ಕಾಂಜಿವರಂ, ರೇಷ್ಮೆ ಸೀರೆ ಬಹುಕಾಲದವರೆಗೆ ಹಾಳಾಗದಂತೆ ಕಾಪಾಡೋದು ಹೇಗೆ?

First Published Apr 28, 2021, 12:27 PM IST

ಕಾಂಜೀವರಂ ಸೀರೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ದುಬಾರಿಯಾದರೂ ಹೆಣ್ಣು ಮಕ್ಕಳು ಹೆಚ್ಚು ಇಷ್ಟ ಪಡುವ, ಹಬ್ಬ ಹರಿದಿನಗಳಲ್ಲಿ  ಹೆಚ್ಚಾಗಿ ಧರಿಸುವಂತಹ ಸೀರೆ ಎಂದರೆ ಅದು ಕಾಂಜೀವರಂ ಸೀರೆ. ಈ ಸೀರೆ ನೋಡಲು ಸುಂದರವಾಗಿರುತ್ತದೆ, ಉಡಲೂ ಚೆಂದ. ಆದರೆ ಈ ಸೀರೆಯನ್ನು ಹಾಳಾಗದಂತೆ ಕಾಪಾಡುವುದು ಮಾತ್ರ ಕಷ್ಟದ ಕೆಲಸ. ಆ ಕೆಲಸವನ್ನು ಸುಲಭವಾಗಿಸಲು ಒಂದಿಷ್ಟು ಉಪಾಯಗಳು ಇಲ್ಲಿವೆ. ಅವು ಯಾವುವು ನೋಡೋಣ.. 

ಡ್ರೈ ಕ್ಲೀನ್‌ ಮಾಡಿಸಿ: ಕಾಂಜಿವರಮ್‌ ಸೀರೆಯನ್ನು ಪದೇ ಪದೇ ಡ್ರೈ ಕ್ಲೀನ್ ಮಾಡಿಸಬೇಡಿ, ಎರಡು ಮೂರು ಬಾರಿ ಧರಿಸಿದ ನಂತರ ಡ್ರೈ ಕ್ಲೀನ್‌ ಮಾಡಿಸಿ.
undefined
ಸ್ಪ್ರೇಯನ್ನು ದೂರದಿಂದ ಬಳಸಿ : ಕಾಂಜೀವರಂ ಸೀರೆಯ ಮೇಲೆ ಯಾವುದೆ ರೀತಿಯ ಬಾಡಿ ಸ್ಪ್ರೇ, ಪರ್‌ಫ್ಯೂಮ್‌ ಅಥವಾ ಡಿಯೋಡ್ರಂಟ್‌ ಬಳಕೆ ಮಾಡಬೇಡಿ. ಬಳಕೆ ಮಾಡೋದಾದರೆ ದೂರದಿಂದ ಬಳಸಿ. ಇಲ್ಲವಾದರೆ ಸೀರೆ ಬೇಗನೆ ಡ್ಯಾಮೇಜ್ ಆಗುತ್ತದೆ.
undefined
ಶ್ಯಾಂಪೂವಿನಿಂದ ತೊಳೆಯಿರಿ: ಕಾಂಜೀವರಮ್‌ ಸೀರೆ ತುಂಬಾ ದುಬಾರಿ. ಆದುದರಿಂದ ಡ್ರೈ ಕ್ಲೀನ್‌ ಮಾಡುವುದು ಬೆಸ್ಟ್‌. ಇಲ್ಲವಾದರೆ ಸೀರೆಯನ್ನು ಸಾಬೂನಿನ ಬದಲು ಶ್ಯಾಂಪೂ ಹಾಕಿ ವಾಶ್‌ ಮಾಡಿ. ಜಾಸ್ತಿ ವಾಷ್ ಮಾಡಬೇಡಿ.
undefined
ಹತ್ತಿ ಬಟ್ಟೆಯಲ್ಲಿ ಸುತ್ತಿಡಿ : ನಿಮ್ಮ ಸೀರೆಯನ್ನು ಹೊಸದರಂತೆ ಕಾಪಾಡಲು ಹತ್ತಿ ಬಟ್ಟೆಯಲ್ಲಿ ಸುತ್ತಿಡಿ. ನಂತರ ಅದನ್ನು ಹ್ಯಾಂಗರ್‌ನಲ್ಲಿ ತೂಗಿಸಿ ಇಡಿ. ಎಲ್ಲಾ ಸೀರೆಯನ್ನು ಬೇರೆ ಬೇರೆಯಾಗಿ ಜೋಡಿಸಿ.
undefined
ಬಿಸಿಲಿಗೆ ಹಾಕಿ: ನೀವು ಅದನ್ನು ಉಪಯೋಗ ಮಾಡದಿದ್ದರೂ ನಿಯಮಿತವಾಗಿ ಅದನ್ನು ಬಿಸಿಲಿಗೆ ಹಾಕಿ ಒಣಗಿಸಬೇಕು. ಇದರಿಂದ ಸೀರೆಯ ಬಣ್ಣ ಹಾಗೆಯೇ ಉಳಿಯುತ್ತದೆ.
undefined
ಸೀರೆಗಳು ಪುಡಿಯಾಗಿದೆ ಅಥವಾ ಗಟ್ಟಿದ್ದರೆಅವುಗಳನ್ನು ಡ್ರೈ ಕ್ಲೀನ್ ಗೊಳಿಸುವುದು ಉತ್ತಮ.ಬಣ್ಣದ ರೇಷ್ಮೆ ಸೀರೆ ತೊಳೆಯುವ ಮೊದಲು ನೀರಿನಿಂದ ಪ್ಯಾಚ್ ಅನ್ನು ಪರೀಕ್ಷಿಸಬೇಕುಬಣ್ಣಹೊರಬಂದರೆ, ಅದು ಡ್ರೈ ಕ್ಲೀನ್‌‌ಗೆ ಮಾತ್ರ ಸೀಮಿತ!
undefined
ಮತ್ತೆ ಮತ್ತೆ ಮಡಚಿ:ಒಂದೇ ಭಂಗಿಯಲ್ಲಿ ಸೀರೆಯನ್ನು ಮಡಚಿ ಇಡಬೇಡಿ. ಬದಲಾಗಿ ಅದನ್ನು ಆಗಾಗ ಬಿಡಿಸಿ ಬೇರೆ ರೀತಿಯಾಗಿ ಫೋಲ್ಡ್‌ ಮಾಡಿ ಮಡಚಿ. ಇದರಿಂದಲೂ ಸೀರೆ ತುಂಬಾ ಸಮಯದವರೆಗೆ ಬಾಳಿಕೆ ಬರುತ್ತದೆ.
undefined
click me!