ಇಲ್ಲಿ ನೋಡಿ, ಲಾಂಡ್ರಿ ಮಾಡುತ್ತಿದ್ದ ಹಿರಿಯ ಜೋಡಿಯ ಮಾಡೆಲಿಂಗ್ ಮೋಡಿ

Suvarna News   | Asianet News
Published : Aug 13, 2020, 07:16 PM ISTUpdated : Aug 13, 2020, 07:24 PM IST

ತೈವಾನ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ಈ ಜೋಡಿ ಸೆಲಿಬ್ರಿಟಿಗಳೂ ಇಲ್ಲ, ಯುವ ಜೋಡಿಯೂ ಅಲ್ಲ, ಬದಲಿಗೆ ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ. ಈ ಮಾಡೆಲಿಂಗ್‌ಗೊಂದು ಕಾರಣವಿದೆ. ಈ ಜೋಡಿಯ ಕತೆ ಆಸಕ್ತಿಕರವಾಗಿದೆ. 

PREV
19
ಇಲ್ಲಿ ನೋಡಿ, ಲಾಂಡ್ರಿ ಮಾಡುತ್ತಿದ್ದ ಹಿರಿಯ ಜೋಡಿಯ ಮಾಡೆಲಿಂಗ್ ಮೋಡಿ

83 ವರ್ಷದ ಚಾಂಗ್ ವಾನ್ ಜಿ ಹಾಗೂ ಆತನ ಪತ್ನಿ 84 ವರ್ಷದ ಸು ಶೋಎರ್ ಕಳೆದೊಂದು ತಿಂಗಳಲ್ಲಿ ಇನ್ಸ್ಟಾಗ್ರಾಂನಲ್ಲಿ ಸ್ಟಾರ್‌ಗಳಾಗಿದ್ದಾರೆ. ಈ ಒಂದೇ ತಿಂಗಳಲ್ಲಿ ಅವರ ಬೆಂಬಲಿಗರ ಸಂಖ್ಯೆ 6 ಲಕ್ಷಕ್ಕೇರಿದೆ!

29

ತೈವಾನ್ ಎಡಿಶನ್‌ನ ವೋಗ್ ಹಾಗೂ ಮೇರಿ ಕ್ಲೇರ್ ನಿಯತಕಾಲಿಕೆಗಳಲ್ಲೂ ಸುದ್ದಿಯಾಗಿ ಸೈ ಎನಿಸಿಕೊಂಡಿದ್ದಾರೆ. ಇಷ್ಟಕ್ಕೂ ಇವರು ಮಾಡಿದ್ದೇನು ಗೊತ್ತಾ?

39

ಇಷ್ಟು ವರ್ಷಗಳ ಕಾಲ ತೈವಾನ್‌ನ ಸಣ್ಣ ಪಟ್ಟಣವೊಂದರಲ್ಲಿ ಲಾಂಡ್ರಿ ಸರ್ವೀಸ್ ನಡೆಸುತ್ತಿತ್ತು ಜೋಡಿ. ಇಲ್ಲಿ ಲಾಂಡ್ರಿಗೆ ನೀಡಿದ ಬಟ್ಟೆಗಳಲ್ಲಿ ಕೆಲವನ್ನು ಗ್ರಾಹಕರು ವಾಪಸ್ ಪಡೆಯಲು ಬಾರದೆ ಅವು ಅಲ್ಲೇ ದೊಡ್ಡ ರಾಶಿಯಾದವು. ಇಂಥವು ಕನಿಷ್ಠ 400 ಬಟ್ಟೆಯಾದರೂ ಇವೆಯಂತೆ. 

49

ಈ ಮಧ್ಯೆ ಈ ಜೋಡಿಯು ತಮ್ಮ ಅಂಗಡಿಯಲ್ಲಿ ವ್ಯಾಪಾರವಿಲ್ಲದೆ, ರಸ್ತೆಯನ್ನು ನೋಡುತ್ತಾ ಬೋರ್ ಹೊಡೆಸಿಕೊಳ್ಳುವುದನ್ನು ಮೊಮ್ಮಗ ರೀಫ್ ಚಾಂಗ್ ನೋಡಿದ. ಆತನಿಗೆ ಅವರ ಜೀವನದಲ್ಲಿ ಉತ್ಸಾಹ ತರಬೇಕೆನಿಸಿದ ಕಾರಣದಿಂದ ಒಂದು ಐಡಿಯಾ ಮಾಡಿದ. 

59

ಅಂಗಡಿಯಲ್ಲಿ ಅಳಿದುಳಿದ ಬಟ್ಟೆಗಳನ್ನು ಹೊಂದಿಸಿ ತನ್ನ ಅಜ್ಜ ಅಜ್ಜಿಯರಿಗೆ ಹಾಕಿ ಅವರನ್ನು ಮಾಡೆಲ್‌ಗಳಂತೆ ರೆಡಿ ಮಾಡಿ ಫೋಟೋಗಳನ್ನು ತೆಗೆದ. 

69

ಕ್ಯಾಮೆರಾಗೆ ಬಹಳ ನ್ಯಾಚುರಲ್ ಆಗಿ ಪೋಸ್ ನೀಡಿದರು ಅಜ್ಜಅಜ್ಜಿ. ಈ ಫೋಟೋಗಳನ್ನು ಇನ್ಸ್ಟಾಗ್ರಾಂಗೆ ಹಾಕಿದ ರೀಫ್. ಮುಂದಾದದ್ದೇ ಒಂದು ಸೆನ್ಸೇಶನ್. 

79

ಈ ಹಿರಿಜೀವಗಳ ಮಾಡೆಲಿಂಗನ್ನು ಎಲ್ಲರೂ ಮೆಚ್ಚಲಾರಂಭಿಸಿದರು. ಅದರಿಂದ ಖುಷಿಯಾದ ಇವರು ತಮ್ಮ ವಾರ್ಡ್ರೋಬ್‌ನಲ್ಲಿರುವ 30-40 ವರ್ಷಗಳ ಹಿಂದಿನ ಬಟ್ಟೆಯನ್ನೂ ಧರಿಸಿ ಪೋಸ್ ನೀಡಲಾರಂಭಿಸಿದರು. 

89

ಈಗ ತೈವಾನ್‌ನಲ್ಲಿ ಸ್ಟಾರ್ ಆಗಿರುವ ಅಜ್ಜಅಜ್ಜಿಸ ತಮಗೆ 30 ವರ್ಷ ಚಿಕ್ಕವರಾದಂತೆನಿಸುತ್ತದೆ ಎಂದಿದ್ದಾರೆ. ನನಗೆ ವಯಸ್ಸಾಗಿರಬಹುದು. ಆದರೆ ನನ್ನ ಹೃದಯಕ್ಕೆ ವಯಸ್ಸಾಗಿಲ್ಲ ಎನ್ನುತ್ತಾರೆ ತಾತ. ಅವರಿಗೆ ಚೆಂದದ ಬಟ್ಟೆಗಳನ್ನು ಧರಿಸುವುದು ಖುಷಿ ಕೊಡಲಾರಂಭಿಸಿದೆಯಂತೆ. 

99

ಮನಸ್ಸು ಮಾಡಿದರೆ ಇಳಿ ವಯಸ್ಸಿನಲ್ಲೂ ಯಂಗ್ ಆಗಿರಬಹುದು, ಎಂಜಾಯ್ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿರುವ ಈ ಜೋಡಿಯ ಉತ್ಸಾಹ ಎಲ್ಲರಿಗೂ ಮಾದರಿಯಲ್ಲವೇ?  

click me!

Recommended Stories