100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ

First Published | Oct 21, 2023, 1:19 PM IST

ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ವಿವಾಹವು 700 ಕೋಟಿ ರೂಪಾಯಿಗಿಂತ ಹೆಚ್ಚು ಬಜೆಟ್‌ನೊಂದಿಗೆ ಭಾರತದಲ್ಲಿ ನಡೆದ ಅತ್ಯಂತ ದುಬಾರಿ ವಿವಾಹವೆಂದು ಪರಿಗಣಿಸಲ್ಪಟ್ಟಿದೆ. ಆದರೆ ದೇಶದ ಅತ್ಯಂತ ದುಬಾರಿ ರಾಜಮನೆತನದ ವಿವಾಹವು 2015 ರಲ್ಲಿ ಗುಜರಾತ್‌ನ ರಾಜ್‌ಕೋಟ್‌ ರಾಜಮನೆತನದಲ್ಲಿ ನಡೆಯಿತು.

ರಾಜ್‌ಕೋಟ್‌ನ ರಾಜಕುಮಾರ ಜೈದೀಪ್ ಜಡೇಜಾ ಮತ್ತು ರಾಜಕುಮಾರಿ ಶಿವಾತ್ಮಿಕಾ ಕುಮಾರ್ ಅವರ ರಾಜಮನೆತನದ ವಿವಾಹವು ಅತ್ಯಂತ ಅದ್ದೂರಿಯಾಗಿ ನಡೆಯಿತು, ಇಡೀ ಗುಜರಾತ್ ನಗರವು ನವವಿವಾಹಿತ ವಧುವಿನಂತೆ ಕಂಗೊಳಿಸಿತ್ತು. 
 

ಜಡೇಜಾ ರಾಜಮನೆತನವು ರಾಜ್‌ಕೋಟ್‌ನ ಅತ್ಯಂತ ಶ್ರೀಮಂತ ಮತ್ತು ಪ್ರಮುಖ ರಾಯಲ್‌ ಕುಟುಂಬವಾಗಿದೆ ಮತ್ತು ಅವರು ತಮ್ಮ ಉತ್ತರಾಧಿಕಾರಿಯ ವಿವಾಹವನ್ನು ಅತ್ಯಂತ ಐಷಾರಾಮಿ ಸಮಾರಂಭವಾಗಿ ಆಚರಿಸಿದರು. ದಾನ ಧರ್ಮಗಳನ್ನು ಮಾಡಿದರು.

Tap to resize

ರಾಜಕುಮಾರ ಜೈದೀಪ್ ಜಡೇಜಾ ಮತ್ತು ರಾಜಕುಮಾರಿ ಶಿವಾತ್ಮಿಕಾ ಕುಮಾರ್ ಅವರು ಜಡೇಜಾ ಕುಟುಂಬದ ಪೂರ್ವಜರ ಮನೆಯಾದ ರಂಜಿತ್ ವಿಲಾಸ್‌ನಲ್ಲಿ ಅದ್ಧೂರಿ ವಿವಾಹವಾದರು.

ಇದು ದೊಡ್ಡ ಹುಲ್ಲು ಹಾಸು ಹೊಂದಿರುವ ಮತ್ತು 100 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ರಾಜಮನೆತನವಾಗಿದೆ. ಈ ರಾಜಮನೆತನ ಅರಮನೆ ಈಗ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ರಾಜ್‌ಕೋಟ್‌ನ ರಾಜಮನೆತನದ ಜಡೇಜಾ ಕುಟುಂಬವು ವಿವಿಧ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಅದ್ದೂರಿ ಮದುವೆಯನ್ನು ಆಯೋಜಿಸಿತ್ತು ಮತ್ತು ಮೆರವಣಿಗೆಯಲ್ಲಿ 15,000 ಬಾರಾತಿಗಳನ್ನು ಹೊಂದಿತ್ತು.

ಇದಲ್ಲದೆ ಮದುವೆಯಲ್ಲಿ ಸುಮಾರು 25,000  ಅತಿಥಿಗಳು ಇದ್ದರು. ಇವರಲ್ಲಿ ಹೆಚ್ಚಿನವರು ಜಡೇಜಾ ಖಾಸಗಿ ಜೆಟ್‌ಗಳಲ್ಲೇ ಪ್ರಯಾಣ ಮಾಡಿದ್ದರು.

ವರನು ಆನೆಯ ಮೇಲೆ ಸವಾರಿ ಮಾಡುತ್ತಿದ್ದಾಗ ವಧುವನ್ನು ರಾಜ ಆಭರಣಗಳಿಂದ ಅಲಂಕರಿಸಲಾಗಿತ್ತು. ಮದುವೆಯ ಒಟ್ಟಾರೆ ವೆಚ್ಚ 150 ಕೋಟಿ ರೂ.ಗಿಂತ ಹೆಚ್ಚಿತ್ತು, ಆದರೆ ಜಡೇಜಾ ಕುಟುಂಬವು ಮದುವೆಯ ಸಮಯದಲ್ಲಿ ಸಾವಿರಾರು ಬಡವರಿಗೆ ಆಹಾರ ವಿತರಣೆ ಮಾಡಿತ್ತು ಸುಮಾರು7ರಿಂದ 8 ಕೋಟಿ ರೂ. ದೇಣಿಗೆ ನೀಡಿತ್ತು.
 

ಆದರೂ ಈ ಮದುವೆಯ  ಉದ್ಯಮಿ  ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ  ಮತ್ತು ಆನಂದ್ ಪಿರಾಮಲ್ ಅವರ ಮದುವೆಗೆ   ಖರ್ಚು ಮಾಡಿದ ವೆಚ್ಚದ ಅರ್ಧಕ್ಕಿಂತ ಕಡಿಮೆ. ಇಶಾ ಮದುವೆಗೆ 700 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇಶಾ ಅಂಬಾನಿ 90 ಕೋಟಿ ರೂಪಾಯಿ ಬೆಲೆಯ ವಿಶ್ವದ ಅತ್ಯಂತ ದುಬಾರಿ ಲೆಹೆಂಗಾವನ್ನು ಧರಿಸಿದ್ದರು. 
 

Latest Videos

click me!