ಕೂದಲ ಸೌಂದರ್ಯ ಹೆಚ್ಚುತ್ತೆ ಮುಖದ ಕಾಂತಿಯನ್ನು, ಏನು ಮಾಡಬೇಕು?

First Published | Apr 22, 2021, 2:15 PM IST

ಒರಟು ಮತ್ತು ನಿರ್ಜೀವ ಕೂದಲು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು, ಕೂದಲಿನ ಸರಿಯಾದ ಆರೈಕೆ ದಿನಚರಿ ಮತ್ತು ಸಲಹೆಗಳು ಇಲ್ಲಿವೆ. ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದರೆ ಅಥವಾ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬೇಕಾದರೆ ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾದರೆ  ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ?
 

ಸುಂದರವಾಗಿ ಕಾಣಲು ಮುಖದ ಜೊತೆಗೆ ಕೂದಲಿನ ಆರೈಕೆಯ ದಿನಚರಿಯನ್ನು ಅನುಸರಿಸುವುದು ಬಹಳ ಮುಖ್ಯ. ವಿವಿಧ ರೀತಿಯ ಕೂದಲಿನ ಉತ್ಪನ್ನಗಳಲ್ಲಿ ರಾಸಾಯನಿಕಗಳಿದ್ದು ಅವು ಕೂದಲಿನ ಸೌಂದರ್ಯವನ್ನು ಕಮ್ಮಿ ಮಾಡಿ ಒರಟಾಗಿ ಮತ್ತು ಮಂದವಾಗಿಸಬಹುದು. ಹಾಗಾದರೆ ಈ ಸಮಸ್ಯೆಯನ್ನು ತಪ್ಪಿಸುವುದು ಹೇಗೆ?
undefined
1. ಮಲಗುವ ಮುನ್ನ ಎಣ್ಣೆಯನ್ನು ಹಚ್ಚಿನೆತ್ತಿಯಪೌಷ್ಟಿಕಾಂಶ ಹೆಚ್ಚಿಸಲು ಮತ್ತು ಹೊಳಪಿಗಾಗಿ ಎಣ್ಣೆ ಹಾಕಬೇಕು. ಜಿಡ್ಡು ರಹಿತ ತೈಲ ಬಳಸಿ. ಇದು ಕೂದಲನ್ನು ಬಲ ಪಡಿಸುತ್ತದೆ ಜೊತೆಗೆ ಹೊಳಪನ್ನು ಹೆಚ್ಚಿಸುತ್ತದೆ.
undefined

Latest Videos


2. ರಾತ್ರಿ ಶಾಂಪೂಕೂದಲು ಕೊಳಕಾಗಿದ್ದರೆ ರಾತ್ರಿ ವೇಳೆ ತೊಳೆದು ಸ್ವಲ್ಪ ಸಮಯ ತೆರೆದಿಡಿ. ಬೆಳಿಗ್ಗೆ ಕೂದಲು ತೊಳೆದು ತಕ್ಷಣ ಕೇಶವಿನ್ಯಾಸ ಮಾಡುವುದರಿಂದ ಕೂದಲು ಒರಟಾಗುವುದು ಮಾತ್ರವಲ್ಲದೆ ಇನ್ನಷ್ಟು ಹದಗೆಡುತ್ತದೆ. ಇದಲ್ಲದೆ ಶೀತವಿದ್ದರೆ ರಾತ್ರಿಯಲ್ಲಿ ಶಾಂಪೂ ಮಾಡುವುದನ್ನು ತಪ್ಪಿಸಿ.
undefined
3. ಮಲಗುವಾಗ ಕೂದಲನ್ನು ಒದ್ದೆ ಮಾಡಬೇಡಿಮಲಗುವ ಎರಡು ಗಂಟೆಗಳ ಮೊದಲು ಕೂದಲನ್ನು ತೊಳೆಯಿರಿ, ಇದರಿಂದ ಮಲಗುವ ಮುನ್ನ ಚೆನ್ನಾಗಿ ಒಣಗುತ್ತದೆ. ಮತ್ತೊಂದೆಡೆ, ಸಮಯವಿಲ್ಲದಿದ್ದರೆ ಹೇರ್ ಡ್ರೈಯರ್ ಅನ್ನು ಸಹ ಬಳಸಬಹುದು.
undefined
4. ರಾತ್ರಿ ಜಡೆ ಕಟ್ಟಿ ಮಲಗಿರಾತ್ರಿ ಮಲಗುವಾಗ ಸಡಿಲವಾದ ಜಡೆಗಳನ್ನು ಕಟ್ಟಿ. ಬಿಗಿಯಾದ ಜಡೆ ಕಟ್ಟಿದರೆ, ಅದು ಕೂದಲಿನ ಉದುರುವಿಕೆಗೆ ಕಾರಣವಾಗಬಹುದು, ಇದು ನೆತ್ತಿ ತನ್ನ ನೈಸರ್ಗಿಕ ಎಣ್ಣೆಯನ್ನು ಹರಡುವುದನ್ನು ತಡೆಯುತ್ತದೆ.
undefined
5. ಫ್ಯಾಬ್ರಿಕ್ ಬಳಸಿಸುಮಾರು ಮೂರರಿಂದ ನಾಲ್ಕು ಸಿಲ್ಕ್ ಫ್ಯಾಬ್ರಿಕ್ ತುಂಡುಗಳನ್ನು ದಿಂಬುಗಳ ಇರಿಸಿ. ಮಲಗುವಾಗ ದಿಂಬುಗಳನ್ನು ಈ ಬಟ್ಟೆಗಳಿಂದ ಸುತ್ತಿ ಮರುದಿನ ಬೆಳಿಗ್ಗೆ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲನ್ನು ಸುರಕ್ಷಿತವಾಗಿಡುವುದು ಮಾತ್ರವಲ್ಲದೆ ಆರಾಮದಾಯಕವಾಗಿರುತ್ತದೆ ಮತ್ತು ದಿಂಬು ಹಾಳಾಗುವುದು ಸಹ ತಪ್ಪುತ್ತದೆ.
undefined
6. ಕೂದಲನ್ನು ಹರಡಿಕೊಂಡು ಮಲಗಬೇಡಿ :ರಾತ್ರಿ ಹೊತ್ತು ಕೂದಲನ್ನು ಹರಡಿಕೊಂಡು ಮಲಗಿದರೆ, ಕೂದಲು ಉದುರುವ ಸಾಧ್ಯತೆ ಹೆಚ್ಚುತ್ತದೆ. ಜೊತೆಗೆ ಒರಟಾಗುತ್ತದೆ ಮತ್ತು ಸ್ಪ್ಲಿಟ್ ಎಂಡ್ಸ್ ಸಮಸ್ಯೆ ಕಾಣಿಸುತ್ತದೆ. ಆದುದರಿಂದ ಕೂದಲನ್ನು ಹರಡಿ ಮಲಗಬೇಡಿ.
undefined
click me!