Tomato Face Pack to Remove Sun Tan? ಸೂರ್ಯನ ಬಿಸಿಲಿನಿಂದ ಮುಖ ಕಪ್ಪಾಗಿದೆಯೇ, ಟ್ಯಾನಿಂಗ್ ತೆಗೆಯಲು ದುಬಾರಿ ಕ್ರೀಂ, ಪಾರ್ಲರ್‌ಗೆ ಹೋಗುವುದು ಬೇಡ. ಈ ತಂತ್ರ ಬಳಸಿ ಮನೆಯಲ್ಲೇ ತಯಾರಿಸಿ,
ಇತ್ತೀಚೆಗೆ ಬೇಸಿಗೆ ಮಳೆಗಾಲ ಎನ್ನದೆ ಮಧ್ಯಾಹ್ನದ ಬಿಸಿಲು ವಿಪರೀತ ಎಂಬಂತಾಗಿದೆ. ಹೊರಗಡೆ ಕೆಲಸಕ್ಕೆ ಹೋಗುವ ಮಹಿಳೆಯರು ಬಿಸಿಲಿಗೆ ಮುಖ ಒಡ್ಡಿದಾಗ ಮುಖದ ಭಾಗ ಕಪ್ಪಾಗುತ್ತದೆ. ಇದನ್ನೇ ಟ್ಯಾನಿಂಗ್ ಅಂತಾರೆ. ಸಂಜೆ ಮನೆಗೆ ಬಂದು ಮುಖದ ಆಕಾರ ಕನ್ನಡಿಯಲ್ಲಿ ನೋಡಿಕೊಂಡಾಗ ಬೇಸರವಾಗುವುದುಂಟು.
24
ದುಬಾರಿ ಕ್ರೀಂ ಬೇಡ, ಪಾರ್ಲರ್‌ಗೂ ಗುಡ್‌ಬೈ!
ಈ ರೀತಿ ಮುಖದ ಕಾಂತಿ ಕಳೆದುಕೊಂಡಾಗ ಹೊರಗೆ ಹೋಗಲು ಹಿಂಜರಿಯುತ್ತಾರೆ. ಇದು ಒಬ್ಬರ ಸಮಸ್ಯೆಯಲ್ಲ. ಇದಕ್ಕಾಗಿ ದುಬಾರಿ ಕ್ರೀಮಗಳನ್ನೆಲ್ಲ ಖರೀದಿಸುವುದು, ಪಾರ್ಲರ್‌ಗೆ ಹೋಗುವುದು ಕಳೆದುಕೊಂಡ ಕಾಂತಿ ಮರಳಿ ಪಡೆಯಲು ದುಂದು ವೆಚ್ಚ ಮಾಡುತ್ತಾರೆ
34
ಟೊಮೆಟೋ ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಟೊಮೆಟೊ ಹಣ್ಣಿನಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳಿವೆ. ಇದರಲ್ಲಿರುವ ನೈಸರ್ಗಿಕ ಆಮ್ಲಗಳು(natural acids) ಆಯಿಲ್ ಸ್ಕಿನ್ ಸಮಸ್ಯೆಗೆ ಪರಿಹಾರ ನೀಡುತ್ತೆ ಅಷ್ಟೇ ಅಲ್ಲದೆ ಚರ್ಮವೂ ಕ್ಲೀನ್ ಆಗಿರುತ್ತೆ. ಇದರಲ್ಲಿ ವಿಟಮಿನ್ ಸಿ ಉರುವುದರಿಂದ ಚರ್ಮದ ಮೇಲಿನ ಕಪ್ಪು ಕಲೆಗಳು ಕಡಿಮೆ ಮಾಡುವುದಲ್ಲದೆ ಚರ್ಮದ ಬಣ್ಣವನ್ನ ನ್ಯಾಚುರಲ್ಲಾಗಿ ಗ್ಲೋ ಆಗುವಂತೆ ಮಾಡುತ್ತೆ. ಹೀಗಾಗಿ ಟೊಮೆಟೋ ನಿಯಮಿತವಾಗಿ ಬಳಸಿದ್ರೆ ಮುಖಕ್ಕೆ ನ್ಯಾಚುರಲ್ ಆಗಿ ಸುಂದರವಾಗಿ ಕಾಣುತ್ತೆ
ಮನೆಯಲ್ಲಿ ಟೊಮೆಟೊ ಫೇಸ್ ಪ್ಯಾಕ್ ತಯಾರಿಸುವುದು ತುಂಬಾ ಸುಲಭ. ಇದಕ್ಕಾಗಿ ಹೆಚ್ಚಿನ ಸಮಯ ಬೇಕಿಲ್ಲ. ಮೊದಲಿಗೆ ಚೆನ್ನಾಗಿರುವ ಕೆಂಪು ಬಣ್ಣದಲ್ಲಿ ಮಿಂಚುವ ಒಂದು ಹಣ್ಣನ್ನು ತೆಗೆದುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ, ಯಾವುದೇ ಕಾರಣಕ್ಕೂ ನೀರು ಬೆರೆಸಬೇಡಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಸಂಪೂರ್ಣವಾಗಿ ಹಚ್ಚಿ, ನಂತರ ಮೃದುವಾಗಿ ಉಜ್ಜಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ. ಪೂರ್ತಿಯಾಗಿ ಒಣಗಿದ ನಂತರ, ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಮುಖದಲ್ಲಿನ ಟ್ಯಾನ್ ಮಾಯವಾಗಿ ಚರ್ಮ ನ್ಯಾಚುರಲ್ ಬಣ್ಣಕ್ಕೆ ಹಿಂದಿರುಗುತ್ತದೆ. ಇಷ್ಟೊಂದು ಸುಲಭದ ಪರಿಹಾರ ಇರುವಾಗ ಶಾಪಿಂಗ್ ಮಾಲ್‌ಗಳಲ್ಲಿ ದುಬಾರಿ ಹಣ ಕೊಟ್ಟು ಕ್ರೀಮ್‌ಗಳನ್ನ ತರುವುದು ಅಗತ್ಯವೇ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.