ಎನಾಮೆಲ್ಡ್ ಜುಮ್ಕಿ ಕಿವಿಯೋಲೆಗಳುಕೆಲವು ಸ್ಪಾರ್ಕಲಿಂಗ್ ಆಭರಣಗಳಿಲ್ಲದೆ ಯಾವುದೇ ಮದುವೆಯ ತಯಾರಿ ಪೂರ್ಣಗೊಳ್ಳುವುದಿಲ್ಲ, ಕಿವಿಯೋಲೆಗಳು ಅವುಗಳಲ್ಲಿ ಒಂದು. ಅದರಲ್ಲೂ ಮದುವೆಗೆ ದೊಡ್ಡದಾದ ಜುಮ್ಕಿ ಬೆಸ್ಟ್ ಲುಕ್ ನೀಡುತ್ತದೆ. ಕಿವಿಯೋಲೆಗಳನ್ನು ಲೆಹೆಂಗಾ, ಶರಾರಸ್ನೊಂದಿಗೆ ಧರಿಸಬಹುದು ಮತ್ತು ಸಂಗೀತ ರಾತ್ರಿಗಳಿಗೆ ಸೂಕ್ತ.
ಹೂವಿನ ಡಿಸೈನ್ನ ಚಿನ್ನ ಅಥವಾ ವಜ್ರದ ಚಾಂದಬಲಿಸ್ಬೇಸಿಗೆಯಲ್ಲಿ, ಸಾಂಪ್ರದಾಯಿಕ ಎದ್ದು ಕಾಣುವ ಚಾಂದಬಲಿ ಕಿವಿಯೋಲೆಗಳೊಂದಿಗೆ ಭಾರೀ ಕಸೂತಿ ಮಾಡಿದ ಅನಾರ್ಕಲಿ ಸೂಟ್ ಒಂದು ಫ್ಯಾಂಟಸಿ ಲುಕ್ ನೀಡುತ್ತದೆ. ಅದರ ಟೈಮ್ಲೆಸ್ ಆಕರ್ಷಣೆ ಮತ್ತು ಆಕರ್ಷಕ ಲುಕ್ನಿಂದಾಗಿ ಈ ಆಭರಣವು ಅನೇಕ ಜನರ ಹೃದಯ ಗೆದ್ದಿದೆ.
ಚಾಂದಬಾಲಿಸ್ ಕಿವಿಯೋಲೆಯ ಪ್ರಾಮುಖ್ಯತೆ ಎಂದರೆ ಅವುಗಳನ್ನು ಯಾವುದೇ ಸಂದರ್ಭದಲ್ಲಿ ಮತ್ತು ಯಾವುದೇ ಉಡುಪಿನೊಂದಿಗೆ ಧರಿಸಿದರೂ ಸಖತ್ತಾಗಿ ಕಾಣಿಸುತ್ತದೆ.
ಸಾಂಪ್ರದಾಯಿಕ ಕುಂದನ್ ಮೀನಾ ನೆಕ್ಲೆಸ್ ಸೆಟ್ನೈಟ್ ವೆಡ್ಡಿಂಗ್ ಪಾರ್ಟಿಗಳಿಗೆ ಭವ್ಯವಾದ ಕುಂದನ್ ಹಾರವನ್ನು ಆರಿಸಿ. ಬೇಸಿಗೆ ವಿವಾಹದ ಉಡುಗೆಗೆ ಕುಂದನ್ ಆಭರಣ ಮುಖ್ಯ ಆಕರ್ಷಣೆ. ಇದು ತಿಳಿಯಾದ ಬಣ್ಣದಲ್ಲಿದ್ದರೆ ಉತ್ತಮ. ಕುಂದನ್ ಹಾರವು ಸಮಾರಂಭದಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಇದು ವಧುವಿಗೆ ಸೂಕ್ತವಾಗಿದೆ.
ಕುಂದನ್ ಹಾರವು ಎಲ್ಲಾ ಹೆಣ್ಣುಮಕ್ಕಳು ಹೊಂದಿರಬೇಕಾದ ಆಭರಣ. ಈ ಶೈಲಿಯು ಟೈಮ್ಲೆಸ್ ಮತ್ತು ವಿವಿಧ ಸಂಸ್ಕೃತಿಗಳಿಂದ ವಿವಿಧ ಸಾಂಪ್ರದಾಯಿಕ ಬಟ್ಟೆಗಳಿಗೆ ಹೊಂದಿಕೊಳ್ಳುತ್ತದೆ.
ಪೋಲ್ಕಿ ಚೋಕರ್ ಹಾರಚೋಕರ್ ಹಾರದ ಫ್ಯಾಷನ್ ಎಂದಿಗೂ ಹೊಸದಾಗಿರುತ್ತದೆ. ಇಂಡೋ-ವೆಸ್ಟರ್ನ್ ಮತ್ತು ಸಾಂಪ್ರದಾಯಿಕ ಭಾರತೀಯ ಬಟ್ಟೆಗಳಲ್ಲಿ ಚೋಕರ್ ಆಭರಣಗಳ ಸಾಮಾನ್ಯ ವಾಗಿರುತ್ತದೆ. ಮತ್ತು ಇದು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಹೊಳೆಯುವ ಕಲ್ಲುಗಳು ಮತ್ತು ಮುತ್ತುಗಳನ್ನು ಹೊಂದಿರುವ ಪೋಲ್ಕಿ ಚೋಕರ್ ಹಾರವನ್ನು ಸರಳ ಮತ್ತು ಸುಂದರವಾಗಿ ಸ್ಟೇಟ್‌ಮೆಂಟ್ ಜ್ಯುವೆಲ್ಲರಿಯಾಗಿಧರಿಸಬಹುದು.
ಡ್ಯುಯಲ್ ಫಿಂಗರ್ ರಿಂಗ್ಈ ವರ್ಷ, ಮಲ್ಟಿ-ಫಿಂಗರ್ ರಿಂಗ್ ಆಭರಣ ಹೆಚ್ಚು ಟ್ರೆಂಡ್‌ನಲ್ಲಿದೆ ಮತ್ತು ಇದು ಎಲ್ಲಾ ರೀತಿಯ ಡ್ರೆಸ್‌ನೊಂದಿಗೆ ಚೆನ್ನಾಗಿ ಕಾಣುತ್ತದೆ. ಕಾಕ್ಟೈಲ್ ಲಾಂಗ್ ಗೌನ್‌ನಿಂದ ಹಿಡಿದು ಲೆಹೆಂಗಾಗಳವರೆಗೆ ಎಲ್ಲದರಲ್ಲೂ ಟ್ರೆಂಡಿ ಸ್ಟೇಟ್‌ಮೆಂಟ್ ನೀಡಲು ಇದು ಅತ್ಯಗತ್ಯ.