ವೈಟ್ ಶರ್ಟ್ ಜೊತೆಗೆ ಆಲಿವ್ ಗ್ರೀನ್ (olive green) ಬಣ್ಣದ ಡೆನಿಮ್ ಜೊತೆ ಕೈಗೆ ಬ್ರೌನ್ ಬೆಲ್ಟ್ ವಾಚ್ ಮತ್ತು ಕಾಲಿಗೆ ಬ್ರೌನ್ ಶೂ ಧರಿಸಿದ್ರೆ ಪುರುಷರು ಖಂಡಿತವಾಗಿ ವಾವ್ ಎನ್ನುವಂತೆ ಕಾಣಿಸುತ್ತಾರೆ.
ಚೆಕ್ಡ್ ಶರ್ಟ್ (checked shirt) ಫ್ಯಾಷನ್ ಯಾವತ್ತೂ ಹಳತ್ತಾಗಲ್ಲ. ಅದರಲ್ಲೂ ರೆಡ್ ಚೆಕ್ಡ್ ಶರ್ಟ್ ಜೊತೆಗೆ ಆಫ್ ವೈಟ್ ಅಥವಾ ಐವರಿ , ಬೀಜ್ ಪ್ಯಾಂಟ್ ಕಾಂಬಿನೇಶನ್ ಚೆನ್ನಾಗಿರುತ್ತೆ. ಅದರ ಜೊತೆಗೆ ವೈಟ್ ಶೂಗಳು, ಸೂಪರ್ ಆಗಿರುತ್ತೆ.
ವೈಟ್ ಶರ್ಟ್ ಯಾವತ್ತೂ ಔಟ್ ಆಫ್ ಫ್ಯಾಷನ್ (out of fashion) ಆಗೋದೆ ಇಲ್ಲ. ಈ ವೈಟ್ ಶರ್ಟ್ ಜೊತೆಗೆ ಬ್ಲ್ಯಾಕ್ ಬಣ್ಣದ ಡೆನಿಮ್ ಕೂಡ ತುಂಬಾನೆ ಚೆನ್ನಾಗಿ ಮ್ಯಾಚ್ ಆಗಿತ್ತೆ. ಅಷ್ಟೇ ಅಲ್ಲ ಇದರ ಜೊತೆ ವೈಟ್ ಶೂಗಳು ಪರ್ಫೆಕ್ಟ್ ಕಾಂಬಿನೇಶನ್.
ಇನ್ನು ಬ್ರೌನ್ ಬಣ್ಣದ ಪ್ಯಾಂಟ್ (brown pant) ಜೊತೆಗೆ ಮರೂನ್ ಮತ್ತು ಬ್ಲ್ಯಾಕ್ ಮಿಕ್ಸ್ ಆಗಿರೋ ಸ್ವಲ್ಪ ಚೆಕ್ಡ್ ಅಂತಾನೆ ಹೇಳಬಹುದಾದ ಶರ್ಟ್ ಕೂಡ ಉತ್ತಮ ಕಾಂಬಿನೇಶನ್. ಪುರುಷರು ನಿಜಕ್ಕೂ ಹಾಟ್ ಆಗಿ ಕಾಣಿಸ್ತಾರೆ.
ಲೈಟ್ ಬ್ಲೂ ಬಣ್ಣ (light blue shirt) ಅಥವಾ ತಿಳಿ ನೀಲಿ ಬಣ್ಣದ ಶರ್ಟ್ ಜೊತೆಗೆ ಕ್ರೀಂ ಬಣ್ಣದ ಶರ್ಟ್ ಚೆನ್ನಾಗಿರುತ್ತೆ. ಅಷ್ಟೆ ಅಲ್ಲ ಇದರ ಜೊತೆಗೆ ಬ್ರೌನ್ ಶೂಗಳು, ಬ್ರೌನ್ ಬೆಲ್ಟ್ ಕಾಂಬಿನೇಶನ್ ಸಖತ್ತಾಗಿರುತ್ತೆ.
ಇನ್ನು ಪುರುಷರಿಗೆ ಸೂಟ್ ಆಗುವಂತಹ ಮತ್ತೊಂದು ಬಣ್ಣದ ಶರ್ಟ್ ಪ್ಯಾಂಟ್ ಕಾಂಬಿನೇಶನ್ ಅಂದ್ರೆ ಆಲಿವ್ ಗ್ರೀನ್ ಬಣ್ಣದ ಶರ್ಟ್ ಮತ್ತು ಬ್ಲೂ ಡೆನಿಮ್. ಖಂಡಿತಾ ಸೆಕ್ಸಿಯಾಗಿ ಕಾಣಿಸ್ತಾರೆ ಗಂಡಸ್ರು.
ಇದಲ್ಲದೇ ಗ್ರೇ ಬಣ್ಣದ ಪ್ಯಾಂಟ್ ಜೊತೆ ಮರೂನ್ ಬಣ್ಣದ ಪ್ಲೈನ್ ಶರ್ಟ್ ಕಾಂಬಿನೇಶನ್ ಚೆನ್ನಾಗಿರುತ್ತೆ. ಕೈಗಂಟಿನವರೆಗೆ ಶರ್ಟ್ ಸ್ಲೀವ್ಸ್ ಮಡಚಿ, ಬ್ರೌನ್ ಬಣ್ಣದ ಶೂ ಧರಿಸಿದ್ರೆ ಸಖತ್ತಾಗಿ ಕಾಣಿಸೋದು ಖಚಿತ.