ಸ್ಟೈಲಿಶ್ ಆಗಿ ಜೀನ್ಸ್ ಜೊತೆ ಟೀ ಶರ್ಟ್ ಧರಿಸುವ ಮುನ್ನ ಈ ವಿಷ್ಯ ಗಮನಿಸಿ...

First Published | Mar 5, 2021, 4:43 PM IST

ಶರ್ಟ್, ಕುರ್ತಾ, ಜುಬ್ಬಾ ಏನೇ ಡ್ರೆಸ್ ಇದ್ದರೂ ಕಂಫರ್ಟಬಲ್ ಅನಿಸೋದು ಟೀ ಶರ್ಟ್ ಧರಿಸಿದಾಗಲೇ. ಪ್ರತಿಯೊಬ್ಬರಿಗೂ ಟೀ ಶರ್ಟ್ ಧರಿಸೋದು ಎಂದರೆ ತುಂಬಾ ಇಷ್ಟ. ಆದರೆ ಟೀ ಶರ್ಟ್ ಧರಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸೋದು ಮುಖ್ಯ. ಟೀ ಶರ್ಟ್ ನ ಫಿಟ್ಟಿಂಗ್, ಕಲರ್, ಫ್ಯಾಬ್ರಿಕ್, ಸ್ಟೈಲ್ ಮತ್ತು ಕಾರ್ಯದ ಬಗ್ಗೆ ಗಮನ ಹರಿಸಬೇಕು. ಈ ಕೆಲವೊಂದು ಮುಖ್ಯ ವಿಷಯ ತಿಳಿದುಕೊಂಡರೆ ಉತ್ತಮ... 

ಉತ್ತಮ ಟೀ ಶರ್ಟ್ ಆಯ್ಕೆ ಮಾಡಿ: ಟೀ ಶರ್ಟ್ ಖರೀದಿಸುವಾಗಉತ್ತಮ ಬಣ್ಣದ, ಉತ್ತಮ ಫ್ಯಾಬ್ರಿಕ್ ಇರುವ ಟೀ ಶರ್ಟ್ ಆಯ್ಕೆ ಮಾಡಿ. ಇಲ್ಲವಾದರೆ ಈಗಿನ ಟ್ರೆಂಡ್ ಇರುವ ಪ್ರಿಂಟಿಂಗ್ ಟೀ ಶರ್ಟ್ ಆಯ್ಕೆ ಮಾಡಿ.
undefined
ಸ್ಲೋಗನ್ ಟೀ ಶರ್ಟ್: ಇಂತಹ ಟೀ ಶರ್ಟ್ ಧರಿಸುವ ಮುನ್ನ ಆಧಾರಲ್ಲಿ ಬರೆದಿರುವ ವಾಕ್ಯಗಳನ್ನು ನೋಡಿದರೆ ಉತ್ತಮ. ಆ ಸ್ಲೋಗನ್ ಇರುವ ಟಿ ಶರ್ಟ್ ಧರಿಸೋದು ಸರಿಯೇ? ಯಾವ ಸಂದರ್ಭದಲ್ಲಿ ಧರಿಸಬಹುದು ಎಂಬುದನ್ನು ಯೋಚಿಸಿ. ಕೆಲವೊಮ್ಮೆ ಫ್ಯಾಷನ್ ಹೆಸರಲ್ಲಿ ಧರಿಸಿದ ಟೀ ಶರ್ಟ್‌ನಿಂದಲೇಅವಮಾನವಾಗುವ ಚಾನ್ಸಸ್ ಇದೆ.
undefined

Latest Videos


ಪ್ರಿಂಟಿಂಗ್: ಟೀ ಶರ್ಟ್ ಮೇಲಿನಪ್ರಿಂಟ್ ಸರಿಯಾಗಿದೆಯೇ ಎಂಬುದನ್ನು ಮೊದಲಿಗೆ ಗಮನಿಸಿ. ಪ್ರಿಂಟ್ ಡಲ್ ಆಗಿದ್ದರೆ ಟೀ ಶಿರ್ತ್ ಹಳತರಂತೆ ಕಾಣಿಸುತ್ತದೆ.
undefined
ಸಂದರ್ಭ: ಯಾವ ಸಂದರ್ಭದಲ್ಲಿ ಯಾವ ಟೀ ಶರ್ಟ್ ಧರಿಸಬೇಕು ಎಂಬುದು ನೆನಪಿರಲಿ. ಫಾರ್ಮಲ್ ಅಕೇಶನ್‌ನಲ್ಲಿ ಕ್ಯಾಶುಯಲ್ ಟೀ ಶರ್ಟ್ ಧರಿಸಬೇಡಿ. ಟೀ ಶರ್ಟ್ ಜೊತೆ ಸೂಟ್ ಜೊತೆ ಧರಿಸುವ ಪ್ಯಾಂಟ್ ಧರಿಸಬೇಡಿ. ಟೀ ಶರ್ಟ್ ಜತೆ ಜೀನ್ಸ್ ಧರಿಸುವುದು ಉತ್ತಮ.
undefined
ಟಕ್ ಇನ್ ಮಾಡುವುದು : ಟೀ ಶರ್ಟ್ ಟಕ್ ಇನ್ ಮಾಡುವುದು ವಿಚಿತ್ರ ಎನಿಸುತ್ತದೆ. ಆದಾಗ್ಯೂ, ಸುತ್ತುವರೆದಿರುವ ಸಂಸ್ಕೃತಿ ಮತ್ತು ಟೀ ಶರ್ಟ್ ಮತ್ತು ಉಳಿದ ಉಡುಗೆಯ ಆಕಾರವನ್ನು ಅವಲಂಬಿಸಿ, ಟಕ್-ಇನ್ ಮಾಡುವ ಬಗ್ಗೆ ಯೋಚಿಸಬೇಕು. ಟಕ್ ಡ್-ಇನ್-ಶರ್ಟ್ ಶೈಲಿಯು ಶಾರ್ಟ್ ಸ್ಲೀವ್ ಪೋಲೊ ಶರ್ಟ್ ಮತ್ತು ಟೈಲರಿಂಗ್ ಪ್ಯಾಂಟ್ ಗಳೊಂದಿಗೆ ಚೆನ್ನಾಗಿ ಕಾಣಿಸುತ್ತದೆ.
undefined
ಡೀಪ್ ನೆಕ್ ಟೀ ಶರ್ಟ್: ವಿ ನೆಕ್ ಟೀ ಶರ್ಟ್ ಗ್ಲಾಮರ್ ಜಗತ್ತಿನಲ್ಲಿರುವವರಿಗೆ ಉತ್ತಮ ಆಯ್ಕೆ. ಆದರೆ ಪ್ರತಿದಿನ ಧರಿಸಲು ಇದು ಯೋಗ್ಯವಲ್ಲ. ಇದನ್ನು ಧರಿಸುವ ಮುನ್ನ ಫಿಗರ್, ಬಾಡಿ ಹೇಗಿದೆ ಅನ್ನೋದನ್ನು ತಿಳಿಯಿರಿ. ಸಾರ್ವಜನಿಕ ಸ್ಥಳದಲ್ಲಿ ಇದನ್ನು ಧರಿಸೋದನ್ನು ನಿಲ್ಲಿಸಿ.
undefined
ಫಿಟ್ಟಿಂಗ್ : ತುಂಬಾ ಫಿಟ್ ಆಗಿರುವ ಟೀ ಶರ್ಟ್ ಧರಿಸಲೇಬಾರದು. ಅದರಲ್ಲೂ ಜಿಮ್ ಬಾಡಿ ಹೊಂದಿದ ವ್ಯಕ್ತಿ ಫಿಗರ್ ಫಿಟ್ ಟೀ ಶರ್ಟ್‌ನಿಂದ ದೂರ ಇರಿ. ಸಣ್ಣ ಶರೀರ ಹೊಂದಿರುವವರು ಸಹ ಟೈಟ್ ಅದ ಟೀ ಶರ್ಟ್ ಧರಿಸಬಾರದು. ಇದರಿಂದ ಸಣ್ಣ ಶರೀರದ ವ್ಯಕ್ತಿ ಕಾರ್ಟೂನ್‌ನಂತೆ ಕಾಣಿಸುತ್ತಾನೆ.
undefined
ಕಲರ್: ಟೀ ಶರ್ಟ್ ಖರೀದಿಸುವಾಗ ಅದರ ಬಣ್ಣದ ಕಡೆಗೆ ಹೆಚ್ಚಿನ ಗಮನ ಹರಿಸಿ. ಯಾಕೆಂದರೆ ಸರಿಯಾದ ಬಣ್ಣದ ಆಯ್ಕೆ ಟೀ ಶರ್ಟ್ ಧರಿಸುವವರ ವ್ಯಕ್ತಿತ್ವವನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
undefined
click me!