ಉದ್ದ, ದಟ್ಟವಾದ ಕೂದಲು ಪಡೆಯಲು ತುಂಬಾನೆ ಸಿಂಪಲ್ ಟಿಪ್ಸ್!

Published : Sep 16, 2023, 01:21 PM IST

ಉದ್ದನೆಯ, ದಟ್ಟವಾದ ಕೂದಲು ಪಡೆಯಬೇಕೆಂಬ ಆಸೆ ಪ್ರತಿಯೊಬ್ಬ ಹುಡುಗಿಯ ಕನಸಾಗಿರುತ್ತೆ. ಆದರೆ ಎಲ್ಲರಿಗೂ ಅದನ್ನು ಸಾಧ್ಯವಾಗೋದಿಲ್ಲ. ಯಾಕಂದ್ರೆ ನಮ್ಮ ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಕೂದಲಿನ ಬಗ್ಗೆ ಗಮನ ಹರಿಸಲು ಯಾರಿಗೂ ಸಮಯ ಇರೋದಿಲ್ಲ. ಅಂತೋರಿಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್..   

PREV
17
ಉದ್ದ, ದಟ್ಟವಾದ ಕೂದಲು ಪಡೆಯಲು ತುಂಬಾನೆ ಸಿಂಪಲ್ ಟಿಪ್ಸ್!

ಆರೋಗ್ಯಯುತ ಡಯಟ್ (Healthy Diet)
ಕೂದಲಿನ ಬೆಳವಣಿಗೆಗೆ ಸರಿಯಾದ ಪೋಷಣೆ ತುಂಬಾ ಮುಖ್ಯ. ಅದಕ್ಕಾಗಿ ನಿಮ್ಮ ಡಯಟಿನಲ್ಲಿ ವಿಟಮಿನ್ಸ್,  ಖನಿಜಗಳು, ಪ್ರೋಟೀನ್ಸ್, ಸೊಪ್ಪುಗಳು, ಮೊಟ್ಟೆಗಳು, ಸಾಲ್ಮನ್, ಬೀಜಗಳು, ಧಾನ್ಯಗಳಿಂದ ಸಮೃದ್ಧವಾಗಿರುವ ಆಹಾರ ಸೇರಿಸೋದನ್ನು ಮರೆಯಬೇಡಿ. 

27

ಕೇರ್ ತೆಗೆದುಕೊಳ್ಳೋದು ಮುಖ್ಯ  (Scalp Care)
ರಕ್ತ ಪರಿಚಲನೆಯನ್ನು (Blood Circulation) ಉತ್ತೇಜಿಸಲು ಮತ್ತು ನೈಸರ್ಗಿಕ ತೈಲಗಳನ್ನು (Natural Oil) ಕೂದಲು ಸರಿಯಾಗಿ ಹೀರಿಕೊಳ್ಳಲು ನಿಯಮಿತವಾಗಿ ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಅಷ್ಟೇ ಅಲ್ಲ ಕೂದಲನ್ನು ತೊಳೆಯುವಾಗ ಬಿಸಿ ನೀರನ್ನು ಬಳಸುವುದನ್ನು ತಪ್ಪಿಸಿ, ಏಕೆಂದರೆ ಇದು ಕೂದಲಿನ ನ್ಯಾಚುರಲ್ ಎಣ್ಣೆಯನ್ನು ತೆಗೆದು ಹಾಕುತ್ತದೆ. 

37

ಕೂದಲನ್ನು ಟ್ರಿಮ್ ಮಾಡಿ (Trim Your Hair)
ಪ್ರತಿ 6-8 ವಾರಗಳಿಗೊಮ್ಮೆ ನಿಯಮಿತವಾಗಿ ಟ್ರಿಮ್ ಮಾಡುವುದರಿಂದ ಒಡೆದ ತುದಿಗಳನ್ನು ತೊಡೆದುಹಾಕಲು ಮತ್ತು ಮತ್ತಷ್ಟು ಒಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ, ನಿಮ್ಮ ಕೂದಲು ಯಾವುದೇ ಅಡೆತಡೆಯಿಲ್ಲದೆ ಉದ್ದವಾಗಿ ಬೆಳೆಯಲು ಇದು ಅನುವು ಮಾಡಿಕೊಡುತ್ತದೆ. 
 

47

ಶಾಂಪೂ ಮತ್ತು ಕಂಡೀಶನರ್ (Gentle Shampoo and Conditioner)
ನಿಮ್ಮ ಕೂದಲಿನ ಪ್ರಕಾರಕ್ಕೆ ಸೂಕ್ತವಾದ ಸಲ್ಫೇಟ್ ಮುಕ್ತ, ಸೌಮ್ಯ ಶಾಂಪೂ ಮತ್ತು ಕಂಡೀಷನರ್ ಬಳಸಿ. ಅತಿಯಾಗಿ ಕೂದಲು ತೊಳೆಯುವುದು ನೈಸರ್ಗಿಕ ತೈಲಗಳನ್ನು ತೆಗೆದುಹಾಕಬಹುದು, ಆದ್ದರಿಂದ ಪ್ರತಿ 2-3 ದಿನಗಳಿಗೊಮ್ಮೆ ಅಥವಾ ಅಗತ್ಯಕ್ಕೆ ತಕ್ಕಂತೆ ಕೂದಲು ತೊಳೆಯಿರಿ.

57

ಹೀಟ್ ಸ್ಟ್ರೈಟನಿಂಗ್ ಅವಾಯ್ಡ್ ಮಾಡಿ ( Avoid Heat Styling)
ಫ್ಲಾಟ್ ಐರನ್ ಗಳು ಮತ್ತು ಕರ್ಲಿಂಗ್ ಮಾಡುವಂತಹ ಹೀಟ್ ಸ್ಟೈಲಿಂಗ್ ಸಾಧನಗಳ ಅತಿಯಾದ ಬಳಕೆಯು ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ. ಇದರಿಂದ ಕೂದಲು ನ್ಯಾಚುರಲ್ ಆಗಿ ಸುಂದಾರವಾಗಿ ಬೆಳೆಯೋದಿಲ್ಲ. ಹಾಗಾಗಿ ಇದನ್ನ ಸಾಧ್ಯವಾದಷ್ಟು ಕಡಿಮೆ ಬಳಸಿ. 

67

ಡೀಪ್ ಕಂಡೀಶನಿಂಗ್ (deep conditioning)
ನಿಮ್ಮ ಕೂದಲನ್ನು ಹೈಡ್ರೇಟ್ ಆಗಿಡಲು ಮತ್ತು ಶುಷ್ಕತೆ ಮತ್ತು ಒಡೆಯುವಿಕೆಯನ್ನು ತಡೆಯಲು ವಾರಕ್ಕೊಮ್ಮೆಯಾದರೂ ಡೀಪ್ ಕಂಡೀಷನಿಂಗ್ ಚಿಕಿತ್ಸೆಯನ್ನು ಮಾಡೋದು ಉತ್ತಮ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತೆ. 

77

ಟೈಟ್ ಆದ ಹೇರ್ ಸ್ಟೈಲ್ ಬೇಡ (avoid tight hairstyle)
ಪೋನಿಟೇಲ್ಸ್, ಜಡೆ ಅಥವಾ ಬನ್‌ಗಳಂತಹ ಬಿಗಿಯಾದ ಕೇಶ ವಿನ್ಯಾಸ ನಿಮ್ಮ ಕೂದಲನ್ನು ಹೆಚ್ಚು ಬಿಗಿಯಾಗಿಸಿ, ನೋವು ಮಾಡುತ್ತದೆ ಮತ್ತು ಒಡೆಯಲು ಕಾರಣವಾಗಬಹುದು. ಹಾಗಾಗಿ ಸಡಿಲವಾದ ಶೈಲಿಗಳನ್ನು ಆರಿಸಿ ಮತ್ತು ಅಲುಗಾಡದ ಅಥವಾ ಎಳೆಯದ ಹೇರ್ ಟೈಗಳನ್ನು ಬಳಸಿ

Read more Photos on
click me!

Recommended Stories