Published : Mar 14, 2020, 11:10 AM ISTUpdated : Mar 14, 2020, 05:38 PM IST
ಬಾಲಿವುಡ್ ನಟಿ ಮಲೈಕಾ ಅರೋರಾ ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರತಿಯೊಂದೂ ಚಲನವಲನವೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತದೆ. ಅವರ ಸ್ಟೈಲಿಶ್ ಜಿಮ್ ಲುಕ್ ಅಂತೂ ಎಂಥವರಿಗೂ ಜಿಮ್ ಮಾಡಬೇಕೆಂದು ಎನಿಸುವಂತೆ ಮಾಡುತ್ತದೆ. ಅವರು ಧರಿಸಿರುವ ಮೈ ಬಣ್ಣದ ಟೈಟ್ ಜಿಮ್ ಔಟ್‌ಫಿಟ್‌ನಿಂದ ಮಲೈಕಾ ಅರೋರಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಮಲೈಕಾ ಅರೋರಾ ಅವರ ಈ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಷೆಶನ್ ಕ್ರಿಯೇಟ್ ಮಾಡಿದ್ದು, ಜನರು ಇದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.