'ದಿಯಾ' ಚಿತ್ರದ ನಟಿ ಖುಷಿ ರವಿ ಕುಟುಂಬ ಎಷ್ಟು ಮುದ್ದಾಗಿದೆ ನೋಡಿ..

First Published | Dec 22, 2023, 10:40 AM IST

'ದಿಯಾ' ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ ಖುಷಿ ರವಿ.  ಕರಾವಳಿ ಮೂಲದ ಬೆಡಗಿ ತೆಲುಗು ಚಿತ್ರಗಳಲ್ಲಿ ಸಹ ನಟಿಸಿದ್ದಾರೆ. ಬಿಸಿನೆಸ್ ಮ್ಯಾನ್‌ನ್ನು ಮದ್ವೆಯಾಗಿರೋ ಖುಷಿ ರವಿಗೆ ಮುದ್ದಾದ ಹೆಣ್ಣು ಮಗುವೂ ಇದೆ. ದಿಯಾ ನಟಿಯ ಕುಟುಂಬ ಎಷ್ಟು ಮುದ್ದಾಗಿದೆ ನೋಡಿ..

'ದಿಯಾ' ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ ಖುಷಿ ರವಿ. ಕರಾವಳಿ ಮೂಲದ ಬೆಡಗಿ ತ್ರಿಕೋನ ಪ್ರೇಮಕಥೆಯ ದಿಯಾ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದರು.

ಆ ನಂತರ ಖುಷಿ, ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ‘ದಿಯಾ’ ಚಿತ್ರದ ಮೂಲಕ ಮನೆಮಾತಾದ ಖುಷಿ ರವಿ, ನಂತರ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ್ದರು.

Tap to resize

ತೆಲುಗಿನಲ್ಲಿ ‘ದಿಯಾ’ ಚಿತ್ರವನ್ನು ನೋಡಿದ ನಿರ್ದೇಶಕ ವಿ ಆನಂದ್‌ ಅವರು ಖುಷಿ ಅವರನ್ನು ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. 

ಅಡಿಪೊಳಿ ಅನ್ನೋ ಆಲ್ಬಂ ಸಾಂಗ್ ಮೂಲಕ ಖುಷಿ ಈಗ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದರು. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಖುಷಿ ರವಿ, 30ವರ್ಷದ ನಟಿ ವಿವಾಹಿತೆಯಾಗಿ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಈಗಲೂ ಸೌಂದರ್ಯದ ಖನಿಯಂತಿರೋ ಖುಷಿ, ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. 

ಖುಷಿ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಜೆಪಿ ನಗರದಲ್ಲಿ ಖುಷಿ ಪ್ರಾಥಮಿಕ ಶಿಕ್ಷಣ ಪಡೆದರು. ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪಡೆದರು. ಹಲವು ವರ್ಷಗ ಕಾಲ ರಂಗಭೂಮಿಯಲ್ಲೂ ನಟಿ ತೊಡಗಿಸಿಕೊಂಡಿದ್ದರು.

ಖುಷಿ ಅವರ ಮೂಲ ಹೆಸರು ಸುಷ್ಮಿತಾ. ಚಿತ್ರರಂಗಕ್ಕೆ ಬಂದ ಮೊದಲು ಖುಷಿ ರವಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ದಿಶಾ, ಭರತನಾಟ್ಯವನ್ನೂ ಕಲಿತಿದ್ದಾರೆ. ಸಂಗೀತವನ್ನೂ ಕಲಿತಿದ್ದಾರೆ. 

ಕೆಲ ವರ್ಷಗಳ ಹಿಂದೆ ಖುಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪತಿಯ ಹೆಸರು ರಾಕೇಶ್. ರಾಕೇಶ್ ಮತ್ತು ಖುಷಿ ಅವರದ್ದು ಲವ್ ಕಂ ಆರೇಂಜ್ಡ್ ಮ್ಯಾರೇಜ್‌.

ಖುಷಿ ಪತಿ ರಾಕೇಶ್‌, ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ. ರಾಕೇಶ್‌-ಖುಷಿ ಮುದ್ದಾದ ಹೆಣ್ಣು ಮಗುವಿನ ಹೆಸರು ತನಿಶಾ. ನಟಿ ಖುಷಿ ರವಿ, ದಿಯಾ ಚಿತ್ರಕ್ಕಾಗಿ ನಾಲ್ಕು ವರ್ಷ ಮೀಸಲಿಟ್ಟಿದ್ದರು.

Latest Videos

click me!