ಈ ವಸ್ತುಗಳನ್ನು ಹ್ಯಾಂಡ್ ಬ್ಯಾಗ್ ನಲ್ಲಿ ಇಡೋ ಮುನ್ನ ಯೋಚಿಸಿ

First Published Nov 5, 2021, 5:28 AM IST

ನೀವು ಅನೇಕ ವಸ್ತುಗಳನ್ನು ಹ್ಯಾಂಡ್ ಬ್ಯಾಗ್ ಅಥವಾ ಪರ್ಸ್ ನಲ್ಲಿ (purse) ಇಡುತ್ತೀರಿ, ಅದರಲ್ಲಿ ಅಗತ್ಯವಿರುವ ವಸ್ತುಗಳು ಸೇರಿರುತ್ತವೆ, ಬೇಡವಾದ ವಸ್ತುಗಳು ಸೇರಿರುತ್ತವೆ. ಆದರೆ ನೀವು ಪರ್ಸ್ ನಲ್ಲಿ ಏನನ್ನು ಇಟ್ಟುಕೊಳ್ಳಬೇಕು ಮತ್ತು  ಏನು ಇಟ್ಟುಕೊಳ್ಳಬಾರದು ಎಂಬುದನ್ನು ಸಹ ನೀವು ಗಮನಿಸಬೇಕು. ಕೆಲವು ವಸ್ತುಗಳನ್ನು ಕೈಚೀಲಗಳಲ್ಲಿ (hand bag) ಇರಿಸುವುದನ್ನು ತಪ್ಪಿಸಬೇಕು. ಅವುಗಳ ಬಗ್ಗೆ ನೋಡೋಣಾ.. 

ಸಾಮಾನ್ಯವಾಗಿ ಮನೆಯಿಂದ ಹೊರಡುವಾಗ  ಅಗತ್ಯಕ್ಕೆ ತಕ್ಕಂತೆ ಕೈಚೀಲ (hand bag) ಅಥವಾ ಪರ್ಸ್ ನಲ್ಲಿ ಅನೇಕ ವಸ್ತುಗಳನ್ನು ಹಾಕುತ್ತೀರಿ, ಆದರೆ  ಪರ್ಸ್ ನಲ್ಲಿ ಏನನ್ನು ಇಟ್ಟುಕೊಳ್ಳಬೇಕು ಮತ್ತು ನೀವು ಏನನ್ನು ಇಟ್ಟುಕೊಳ್ಳಬಾರದು  ಎಂಬುದರ ಬಗ್ಗೆ ಹೆಚ್ಚಿನ ಜನ ಗಮನ ಹರಿಸೋದಿಲ್ಲ. ಇದರಿಂದಲೇ ಬ್ಯಾಗ್ ಹಾಳಾಗುತ್ತದೆ. 

ಕೆಲವು ವಸ್ತುಗಳನ್ನು ಕೈಚೀಲದಲ್ಲಿ ಇಡುವುದನ್ನು ತಪ್ಪಿಸಬೇಕು. ಕೈಚೀಲದಲ್ಲಿ (hand bag) ಬಹಳಷ್ಟು ವಸ್ತುಗಳನ್ನು ತುಂಬುವುದು ಅದನ್ನು ಭಾರವಾಗಿಸುತ್ತದೆ. ಮಾತ್ರವಲ್ಲದೆ ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ಹಾಗಿದ್ದರೆ ಅಂತಹ ಯಾವ ವಸ್ತುಗಳನ್ನು ಬ್ಯಾಗಿನಲ್ಲಿ ಇಡಬಾರದು, ಇಟ್ಟರೆ ಏನಾಗುತ್ತದೆ ನೋಡೋಣ... 

ದಾಖಲೆಗಳನ್ನು ಇಡಬೇಡಿ (do not keep records)
ಯಾವುದೇ ಮೂಲ ದಾಖಲೆಗಳನ್ನು ಕೈಚೀಲ ಅಥವಾ ಪರ್ಸ್ ನಲ್ಲಿ ಹಾಕುವ ತಪ್ಪನ್ನು ಮಾಡಬೇಡಿ. ನೀವು ದಾಖಲೆಗಳ ಫೋಟೋ ಪ್ರತಿಯನ್ನು ಸಹ ಇಟ್ಟುಕೊಳ್ಳಲು ಬಯಸಿದರೆ, ಅದನ್ನು ಪ್ರತ್ಯೇಕ ವ್ಯಾಲೆಟ್‌ನಲ್ಲಿ ಇರಿಸಿ. ದಾಖಲೆಗಳನ್ನು ಚೀಲದಲ್ಲಿ ಹಾಕುವುದು ಅವುಗಳನ್ನು ಹಾಳುಮಾಡುತ್ತದೆ. ಕಳ್ಳತನವಾಗುವ ಭಯವೂ ಇದೆ.

ಊಟದ ಪೆಟ್ಟಿಗೆ (tiffin box) ಅಥವಾ ತಿಂಡಿಗಳು
ಕೈಚೀಲ ಎಷ್ಟೇ ದೊಡ್ಡದಾಗಿದ್ದರೂ ಮತ್ತು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದರೂ, ಅದರಲ್ಲಿ ಟಿಫಿನ್ ಬಾಕ್ಸ್  ಅಥವಾ ತಿಂಡಿಗಳನ್ನು ಇಡಬೇಡಿ. ಆಹಾರ ಪದಾರ್ಥಗಳು ಚೀಲಕ್ಕೆ ಬೀಳಬಹುದು ಮತ್ತು ಚೀಲ ಹಾಳಾಗಬಹುದು. ನೀವು ಕೈಚೀಲವನ್ನು ಮತ್ತೆ ಮತ್ತೆ ತೊಳೆಯಲು ಸಾಧ್ಯವಿಲ್ಲ, ಆದ್ದರಿಂದ ಈ ವಿಷಯಗಳನ್ನು ನೋಡಿಕೊಳ್ಳಿ.

ಮೇಕಪ್ ಉತ್ಪನ್ನಗಳು (makeup prodict)
ಕೈಚೀಲದ ವಿವಿಧ ವಿಭಾಗಗಳಲ್ಲಿ ಮೇಕಪ್ ಉತ್ಪನ್ನಗಳನ್ನು ಇರಿಸುವ ತಪ್ಪನ್ನು ಮಾಡಬೇಡಿ. ಇದರಿಂದ ಮೇಕಪ್ ಉತ್ಪನ್ನಗಳು ಬಿದ್ದು ಚೀಲದೊಳಗೆ ಹರಡುತ್ತವೆ. ಮೇಕಪ್ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಸಣ್ಣ ಚೀಲದಲ್ಲಿ ಇರಿಸಿ. ಅದಕ್ಕಾಗಿಯೇ ಒಂದು ಪೌಚ್ ಆರಿಸಿಕೊಳ್ಳುವುದು ಉತ್ತಮ. ಇದರಿಂದ ಮೇಕಪ್ ಪ್ರಾಡಕ್ಟ್ ಬೇಗ ಕೈಗೆ ಸಿಗುತ್ತೆ, ಜೊತೆಗೆ ಹಾಳಾಗುವುದನ್ನು ತಪ್ಪಿಸಬಹುದು. 

ತಾಜಾ ಹೂವುಗಳು (fresh flowers)
ಅನೇಕ ಜನರು ಚೀಲಗಳಲ್ಲಿ ತಾಜಾ ಹೂವುಗಳನ್ನು ಹಾಕುತ್ತಾರೆ. ಈ ವಿಧಾನ ತಪ್ಪು. ಬ್ಯಾಗ್ ಗಳು ಪೂರ್ತಿಯಾಗಿ ಬಂದ್ ಆಗಿರುವುದರಿಂದ ಹೂವುಗಳು ಚೀಲಗಳಲ್ಲಿ ಕೊಳೆಯಲು ಪ್ರಾರಂಭಿಸುತ್ತವೆ ಮತ್ತು ದುರ್ವಾಸನೆ ಬೀರುತ್ತವೆ. ಇದರಿಂದ ನಿಮ್ಮ ಕೈಚೀಲ ಹಾಳಾಗುತ್ತದೆ. ಅದುದರಿಂದ ಅದನ್ನು ಬೇರೆ ಕವರ್ ನಲ್ಲಿ ಹಾಕಿ ಸೆಪೆರೇಟ್ ಆಗಿ ಇಟ್ಟುಕೊಂಡರೆ ಉತ್ತಮ. 

ಚಾಕಲೇಟ್  (chocolate)
ಡೈರಿ ಮಿಲ್ಕ್, ಮಿಲ್ಕಿ ಬಾರಿ ಮೊದಲಾದ ಚಾಕಲೇಟ್ ಗಳನ್ನ ಬ್ಯಾಗಿನಲ್ಲಿಡಬೇಡಿ. ಇದರಿಂದಲೂ ಬ್ಯಾಗ್ ಹಾಳಾಗಬಹುದು. ಯಾಕೆಂದರೆ ಇಂತಹ ಚಾಕಲೇಟ್ಸ್ ಬೇಗ ನೀರಾಗುತ್ತವೆ. ಬ್ಯಾಗಿನೊಳಗೆ ಇಟ್ಟಾಗ ಅವು ನೀರಾದರೆ ಅವುಗಳನ್ನು ಬೇಗನೆ ಕ್ಲೀನ್ ಮಾಡಲು ಸಾಧ್ಯವಾಗೋದಿಲ್ಲ. ಇದರಿಂದ ಬ್ಯಾಗ್ ಹಾಳಾಗೋ ಸಾಧ್ಯತೆ ಇರುತ್ತದೆ. 

click me!