ಬಟ್ಟೆಯೇ ಹಾಕದೆ, ನೂಲಿನ ಎಳೆಯಿಂದ ಮೈ ಮುಚ್ಚಿಕೊಂಡ ಮಲೈಕಾ, ನೋಡೋಕೆ ಎರಡು ಕಣ್‌ ಸಾಲ್ತಿಲ್ಲ ಎಂದ ನೆಟ್ಟಿಗರು!

First Published | Oct 20, 2023, 11:26 AM IST

ಬಾಲಿವುಡ್‌ ನಟಿ ಮಲೈಕಾ ಅರೋರಾ 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್‌. ಇತ್ತೀಚಿಗೆ ನಟಿ ಬ್ಲೂ ಶೈನಿಂಗ್‌ನಂತಿರೋ ಟ್ರಾನ್ಸ್‌ಪರೆಂಟ್ ಬಟ್ಟೆ ಧರಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಬಾಲಿವುಡ್‌ ನಟಿ ಮಲೈಕಾ ಅರೋರಾ 50ರ ಆಸು-ಪಾಸಿನಲ್ಲಿದ್ರೂ ಸಖತ್ ಹಾಟ್‌. ಫಿಗರ್ ಮೈಂಟೇನ್ ಮಾಡ್ಕೊಂಡು ಇನ್ನೂ ಹುಡುಗಿಯರು ನಾಚೋ ಹಾಗೆ ಇದ್ದಾರೆ. ಸಖತ್‌ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಪಡ್ಡೆಗಳ ನಿದ್ದೆ ಗೆಡಿಸುತ್ತಲೇ ಇರುತ್ತಾರೆ.

ಮಲೈಕಾ ಅರೋರಾ ಧರಿಸಿರೋ ಬಟ್ಟೆ ತುಂಬಾ ಇಂಟ್ರಸ್ಟಿಂಗ್ ಅನಿಸುತ್ತದೆ. ಇತ್ತೀಚಿಗೆ ನಟಿ ಬ್ಲೂ ಶೈನಿಂಗ್‌ನಂತಿರೋ ಟ್ರಾನ್ಸ್‌ಪರೆಂಟ್ ಬಟ್ಟೆ ಧರಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

Tap to resize

ಮಲೈಕಾ ಅರೋರಾ ಧರಿಸಿರೋ ಈ ಒಂದು ಗೌನ್ ಸ್ಪೆಷಲ್ ಅನಿಸುತ್ತದೆ. ಮಲೈಕಾ ದೇಹ ಸಿರಿಗೂ ಒಪ್ಪೋ ರೀತಿನೇ ಇದೆ. ಆದರೂ ಇದನ್ನ ನೋಡಿದ ನೆಟ್ಟಿಗರು ಮನಸ್ಸಿಗೆ ಬಂದ ರೀತಿ ಕಾಮೆಂಟ್ ಮಾಡಿದ್ದಾರೆ.

ಮಲೈಕಾ ಅರೋರಾ ಹೊಸ ರೀತಿಯ ಬಟ್ಟೆ ನೋಡಿ ಕೆಲವು ನೆಟ್ಟಿಗರು ತುಂಬಾ ಇಷ್ಟ ಪಟ್ಟಿದ್ದಾರೆ. ಇನ್ನು ಕೆಲವು ಫ್ಯಾನ್ಸ್ ಕೆಟ್ಟದಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇನ್ನು ಟ್ರಾನ್ಸ್‌ಪರೆಂಟ್ ಬಟ್ಟೆ ಹಾಕೋದಾದ್ರೆ ಬಟ್ಟೆ ಹಾಕೋ ಅಗತ್ಯವಾದ್ರೂ ಏನಿತ್ತು ಎಂದು ಒಬ್ಬರು ಕಮೆಂಟಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿ, ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇಂಥಾ ಬಟ್ಟೆ ಹಾಕಿಕೊಂಡು ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಮಲೈಕಾ ಫೋಟೋಸ್‌ಗೆ ಹಾರ್ಟ್‌, ಫೈರ್‌ ಇಮೋಜಿ ಮೂಲಕ ಲವ್‌ ಕಳುಹಿಸುತ್ತಿದ್ದಾರೆ.

50ರ ಆಸುಪಾಸಿನಲ್ಲಿರುವ ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅವರು ನಟಿಗಿಂತ ಮೊದಲು ರೂಪದರ್ಶಿ. ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್​ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ.

ಯೋಗ ಟೀಚರ್ ಆಗಿರುವ ಮಲೈಕಾ ಅರೋರಾ ಅವರ ಫಿಟ್ನೆಸ್ ಬಗ್ಗೆ ಎರಡನೇ ಮಾತೇ ಇಲ್ಲ. ನಟಿ 4೦ ವಯಸ್ಸು ಕಳೆದರೂ ಸುಂದರವಾಗಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ

ಮಲೈಕಾ ಅರೋರಾ ಅವರು ಮಾಡೆಲಿಂಗ್ ಹಾಗೂ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ. ಅವರು ಡ್ಯಾನ್ಸ್ ಶೋಗಳಿಗೆ ತೀರ್ಪುಗಾರರಾಗಿ ಭಾಗವಹಿಸಿ ಉತ್ತಮ ಸಂಭಾವನೆ ಗಳಿಸುತ್ತಾರೆ.
 

ಇತ್ತೀಚಿಗೆ ಮಲೈಕಾ ಅರ್ಜುನ್‌ ಕಪೂರ್‌ ಜೊತೆ ಲವ್‌ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವುದಾಗಿ ಸುದ್ದಿ ಹರಿದಾಡಿತ್ತು.   ಆದ್ರೆ ಈ ಕುರಿತು ಮಲೈಕಾ ಅಥವಾ ಅರ್ಜುನ್‌ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. 

Latest Videos

click me!