ಈ ಸಿಂಪಲ್ ಟ್ರಿಕ್ಸ್ ಬಳಸುವ ಮೂಲಕ ಮೆಹೆಂದಿ ಬಣ್ಣ ಮಾಸುವಂತೆ ಮಾಡಿ

First Published Mar 4, 2021, 4:23 PM IST

ಮೆಹೆಂದಿ ಎಂದರೆ ಪ್ರತಿಯೊಬ್ಬ ಮಹಿಳೆಗೂ ಇಷ್ಟವಾಗುವ ಒಂದು ವಿಷಯ. ಹಬ್ಬ, ಹರಿದಿನ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಮೆಹೆಂದಿ ಬೇಕೇ ಬೇಕು. ಎಲ್ಲಾ ಸಂಭ್ರಮಗಳಲ್ಲೂ ಮೆಹೆಂದಿ ಪ್ರಮುಖ ಪಾತ್ರ ವಹಿಸುತ್ತದೆ. ಆ ಕೆಂಪಾದ ಮೆಹೆಂದಿ ಕೈ ಮೇಲೆ ಕಂಡರೆ ಏನೋ ಒಂಥರಾ ಸಂತೋಷ ಮೂಡುತ್ತದೆ. ಆದರೆ ಅದೆ ಮೆಹೆಂದಿ ಹೆಚ್ಚು ಕಪ್ಪಾದರೆ ಅಸಹ್ಯ ಹುಟ್ಟಿಸುತ್ತದೆ. ಅಥವಾ ಏನಾದರೂ ಅಫೀಷಿಯಲ್ ಕಾರ್ಯಕ್ರಮ ಇದ್ದಾಗ ಮೆಹೆಂದಿ ಬೇಗನೆ ತೆಗೆಯಬೇಕು ಎಂದು ಅನಿಸುತ್ತದೆ ಅಲ್ಲವೇ?

ಹಾಗಾದರೆ ಈ ಕಪ್ಪಾದ ಬಣ್ಣವನ್ನು ಲೈಟ್ ಆಗಿ ಮಾಡುವುದು ಹೇಗೆ ಅಥವಾ ಮೆಹೆಂದಿಯನ್ನು ಕೈಗಳಿಂದ ಬೇಗನೆ ಹೋಗುವಂತೆ ಮಾಡುವುದು ಹೇಗೆ ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ಓದಿ.. ಸಿಂಪಲ್ ವಿಧಾನಗಳ ಮೂಲಕ ಸುಲಭವಾಗಿ ಮೆಹೆಂದಿ ಬಣ್ಣವನ್ನು ಮಸುಕಾಗಿಸಬಹುದು..
undefined
ಆಂಟಿ ಬ್ಯಾಕ್ಟೀರಿಯಲ್ ಸಾಬೂನಿನಿಂದ ಕೈ ಮತ್ತು ಕಾಲುಗಳನ್ನು ತೊಳೆಯುವುದರಿಂದ ಮೆಹಂದಿಯ ಬಣ್ಣ ಕ್ರಮೇಣ ಮಸುಕಾಗಿಸುತ್ತದೆ. ಇದಕ್ಕಾಗಿ 8 ರಿಂದ 10 ಬಾರಿ ಆಂಟಿ ಬ್ಯಾಕ್ಟೀರಿಯಲ್ ಸೋಪಿನಿಂದ ಕೈಗಳನ್ನು ತೊಳೆಯಬೇಕು. ಪದೇ ಪದೇ ಕೈ ತೊಳೆಯುವುದರಿಂದ ಕೈಗಳು ಒಣಗುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಕೈ ಮತ್ತು ಕಾಲುಗಳನ್ನು ವಾಶ್ ಮಾಡಿದ ನಂತರ ಪ್ರತಿ ಬಾರಿ ಲೋಷನ್ ಹಚ್ಚಿ.
undefined
ನಿಂಬೆಯಲ್ಲಿ ಬ್ಲೀಚಿಂಗ್ ಗುಣಗಳಿದ್ದು, ಮೆಹಂದಿ ಬಣ್ಣವನ್ನು ಬೇಗನೆ ತೆಗೆಯಬಲ್ಲದು. ಎರಡು ನಿಂಬೆಯಿಂದ ರಸ ತೆಗೆಯಿರಿ. ಇದರಿಂದ ಸ್ವಲ್ಪ ಹೊತ್ತು ಕೈ ಮತ್ತು ಪಾದಗಳಿಗೆ ನಯವಾಗಿ ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
undefined
ಬೇಕಿದ್ದರೆ, ಅರ್ಧ ಬಕೆಟ್ ನೀರಿಗೆ ಕೆಲವು ಹನಿ ನಿಂಬೆಯನ್ನು ಸೇರಿಸಿ, ಈ ನೀರಿನಲ್ಲಿ ಕೈ ಕಾಲುಗಳನ್ನು ಸ್ವಲ್ಪ ಹೊತ್ತು ನೆನೆಸಿಡಿ, ಆದ್ದರಿಂದ ನಿಂಬೆಯು ಬೇಗನೆ ಮೆಹೆಂದಿಯನ್ನು ತಿಳಿಯಾಗಿಸುವ ಕೆಲಸ ಮಾಡುತ್ತದೆ.
undefined
ಅಡುಗೆ ಸೋಡಾದಲ್ಲಿ ಬ್ಲೀಚಿಂಗ್ ಏಜೆಂಟ್ ಗಳಿವೆ. ಮೆಹಂದಿ ಕಲೆಗಳನ್ನು ಕೈ ಕಾಲುಗಳಿಂದ ತೆಗೆದು ಹಾಕುವಲ್ಲಿ ಇದು ತುಂಬಾ ಪರಿಣಾಮಕಾರಿ. ಇದಕ್ಕಾಗಿ ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಐದು ನಿಮಿಷ ಕಾಲ ಕೈ ಮತ್ತು ಕಾಲುಗಳ ಮೇಲೆ ಹಾಗೆ ಬಿಡಿ, ನಂತರ ತೊಳೆಯಿರಿ.
undefined
ಈ ಪ್ರಯೋಗವನ್ನು ಮಾಡುವ ಮುನ್ನ ಸಣ್ನ ಪ್ಯಾಚ್ ಟೆಸ್ಟ್ ಮಾಡಿಸಿಕೊಳ್ಳುವುದು ಮುಖ್ಯ. ಯಾಕೆಂದರೆ ಇದರ ಅಡ್ಡ ಪರಿಣಾಮವೆಂದರೆ ಇದು ಕೈ ಮತ್ತು ಕಾಲುಗಳನ್ನು ಶುಷ್ಕಮತ್ತು ನಿರ್ಜೀವಗೊಳಿಸುತ್ತದೆ.
undefined
ಕೈಯನ್ನು ಉಪ್ಪು ನೀರಿನಲ್ಲಿ ನೆನೆಸಿ, ಮೆಹೆಂದಿ ಬಣ್ಣ ಬಿಡುತ್ತದೆ. ಅರ್ಧ ಟಬ್ ನೀರಿಗೆ ಒಂದು ಕಪ್ ಉಪ್ಪನ್ನು ಬೆರೆಸಿ 20 ನಿಮಿಷ ಕಾಲ ಕೈ ಕಾಲುಗಳನ್ನು ನೆನೆಸಿಡಿ. ನಂತರ ತೊಳೆಯಿರಿ.
undefined
ಮೆಹಂದಿ ಇರುವ ಜಾಗದಲ್ಲಿ ಪೇಸ್ಟ್ ಅನ್ನು ಉಜ್ಜಿ, ನಂತರ ಅದನ್ನು ತೆಳುವಾದ ಒದ್ದೆ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ. ನಂತರ ಮಾಯಿಶ್ಚರೈಸಿಂಗ್ ಲೋಷನ್ ಹಚ್ಚಿಕೊಳ್ಳಿ. ಪ್ರತಿದಿನ ಇದೇ ವಿಧಾನವನ್ನು ಪುನರಾವರ್ತಿಸಿದರೆ ಮೆಹಂದಿಯ ಬಣ್ಣ ಲೈಟ್ ಆಗುತ್ತದೆ.
undefined
click me!