Ripped Jeans : ಮನೆಯಲ್ಲಿಯೇ ಮಾಡೋದು ಹೇಗೆ? ಇಲ್ಲಿದೆ ಡಿಟೈಲ್ಸ್

First Published Nov 10, 2021, 5:45 PM IST

ಫ್ಯಾಷನ್ ಕೂಡ ಕಾಲಾನಂತರದಲ್ಲಿ ಬಹಳಷ್ಟು ಬದಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ರಿಪ್ಡ್ ಜೀನ್ಸ್ (ripped jeans) ಫ್ಯಾಷನ್ ಫಾಲೋ ಮಾಡುತ್ತಿದ್ದಾರೆ. ಈ ಹಿಂದೆ ರಿಪ್ಡ್ ಜೀನ್ಸ್ ಕೇವಲ ಮೊಣಕಾಲು ಉದ್ದವಾಗಿತ್ತು ಆದರೆ ಈಗ ರಿಪ್ಡ್ ಜೀನ್ಸ್ ಸಾಕಷ್ಟು ಬದಲಾಗಿದೆ. ಶಾಟ್ಸ್, ಬಮ್ ಶಾಟ್ಸ್ ಮೊದಲಾದ ಜೀನ್ಸ್ ಗಳಲ್ಲೂ ಈಗ ರಿಪ್ಡ್ ಜೀನ್ಸ್ ಫ್ಯಾಷನ್ ಚಾಲ್ತಿಯಲ್ಲಿದೆ. 

ಮಾರುಕಟ್ಟೆಯಲ್ಲಿ ರಿಪ್ಡ್ ಜೀನ್ಸ್ ಸಾಮಾನ್ಯ ಜೀನ್ಸ್ ಗಿಂತ ತುಂಬಾನೇ ದುಬಾರಿ, ಅದನ್ನು ಖರೀದಿಸೋದು ನಿಮಗೆ ದುಬಾರಿ ಎನಿಸಿದರೆ ಚಿಂತೆ ಬಿಡಿ. ಯಾಕೆಂದರೆ ನೀವು ಮನೆಯಲ್ಲಿಯೂ ರಿಪ್ಡ್ ಜೀನ್ಸ್ ಅನ್ನು ಸುಲಭವಾಗಿ ತಯಾರಿಸಬಹುದು. ಸಾಮಾನ್ಯ ಜೀನ್ಸ್ ಅನ್ನು ಹರಿದು ಸ್ಟೈಲಿಶ್ (stylish) ರಿಪ್ಡ್ ಜೀನ್ಸ್ ಟ್ರೈ ಮಾಡಬಹುದು. ಸಾಮಾನ್ಯ ಜೀನ್ಸ್ ಅನ್ನು ಹೇಗೆ ರಿಪ್ ಮಾಡಬೇಕೆಂದು ನೋಡೋಣ.

ಸಾಮಾನ್ಯ ಜೀನ್ಸ್ ಅನ್ನು ರಿಪ್ ಮಾಡುವುದು ಹೇಗೆ?
ಜೀನ್ಸ್  ಹರಿದು ಹಾಕಲು ಮೊದಲು ಹಳೆಯ ಜೀನ್ಸ್ (old jeans) ತೆಗೆದುಕೊಳ್ಳಿ. ನಂತರ ಜೀನ್ಸ್ ಅನ್ನು ಹರಿದುಹಾಕಲು ಬ್ಲೇಡ್, ಫ್ಯಾಬ್ರಿಕ್  ಕತ್ತರಿಗಳು ಮತ್ತು ಕಡಿಮೆ ಅಂಚಿನ ಚಾಕುವನ್ನು ತೆಗೆದುಕೊಳ್ಳಿ. ದಾರಗಳನ್ನು ಎಳೆಯಬಹುದಾದ ಒಂದು ಪ್ಲಕರ್ ತೆಗೆದುಕೊಳ್ಳಿ. ಚಾಕ್  ಬಳಸಿ ಗುರುತುಗಳನ್ನು ಮಾಡಬಹುದು. ಜೀನ್ಸ್ ಗೆ ರಫ್ ಲುಕ್ ನೀಡಲು ಸ್ಯಾಂಡ್ ಪೇಪರ್ ತೆಗೆದುಕೊಳ್ಳಲು ಮರೆಯದಿರಿ.

ರಿಪ್ಡ್  ಜೀನ್ಸ್ ತಯಾರಿಸೋ ವಿಧಾನ 
ಸ್ಟೆಪ್-1 : ತಯಾರಿಸುವ  ಮೊದಲು ನಿಮಗೆ ಯಾವ ರೀತಿಯ ರಿಪ್ಡ್ ಜೀನ್ಸ್ ಬೇಕು ಎಂದು ನಿರ್ಧರಿಸಿ. 
ಸ್ಟೆಪ್ -2 : ನಿಮಗೆ ಬೇಕಾದ ರಿಪ್ಡ್ ಜೀನ್ಸ್ ಪ್ರಕಾರ ಜೀನ್ಸ್ ಅನ್ನು ಮಾರ್ಕ್ ಮಾಡಿ. 
ಸ್ಟೆಪ್ 3 : ಟ್ರೆಂಡಿ ಲುಕ್ ಗೆ (trendy look) ಡಿಸ್ಟ್ರೆಸ್ ಲುಕ್ ಉತ್ತಮ ಎಂದು ಪರಿಗಣಿಸಲಾಗಿದೆ. 

ಸ್ಟೆಪ್ 4 : ಮಾರ್ಕಿಂಗ್ (marking) ಮಾಡಿದ ನಂತರ ಜೀನ್ಸ್ ಮೇಲೆ ಸ್ವಲ್ಪ ಕಟ್ ಮಾಡಿ. 
ಸ್ಟೆಪ್ 5 : ನಂತರ ಪ್ಲಕರ್ ಸಹಾಯದಿಂದ ಜೀನ್ಸ್ ಥ್ರೆಡ್ ಗಳನ್ನು ತೆಗೆಯಲು ಪ್ರಾರಂಭಿಸಿ. ಇದನ್ನು ಮಾಡುವಾಗ ಸಣ್ಣ ಎಳೆಗಳನ್ನು ಮಾತ್ರ ತೆಗೆದುಹಾಕಬೇಕು. 
ಸ್ಟೆಪ್ 6 : ನಂತರ ರಿಪ್ಡ್ ಜೀನ್ಸ್ ಸುತ್ತಲೂ ಸ್ಯಾಂಡ್ ಪೇಪರ್ ಉಜ್ಜಿ. ಇದು ಜೀನ್ಸ್ ಗೆ ರಫ್ ಲುಕ್ ನೀಡುತ್ತದೆ.

ಈ ವಿಷಯಗಳನ್ನು ನೆನಪಿನಲ್ಲಿಡಿ
 - ಜೀನ್ಸ್  ಗೆ ರಿಪ್ಡ್ ಲುಕ್ ನೀಡುವಾಗ ಜೀನ್ಸ್ ಅನ್ನು ಕತ್ತರಿಸಬೇಡಿ ಏಕೆಂದರೆ ಅದು ಜೀನ್ಸ್ ಹರಿದು ಹೋಗುವ ಸಾಧ್ಯತೆ ಇದೆ.
 - ರಿಪ್ ಮಾಡುವಾಗ ಜೀನ್ಸ್ ಅನ್ನು ಗಟ್ಟಿಯಾಗಿ ಎಳೆಯಬೇಡಿ. 
- ಜೀನ್ಸ್ ಅನ್ನು ಹಾಳು ಮಾಡುವ ಗುರುತುಗಳನ್ನು ಮಾಡಬೇಡಿ ಮತ್ತು ಗುರುತುಗಳಿಲ್ಲದೆ ಜೀನ್ಸ್ ಅನ್ನು ರಿಪ್ ಮಾಡಬೇಡಿ.
 - ಸಣ್ಣ ಕಟ್ ಗಳಿಂದ ಜೀನ್ಸ್ ಅನ್ನು ರಿಪ್ ಮಾಡಿ.

click me!