಿಗಳದ್ದು. ಈಕೆ ಧರಿಸುವ ಒಂದೊಂದು ಬಟ್ಟೆ, ಒಡವೆ ರೇಟ್ ಕೇಳ್ದಂಗೂ ಇವರು ಸಾವಿರಗಳಲ್ಲಿ ಸಿಗುವ ಯಾವೊಂದನ್ನೂ ಧರಿಸೋದೇ ಇಲ್ವೇ ಅಂತ ಕೇಳ್ತಿದಾರೆ ನೆಟಿಜನ್ಸ್.

ಹೇಳೀ ಕೇಳೀ ವಜ್ರದ ವ್ಯಾಪಾರಿ ಮಗಳು ಮುಖೇಶ್ ಅಂಬಾನಿಯ ಹಿರಿಸೊಸೆ ಶ್ಲೋಕಾ ಮೆಹ್ತಾ. ಹೀಗಾಗಿ, ಆಕೆಯ ಕ್ಲೋಸೆಟ್‌ನಲ್ಲಿ ಕಂಡುಬರುವ ವಜ್ರದ ಆಭರಣಗಳ ವೈವಿಧ್ಯತೆ ಮತ್ತು ಸಂಖ್ಯೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಆಕಾಶ್ ಅಂಬಾನಿಯ ಪತ್ನಿ ಶ್ಲೋಕಾಗೆ ಪೃಥ್ವಿ ಮತ್ತು ವೇದಾ  ಎಂಬಿಬ್ಬರು ಮಕ್ಕಳಿದ್ದರೂ ಸಂತೂರ್ ಮಮ್ಮಿಯಂತಿರುವ ಆಕೆ ನಿಜವಾದ ಫ್ಯಾಷನಿಸ್ಟ್ ಆಗಿದ್ದಾರೆ.

Tap to resize

ಮೈದುನ ಅನಂತ್ ಅಂಬಾನಿಯ ವಿವಾಹಪೂರ್ವ ಸಮಾರಂಭದಲ್ಲಿ ಶ್ಲೋಕಾ ತಮ್ಮ ಬಳಿ ಇರುವ ಕೆಲ ಅಪರೂಪದ ಒಡವೆ, ವಸ್ತ್ರ ಧರಿಸಿ ಎಲ್ಲೆಡೆ ಫ್ಯಾಶನ್‌ಗಾಗಿ ಸುದ್ದಿಯಾಗುತ್ತಿದ್ದಾರೆ. 
 

ಅಂದ ಹಾಗೆ ಸಮಾರಂಭದಲ್ಲಿ ಕೆಂಪು ಲೆಹೆಂಗಾ ಧರಿಸಿದ್ದ ಶ್ಲೋಕಾ ಸ್ಟಡ್ ಕಿವಿಯೋಲೆಗಳು, ಲೇಯರ್ಡ್ ಬ್ರೇಸ್ಲೆಟ್, ಸ್ಟೇಟ್ಮೆಂಟ್ ರಿಂಗ್ ಮತ್ತು ವಾಚ್ ಜೊತೆಗೆ ಲೇಯರ್ಡ್ ಡೈಮಂಡ್ ನೆಕ್ಲೇಸ್ ಅನ್ನು ಧರಿಸಿದ್ದರು. 

ಈ ಸಂದರ್ಭದಲ್ಲಿ ಶ್ಲೋಕಾ ಧರಿಸಿದ್ದ ಕಣ್ಣು ಕೋರೈಸುವ ವಾಚ್ ಫಿಲಿಪ್ ನಾಟಿಲಸ್ 7118/1450G ಅನ್ನು ಧರಿಸಿದ್ದರು. ವಾಚ್‌ನ ಮಾರುಕಟ್ಟೆ ಮೌಲ್ಯ ಬರೋಬ್ಬರಿ ರೂ. 4,80,00,000 (INR 4.8 ಕೋಟಿ). 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಮುಂಚೆ ನಡೆದ 'ಜಂಗಲ್ ಸಫಾರಿ' ಕಾರ್ಯಕ್ರಮಕ್ಕಾಗಿ, ಶ್ಲೋಕಾ ಬೂದು-ಹ್ಯೂಡ್ ಕ್ರಾಪ್ ಟಾಪ್‌ ಮತ್ತು ಪ್ಯಾಂಟ್ ಧರಿಸಿದ್ದರು. ಈ ಕ್ರಾಪ್ ಟಾಪೊಂದರ ಬೆಲೆಯೇ 3 ಲಕ್ಷದ 71 ಸಾವಿರ. ಇನ್ನು ಪ್ಯಾಂಟ್ ಬೆಲೆ 5 ಲಕ್ಷ 45 ಸಾವಿರ. ಒಟ್ಟಾರೆ ಅವರ ಈ ಡ್ರೆಸ್ ಬೆಲೆ 9 ಲಕ್ಷ ರೂ.

ಈ ಡ್ರೆಸ್ನೊಂದಿಗೆ ಶ್ಲೋಕಾ ಕೊಂಚ ಹಳದಿ ಬಣ್ಣದ ಸನ್ ಗ್ಲಾಸ್ ಧರಿಸಿರುವುದನ್ನು ಕಾಣಬಹುದು. ಈ ಸನ್ ಗ್ಲಾಸ್ ಬೆಲೆ ಬರೋಬ್ಬರಿ ರೂ. 82,432.

ಶ್ಲೋಕಾ ಹೆರೆಮ್ಸ್, ಗೋಯಾರ್ಡ್, ಇತ್ಯಾದಿ ಐಷಾರಾಮಿ ಹ್ಯಾಂಡ್‌ಬ್ಯಾಗ್‌ಗಳ ಸಂಗ್ರಹವನ್ನು ಹೊಂದಿದ್ದು, ಇವುಗಳ ಆರಂಭಿಕ ಬೆಲೆಯೇ ಲಕ್ಷಗಳಲ್ಲಿ ಶುರುವಾಗುತ್ತದೆ.

ಇನ್ನು ಶ್ಲೋಕಾ ಮೆಹ್ತಾಗೆ ಆಕೆಯ ವಿವಾಹ ಸಮಯದಲ್ಲಿ ಅತ್ತೆ ನೀತಾ ಅಂಬಾನಿ 300 ಕೋಟಿ ಬೆಲೆ ಬಾಳುವ ವಜ್ರದ ನೆಕ್ಲೇಸ್ ಕೊಟ್ಟಿದ್ದಾರೆ. ಇದರೊಂದಿಗೆ 450 ಕೋಟಿಯ ನೆಕ್ಲೇಸ್ ಕೂಡಾ ಶ್ಲೋಕಾ ಬಳಿ ಇದೆ. 

ಇನ್ನು ಶ್ಲೋಕಾ ಬಳಿ ಮರ್ಸಿಡಸ್, ಬಿಎಂಡಬ್ಲೂ, ಬೆಂಟ್ಲಿ ಸೇರಿದಂತೆ ಹಲವು ಐಶಾರಾಮಿ ಕಾರುಗಳ ಸಂಗ್ರಹವಿದೆ. ಒಂದೊಂದರ ಬೆಲೆಯೂ 3-4 ಕೋಟಿಯಲ್ಲಿದೆ. 

Latest Videos

click me!