Belly fat and Fashion: ಈ ಡ್ರೆಸ್ ಮೂಲಕ ಸ್ಟೈಲಿಶ್ ಲುಕ್ ಪಡೆಯಿರಿ

First Published Nov 8, 2021, 8:10 PM IST

ಕೆಲವೊಮ್ಮೆ ಮಹಿಳೆಯರು ಸ್ಟೈಲಿಶ್ ಫಿಟ್ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಾರೆ, ಆದರೆ ಹೊಟ್ಟೆಯ ಕೊಬ್ಬು ಅವರನ್ನು ಸಡಿಲವಾದ ಬಟ್ಟೆಗಳನ್ನು ಧರಿಸುವಂತೆ ಮಾಡುತ್ತದೆ. ನೀವು ಅಂತಹ ಸಮಸ್ಯೆ ಎದುರಿಸುತ್ತೀದ್ದೀರಾ? ಹಾಗಿದ್ದರೆ ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ, ಅದು ನಿಮ್ಮ ಹೊಟ್ಟೆಯ ಕೊಬ್ಬನ್ನು ಮರೆಮಾಚಿ, ಸ್ಟೈಲಿಶ್  ಆಗಿ ಕಾಣುವಂತೆ ಮಾಡುತ್ತೆ, ಅದು ಹೇಗೆ ನೋಡೋಣ.

ಕೆಲವೊಮ್ಮೆ ಜನರು ದೇಹದಲ್ಲಿ ಹೆಚ್ಚು ತೂಕ ಹೊಂದಿರದೇ ಇದ್ದರೂ, ಹೊಟ್ಟೆಯ ಸುತ್ತಲೂ ಕೊಬ್ಬು ಹೆಚ್ಚಾಗಿ, ಹೊಟ್ಟೆ ದೊಡ್ಡದಾಗಿ ಕಾಣುವಂತೆ ಮಾಡುತ್ತೆ. ಆದ್ದರಿಂದ ಹೊಟ್ಟೆಯ ಕೊಬ್ಬು (belly fat) ಅವರ ಲುಕ್ ಹಾಳು ಮಾಡುತ್ತದೆ. ಆದ್ದರಿಂದಲೇ ಹೊಟ್ಟೆಯ ಕೊಬ್ಬಿನಿಂದಾಗಿ ಈ ಉಡುಗೆ ಫಿಟ್ ಆಗಿರುವುದಿಲ್ಲ. ಮಹಿಳೆಯರು ಈ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ತಮ್ಮ ಬೊಜ್ಜನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ, ಆದರೆ ಇದು ಕಷ್ಟ. 

ಇಂತಹ ಸಂದರ್ಭಗಳಲ್ಲಿ ಹೊಟ್ಟೆಯ ಕೊಬ್ಬಿನಿಂದಾಗಿ (belly fat) ಅನೇಕ ಉಡುಗೆಗಳನ್ನು ಮಹಿಳೆಯರು ಧರಿಸುವುದಿಲ್ಲ. ಇದನ್ನು ನಿವಾರಿಸಲು ನೀವು ಕೆಲವು ಸಣ್ಣ ಸಲಹೆಗಳನ್ನು ಅನುಸರಿಸಬೇಕು, ಆದರೆ ನೀವು ಎಲ್ಲಿಗಾದರೂ ಹೋಗಬೇಕಾದರೆ ಮತ್ತು  ಸ್ವಲ್ಪ ಕಡಿಮೆ ತೂಕವನ್ನು ನೋಡಬೇಕೆಂದು ಬಯಸಿದರೆ, ಕೆಲವು ಸ್ಟೈಲಿಶ್ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಮರೆಯದಿರಿ. 

ಇಲ್ಲಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ. ಇದು ನಿಮ್ಮನ್ನು ಹೊಟ್ಟೆಯ ತೂಕವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ನಿಮ್ಮನ್ನು ಸಾಕಷ್ಟು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ ಇಂದು ಕೆಲವು ಉಡುಗೆಗಳ ಬಗ್ಗೆ ಮಾಹಿತಿ ಹೇಳಲಿದ್ದೇವೆ, ಇದು ಹೊಟ್ಟೆಯ ಕೊಬ್ಬು ಕಡಿಮೆ ಇರುವಂತೆ ಕಾಣುತ್ತದೆ. ಜೊತೆಗೆ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. 
 

ಹೈ ವೇಸ್ಟ್ ಜೀನ್ಸ್ (high waist jeans)
ನೀವು ಹೊಟ್ಟೆಯ ಕೊಬ್ಬನ್ನು ಹೊಂದಿದ್ದರೆ ಅದನ್ನು ಮರೆಮಾಡಲು ಹೈ ವೇಸ್ಟ್ ಜೀನ್ಸ್ ಅತ್ಯುತ್ತಮ ಉಡುಗೆ. ಈ ಜೀನ್ಸ್ ನೊಂದಿಗೆ ನೀವು ರಾಫಲ್ ಟಾಪ್ ಧರಿಸುವ ಮೂಲಕ ಹೊಟ್ಟೆಯ ಮೇಲಿನ ಕೊಬ್ಬನ್ನು ಮರೆಮಾಡಬಹುದು. ಮತ್ತ್ಯಾಕೆ ನೀವು ಹೈ ವೇಸ್ಟ್ ಜೀನ್ಸ್ ಟ್ರೈ ಮಾಡಬಾರದು. 

ಫ್ಲೇರ್ಡ್ ಕುರ್ತಿ (flared kurti)
ಹೊಟ್ಟೆಯ ಕೊಬ್ಬನ್ನು ಮರೆಮಾಡಲು ಫ್ಲೇರ್ಡ್ ಕುರ್ತಿಗಳು ಸಹ ಉತ್ತಮ ಆಯ್ಕೆ. ಇದನ್ನು ಧರಿಸುವುದರಿಂದ ನಿಮ್ಮ ಹೊಟ್ಟೆ ಕೊಬ್ಬು ಮರೆಯಾಗುತ್ತದೆ ಮತ್ತು ಸೊಂಟದ ಕೊಬ್ಬು ಕಡಿಮೆಯಾಗುತ್ತದೆ, ಇದು ನಿಮ್ಮ ಲುಕ್ ಮತ್ತು ಸ್ಟೈಲ್ ಅದ್ಭುತವಾಗಿ ಕಾಣುವಂತೆ ಮಾಡುತ್ತದೆ.ಯಾವುದೇ ಸಂದರ್ಭದಲ್ಲಿ ಫ್ಲೇರ್ಡ್ ಕುರ್ತಿ ಚೆನ್ನಾಗಿ ಕಾಣುತ್ತದೆ. 
 

ಬಾಡಿ ಶೇಪರ್ (body shaper)
ನೀವು ಜಂಪ್ ಸೂಟ್ ಅಥವಾ ಭಾರತೀಯ ಉಡುಪನ್ನು ಧರಿಸಬೇಕೆಂದು ನಿಮಗೆ ಅನಿಸಿದರೆ ಮತ್ತು ಹೊಟ್ಟೆಯ ಕೊಬ್ಬಿನಿಂದಾಗಿ ನೀವು ಅದನ್ನು ಧರಿಸಲು ಸಾಧ್ಯವಾಗದಿದ್ದರೆ, ಅಂತಹ ಉಡುಪನ್ನು ಧರಿಸುವ ಮೊದಲು ನೀವು ಬಾಡಿ ಶೇಪರ್ ಧರಿಸಬೇಕು, ಇದು ನಿಮ್ಮ ದೇಹವನ್ನು ಆಕಾರಕ್ಕೆ ತರುತ್ತದೆ ಮತ್ತು ನೀವು ಅದ್ಭುತವಾಗಿ ಕಾಣುತ್ತೀರಿ.

ರಾಫಲ್ ಸೀರೆ  (ruffle saree)
ಸಾಂಪ್ರದಾಯಿಕವಾದ ಒಂದು ಸೀರೆಯ ಬದಲಿಗೆ ರಾಫಲ್ ಸೀರೆಯನ್ನು ಧರಿಸುವುದು ಉತ್ತಮ. ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಮರೆಮಾಡಲು ಅನುವು ಮಾಡಿಕೊಡುತ್ತದೆ. ನೀವು ಬಯಸಿದರೆ ಅದರೊಂದಿಗೆ  ಬೆಲ್ಟ್ ಅನ್ನು ಸಹ ಧರಿಸಬಹುದು. ಇಂತಹ ಸೀರೆ ಜೊತೆಗೆ ಈಗ ಬೆಲ್ ಸ್ಲೀವ್ ಇರುವ ಬ್ಲೌಸ್ ಧರಿಸಬಹುದು.
 

ಗೌನ್ ಗಳು (Gown)
ಮದುವೆ, ಪಾರ್ಟಿ ಅಥವಾ ಹಬ್ಬದ ಈ ಋತುವಿಗಾಗಿ ಗೌನ್ ಸಹ ಉತ್ತಮ ಆಯ್ಕೆಯಾಗಿದೆ. ಗೌನ್ ಧರಿಸುವುದೂ  ಹೊಟ್ಟೆ ಕೊಬ್ಬನ್ನು ಸುಲಭವಾಗಿ ಆವರಿಸುತ್ತದೆ. ಗಾಢ ಬಣ್ಣದ ಗೌನ್ ನಿಂದ ನೀವು ಕೊಬ್ಬನ್ನು ಮರೆಮಾಡಬಹುದು. ಇದರಿಂದ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ, ಜೊತೆಗೆ ಸ್ಟೈಲಿಶ್ ಆಗಿ ಕಾಣುವಿರಿ. 

click me!