ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

Published : Sep 22, 2023, 07:32 AM ISTUpdated : Sep 22, 2023, 11:15 AM IST

ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ ಮಾಡೆಲ್‌ಗಳನ್ನು ನೀವು ಈಗಾಗಲೇ ಬೇಕಾದಷ್ಟು ಜನರನ್ನು ನೋಡಿರುತ್ತೀರಿ. ಆದರೆ ಫ್ಯಾಷನ್ ಜಗತ್ತನ್ನು ಅಳುತ್ತಿರುವ ಪುಟಾಣಿ ಮಾಡೆಲ್‌ಗಳ ಬಗ್ಗೆ ನಿಮಗೆ ಗೊತ್ತಾ? ಫ್ಯಾಷನ್ ಲೋಕದಲ್ಲಿ ಚಾಪು ಮೂಡಿಸಿದ ಪುಟಾಣಿ ಮಾಡೆಲ್‌ಗಳ ಡಿಟೇಲ್ಸ್ ಇಲ್ಲಿದೆ... 

PREV
111
ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ರಷ್ಯಾ ಮೂಲದ ಈ ಅರಿಶಾ ಲೆಬೆಡೆವಾ (Arisha Lebedeva) ಅಲ್ಲಿನ ಪ್ರಖ್ಯಾತ ಮಾಡೆಲ್ ಎಲೆನಾ ಪೆರ್ಮಿನೋವಾ ಪುತ್ರಿ, ತಾಯಿಯ ಹೆಜ್ಜೆಯನ್ನೇ ಹಿಂಬಾಲಿಸಿರುವ ಈ ಪುಟಾಣಿ ಹಲವು ಮಕ್ಕಳ ಮ್ಯಾಗಜೀನ್‌ಗೆ ರೂಪದರ್ಶಿಯಾಗಿದ್ದಾಳೆ. ಈಕೆಯ ಅಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಕುವ ಈಕೆಯ ಫೋಟೋಗಳನ್ನು ಲಕ್ಷಾಂತರ ಜನ ಲೈಕ್ ಮಾಡುತ್ತಾರೆ. 

211

6 ವರ್ಷದ ರಷ್ಯಾ ಮೂಲದ ಈ ಪುಟಾಣಿ (Liza Tolmacheva)ಸುಂದರಿಯ ಹೊಳೆಯುವ ಬೊಗಸೆ ಕಂಗಳು ಹಾಗೂ ನೀಳವಾದ ಹೊಂಬಣ್ಣದ ಕೂದಲು ಎಲ್ಲರನ್ನು ಸೆಳೆಯುತ್ತದೆ. ನೃತ್ಯ ಹಾಡುಗಾರಿಕೆ, ನಟನೆಯಲ್ಲೂ ಮುಂದಿರುವ ಈಕೆ ಫ್ಯಾಷನ್‌ ಲೋಕದಲ್ಲೂ ಚಾಪು ಮೂಡಿಸಿದ್ದಾಳೆ. ಹಲವು ವಸ್ತ್ರೋದ್ಯಮದ ಕ್ಯಾಟ್‌ಲಾಗ್‌ಗಳಲ್ಲಿ ಮಾಡೆಲ್ ಆಗಿ ಮಿಂಚಿದ್ದಾಳೆ ಈ ಪುಟಾಣಿ ಸುಂದರಿ

311

ರಷ್ಯಾದ ವೈಲೆಟ್ಟಾ ಆಂಟೊನೊವಾ (Violetta Antonova) 4 ವರ್ಷವಿದ್ದಾಗಲೇ ಮಕ್ಕಳ ಧಿರಿಸಿನ ಹಲವು ಜಾಹೀರಾತುಗಳಿಗೆ ಮಾಡೆಲ್ ಆಗಿದ್ದಳು, ಈಕೆಯ ಅಣ್ಣನೂ ಕೂಡ ಮಕ್ಕಳ ಉಡುಪಿನ ಮಾಡೆಲ್ ಆಗಿದ್ದಾನೆ. ಸದಾ ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗ ಬಯಸುವ ವೈಲೆಟ್ಟಾಗೆ ತನ್ನದೇ ಆದ ಇನ್ಸ್ಟಾಗ್ರಾಮ್ ಪೇಜ್ ಇದ್ದು, ಅಲ್ಲಿ ಆಕೆಯ ಅಮ್ಮ ಆಕೆಯ ಹೆಸರಿನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

411

4ನೇ ವಯಸ್ಸಿನಿಂದಲೇ ಮಾಡೆಲಿಂಗ್ ಶುರು ಮಾಡಿದ ಅನ್ನಾ (Anna Pavaga) ಮಕ್ಕಳ ಉಡುಪುಗಳ ಜಾಹೀರಾತು, ಮಕ್ಕಳ ಆಟಿಕೆಗಳು ಮತ್ತು ಕ್ರೀಡಾ ಸಾಮಗ್ರಿಗಳ ಜಾಹೀರಾತುಗಳಲ್ಲಿ ಮಾಡೆಲ್ ಆಗಿದ್ದಾರೆ. ಮಾಡೆಲಿಂಗ್ ಜೊತೆ ಅನ್ನಾ ಬ್ಯಾಲೆ, ಜಿಮ್ನಾಸ್ಟಿಕ್ಸ್ ಮತ್ತು ಡ್ರಾಯಿಂಗ್ ಅನ್ನು ಇಷ್ಟಪಡುತ್ತಾರೆ.

511

ಅಮೆರಿಕಾದ  ಈ ಅವಳಿ ಸೋದರಿಯರ (Ava Marie and Leah Rose) ಅಮ್ಮ ಇವರಿಬ್ಬರ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಶುರು ಮಾಡಿದ ನಂತರ ಫೇಮಸ್ ಆದರು. ಮಾಡೆಲಿಂಗ್ ಏಜೆನ್ಸಿಯ ಗಮನ ಸೆಳೆದ ಈ ಅವಳಿಗಳು ಹಲವು ಬ್ರಾಂಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

611

ನೈಜೀರಿಯಾ ಮೂಲದ ಈ ಕೃಷ್ಣ ಸುಂದರಿ (Jare Ijalana) ಪುಟಾಣಿ ಮಾಡೆಲ್ ಆಗಿದ್ದೇ ಆಕಸ್ಮಿಕ, ನೈಜೀರಿಯಾ ಮೂಲದ ಮೋಫ್ ಬಮುಯಿವಾ ಎಂಬ ಫೋಟೋಗ್ರಾಫರ್‌, ಆತನ ಯಾವುದೋ ಪ್ಲಾನ್‌ಗಾಗಿ ಈ ಪುಟಾಣಿಯ ಫೋಟೋ ತೆಗೆದು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದ. ಅವು ವೈರಲ್ ಆಗಿ ಕೆಲವು ಮಾಡೆಲಿಂಗ್ ಏಜೆನ್ಸಿಗಳು ಆಕೆಯನ್ನು ಸಂಪರ್ಕಿಸಿದವು. ಈಕೆಗೆ ಇಬ್ಬರು ಅಕ್ಕಂದಿರಿದ್ದು ಅವರು ಮಾಡೆಲ್‌ಗಳಾಗಿದ್ದಾರೆ. 

711

ದಕ್ಷಿಣ ಕೊರಿಯಾದ ಈ ಆರು ವರ್ಷದ ಬಾಲಕ (Cooper Lunde) ಚುಚ್ಚುವಂತಹ ಕಣ್ಣೋಟ ಹಾಗೂ ಅತ್ಯಾಕರ್ಷಕವಾದ ಕಣ್ರೆಪ್ಪೆಗಳಿಂದ ಎಲ್ಲರ ಸೆಳೆಯುತ್ತಾನೆ. ದಕ್ಷಿಣ ಕೊರಿಯಾದ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಈತನೂ ಒಬ್ಬ. ಇನ್ಸ್ಟಾಗ್ರಾಮ್‌ನಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಈ ಪುಟಾಣಿ ಮಾಡೆಲ್ ಹಲವು ಮಕ್ಕಳ ಉಡುಪು ಹಾಗೂ ಫ್ಯಾಷನ್ ನಿಯತಕಾಲಿಕೆಗಳಿಗೆ ಮಾಡೆಲ್ ಆಗಿದ್ದಾನೆ.

811
Jordyn Reinle

7 ವರ್ಷದ ಈ ಬಾಲಕಿ (Jordyn Reinle) ಅಮೆರಿಕಾದ ಲಿಟ್ಲ್ ಸೂಪರ್ ಮಾಡೆಲ್ ಆಗಿದ್ದು, ಅಮೆರಿಕದ ದೊಡ್ಡ ದೊಡ್ಡ ಬ್ರಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾಳೆ.  ಸಿಂಪ್ಲಿಸಿಟಿ ಪ್ಯಾಟರ್ನ್ಸ್, ದಿ ಚಿಲ್ಡ್ರನ್ಸ್ ಪ್ಲೇಸ್ ಮತ್ತು ಕಿಡ್‌ಪಿಕ್‌ನಂತಹ ದೊಡ್ಡ ಬ್ರಾಂಡ್‌ಗಳಿಗೆ ಮಾಡೆಲ್ ಆಗಿದ್ದಾಳೆ ಈ ಪುಟಾಣಿ

911

ಅಮೆರಿಕಾದ ಇಂಡಿಯಾನ ಮೂಲದ ಈ ಪುಟಾಣಿ (Keeike) ಗುಂಗುರು ಕೂದಲು ಹಾಗೂ ಮುದ್ದಾದ ನಗುವಿನಿಂದ ಫ್ಯಾಷನ್ ಲೋಕವನ್ನು ಸೆಳೆಯುತ್ತಿದ್ದಾಳೆ. ಇಂಗ್ಲೀಷ್ ಹಾಗೂ ಫ್ರೆಂಚ್ ಮಾತನಾಡುವ ಈ ಕೃಷ್ಣ ಚೆಲುವೆ ತನ್ನ ಚಿಕ್ಕ ವಯಸ್ಸಿನಲ್ಲೇ ದುಡಿಮೆ ಮಾಡುತ್ತಿದ್ದು, ವಿ ಪಿರಟ್ಟೆ ಏಜೆನ್ಸಿ ಎಂಬ ಮಾಡೆಲಿಂಗ್ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಳೆ. ಆಗಾಗ ಹಲವು ಮ್ಯಾಗಜೀನ್ ಕವರ್‌ಗಳಲ್ಲಿ ಕಾಣಿಸಿಕೊಳ್ಳುವ ಈಕೆಗೆ ಅನೇಕ ಬಟ್ಟೆ ಬ್ರಾಂಡ್‌ಗೆ ಅಂಬಾಸೀಡರ್ ಆಗಿದ್ದಾಳೆ. 

1011

Sofiya Razuvaeva 12 ವರ್ಷ ವಯಸ್ಸಿನ ಈ ರಷ್ಯಾದ ಮಾಡೆಲ್ ಅನ್ನು  ನಟಾಲಿಯಾ ವೊಡಿಯಾನೋವಾಗೆ (Natalia Vodianova) ಹೋಲಿಸಲಾಗುತ್ತದೆ. ಈಕೆ ಹಲವು ನಿಯತಕಾಲಿಕೆಗಳು ಮತ್ತು ಕ್ಯಾಟಲಾಗ್‌ಗಳಿಗೆ ಮಾಡೆಲ್ ಆಗಿದ್ದಾಳೆ.

1111

ಗ್ರೇಲೀ ಮೇ  ಅಮೆರಿಕನ್ ಫುಟ್‌ಬಾಲ್ ಆಟಗಾರ ಲ್ಯಾನ್ಸ್ ಮೂರೆ ಅವರ ಹಿರಿಯ ಪುತ್ರಿಯಾಗಿರುವ ಗ್ರೇಲೀ ಮೇಗೆ (Graylee Mae) ಸೌಂದರ್ಯ ಜನ್ಮಜಾತವಾಗಿ ಅಮ್ಮನಿಂದ ಬಂದಿದ್ದು,  3 ವರ್ಷ ತುಂಬುವ ಮೊದಲೇ ಹಲವು ಮಕ್ಕಳ ಬಟ್ಟೆಯ ಜಾಹೀರಾತಿನಲ್ಲಿ ಮಾಡೆಲ್ ಆಗಿ ಮಿಂಚಿದ್ದರು.  ಗ್ರೇಲಿ ಹಾಗೂ ಆಕೆಯ ಸೋದರಿಯರ ಫೋಟೋಗಳನ್ನು ತಾಯಿ ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 

Read more Photos on
click me!

Recommended Stories