ಬೋಲ್ಡ್ ಲುಕ್ ಗಾಗಿ ಹೆಚ್ಚು ಹೆಚ್ಚು ಲಿಪ್ ಸ್ಟಿಕ್ ಬಳಸೋದು ಭಾರಿ ಡೇಂಜರ್ !

First Published | Oct 18, 2022, 5:16 PM IST

ಇತ್ತಿಚಿನ ದಿನಗಳಲ್ಲಿ, ಲಿಪ್ ಸ್ಟಿಕ್ ಮಹಿಳೆಯರ ಜೀವನದ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು. ಹೆಚ್ಚಿನ ಎಲ್ಲಾ ಮಹಿಳೆಯರೂ ಸಹ ತುಟಿಗಳ ಮೇಲೆ ಕೆಂಪು ಬಣ್ಣವನ್ನು ಹಚ್ಚಲು ಇಷ್ಟಪಡ್ತಾರೆ. ಆದರೆ ಹೆಚ್ಚು ಲಿಪ್ ಸ್ಟಿಕ್ ಬಳಸುವುದರಿಂದ ನಿಮಗೆ ಅನೇಕ ಸಮಸ್ಯೆಗಳು ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು ಚೆನ್ನಾಗಿ ಕಾಣುತ್ತೆ ಎಂದು ಹೆಚ್ಚು ಹೆಚ್ಚು ಲಿಪ್ ಸ್ಟಿಕ್ ಹಚ್ಚೋ ಮುನ್ನ ನೀವಿದನ್ನು ಓದಲೇಬೇಕು. 
 

ಲಿಪ್ ಸ್ಟಿಕ್ ಇಲ್ಲದೆ ಮೇಕಪ್ ಕಂಪ್ಲೀಟ್ ಆಗೋದೇ ಇಲ್ಲ ಮತ್ತು ನೀವು ಮೇಕಪ್ ಮಾಡದಿದ್ದರೆ ಮತ್ತು ಕೇವಲ ಸ್ವಲ್ಪ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ಸಾಕು, ನಿಮ್ಮ ಇಡೀ ಮುಖ ಅರಳುತ್ತೆ. ಮಹಿಳೆಯರು ಕಚೇರಿಗೆ ಹೋಗಬೇಕಾಗಿರಲಿ ಅಥವಾ ಮದುವೆ ಪಾರ್ಟಿಗೆ ಹೋಗಲು ಅಥವಾ ಮನೆಯಿಂದ ಹೊರಹೋಗಲು ಬಯಸಿದ್ರೆ, ಅವರು ಖಂಡಿತವಾಗಿಯೂ ಲಿಪ್ಸ್ಟಿಕ್ (lipstick) ಹಚ್ಚಿ ಅದಕ್ಕೆ ಮತ್ತೆ ಮತ್ತೆ ಶೇಡ್ ಹಾಕುತ್ತಲೇ ಇರುತ್ತಾರೆ. ತುಟಿಗಳಿಗೆ ಬೋಲ್ಡ್ ಲುಕ್ ನೀಡುವ ಸಲುವಾಗಿ ಮತ್ತೆ ಮತ್ತೆ ಲಿಪ್ ಸ್ಟಿಕ್ ಹಚ್ತಾರೆ.
 

ಆದರೆ ಹೆಚ್ಚು ಲಿಪ್ ಸ್ಟಿಕ್ ಬಳಸುವುದರಿಂದ ನಿಮಗೆ ಅನೇಕ ಸಮಸ್ಯೆಗಳು ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ? ಒಂದು ಸಂಶೋಧನೆಯ ಪ್ರಕಾರ, ಲಿಪ್ ಸ್ಟಿಕ್ ಹಚ್ಚುವ ಮತ್ತು ಅದನ್ನು ಸೆಟ್ ಮಾಡಲು ಲಿಪ್ ಸ್ಟಿಕ್ ಅನ್ನು ಪದೇ ಪದೇ ಬಳಸುವ ಮಹಿಳೆಯರು ಗಮನಿಸಬೇಕಾದ ವಿಷ್ಯ ಅಂದ್ರೆ 87 ಮಿಗ್ರಾಂ ಲಿಪ್ ಸ್ಟಿಕ್ ಅವರ ಹೊಟ್ಟೆಗೆ ಹೋಗುತ್ತದೆ.  ಹೆಚ್ಚು ಲಿಪ್ ಸ್ಟಿಕ್ ಬಳಸುವ ಮೂಲಕ ತುಟಿಗಳು ಮತ್ತು ದೇಹದಲ್ಲಿ ಯಾವ ಸಮಸ್ಯೆಗಳು ಉಂಟಾಗಬಹುದು ಅನ್ನೋದನ್ನು ತಿಳಿಯೋಣ. 

Latest Videos


ಕೆಮಿಕಲ್ ಲಿಪ್ ಸ್ಟಿಕ್ ಬಳಕೆ ಮಾರಣಾಂತಿಕ
ಹೆಚ್ಚಿನ ಲಿಪ್ ಸ್ಟಿಕ್ ಗಳು ಆಲ್ಕೋಹಾಲ್ ಬೇಸ್ ಗಳಾಗಿವೆ (alcohol base lipstick) , ಇದು ನಿಮ್ಮ ತುಟಿಗಳನ್ನು ಕಪ್ಪು ಮತ್ತು ಶುಷ್ಕವಾಗಿಸುತ್ತದೆ. ಇಷ್ಟೇ ಅಲ್ಲ, ಲಿಪ್ ಸ್ಟಿಕ್ ನಲ್ಲಿ ಲೇಟ್ ನ್ಯೂರೋಟಾಕ್ಸಿನ್ ಗಳು ಇರುತ್ತವೆ, ಇದು ನಮ್ಮ ತುಟಿಗಳಿಗೆ ಹಾನಿಕಾರಕವಾಗಿದೆ. ಅಷ್ಟೇ ಅಲ್ಲ, ತುಟಿಗಳಿಗೆ ಹಾನಿಕಾರಕವಾದ ಲಿಪ್ ಸ್ಟಿಕ್ ಗೆ ಬಣ್ಣವನ್ನು ಸೇರಿಸಲು ಮ್ಯಾಂಗನೀಸ್, ಸೀಸದ ಕ್ಯಾಡ್ಮಿಯಂನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಲಿಪ್ ಸ್ಟಿಕ್ ನ ಅನಾನುಕೂಲತೆಗಳು (disadvantages of lipstick)
1. ಹೆಚ್ಚು ಲಿಪ್ ಸ್ಟಿಕ್ ಬಳಸೋದ್ರಿಂದ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೆಚ್ಚು ಲಿಪ್ ಸ್ಟಿಕ್ ಬಳಸುವ ಜನರು ತಮ್ಮ ತುಟಿಗಳ ಗಾಢವಾದ ಲೇಯರ್ ಹೊಂದಿರುತ್ತಾರೆ ಮತ್ತು ತುಟಿಗಳ ಒಳಭಾಗವು ಸ್ವಲ್ಪ ಹಗುರವಾಗಿರುತ್ತದೆ. ಹೆಚ್ಚು ಲಿಪ್ ಸ್ಟಿಕ್ ಹಚ್ಚೋದ್ರಿಂದ ಹೀಗಾಗುತ್ತೆ.

2. ತುಟಿಗಳು ಮಾತ್ರವಲ್ಲದೆ, ಲಿಪ್ಸ್ಟಿಕ್ ಹಚ್ಚುವುದರಿಂದ ಹೊಟ್ಟೆ ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗಬಹುದು (kidney damage), ಏಕೆಂದರೆ ನೀವು ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿದಾಗ, ಅದು ನಮ್ಮ ಬಾಯಿಯ ಮೂಲಕ ಹೊಟ್ಟೆಗೆ ಹೋಗುತ್ತದೆ, ಇದು ನಮ್ಮ ಹೊಟ್ಟೆ ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ.

3. ಅನೇಕ ಬಾರಿ ಅನೇಕ ಮಹಿಳೆಯರು ಲಿಪ್ಸ್ಟಿಕ್ ಅನ್ನು ಐಶಾಡೋ ಅಥವಾ ಬ್ಲಷರ್ ಆಗಿ ಬಳಸುತ್ತಾರೆ, ಆದರೆ ಇದನ್ನು ಮಾಡಬಾರದು, ಏಕೆಂದರೆ ಲಿಪ್ಸ್ಟಿಕ್ನಲ್ಲಿರುವ ರಾಸಾಯನಿಕಗಳು (chemical lipstick) ಕಣ್ಣುಗಳಲ್ಲಿ ಸೋಂಕು, ಕೆಂಪಾಗುವಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. 

4. ಗರ್ಭಿಣಿಯರು ವಿಶೇಷವಾಗಿ ಲಿಪ್ ಸ್ಟಿಕ್ ನಿಂದ ಅಂತರ ಕಾಯ್ದುಕೊಳ್ಳಬೇಕು, ಏಕೆಂದರೆ ಲಿಪ್ ಸ್ಟಿಕ್ ನಲ್ಲಿರುವ ಕೆಮಿಕಲ್ ಗಳು ಹೊಟ್ಟೆಗೆ ಹೋಗುತ್ತಾನೆ ಮತ್ತು ಅದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಸಾಧ್ಯವಾದಷ್ಟು ಲಿಪ್ ಸ್ಟಿಕ್ ಅವಾಯ್ಡ್ ಮಾಡೋದು ಉತ್ತಮ ಎಂದು ಹೇಳಲಾಗುತ್ತೆ.

ಲಿಪ್ ಸ್ಟಿಕ್ ಹಚ್ಚುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ 
- ನೀವು ಲಿಪ್ಸ್ಟಿಕ್ ಹಚ್ಚಿದರೆ, ಯಾವಾಗಲೂ ಹರ್ಬಲ್ ಲಿಪ್ಸ್ಟಿಕ್ (herbal lipstick) ಬಳಸಬೇಕು, ಇದರಲ್ಲಿ ರಾಸಾಯನಿಕ ಬಣ್ಣಗಳ ಬದಲಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ.
- ಹೆಚ್ಚು ಗಾಢ ಬಣ್ಣದ ಲಿಪ್ ಸ್ಟಿಕ್ ಹಚ್ಚುವುದನ್ನು ತಪ್ಪಿಸಬೇಕು. 
- ಲಿಪ್ಸ್ಟಿಕ್ ಹಚ್ಚುವ ಮೊದಲು ನಿಮ್ಮ ತುಟಿಗಳನ್ನು ಯಾವಾಗಲೂ ಚೆನ್ನಾಗಿ ಮಾಯಿಶ್ಚರೈಸ್ ಮಾಡಿ.

- ಇಷ್ಟೇ ಅಲ್ಲ, ಮಲಗುವಾಗ ಯಾವತ್ತೂ ನಿಮ್ಮ ತುಟಿಗಳ ಮೇಲೆ ಲಿಪ್ಸ್ಟಿಕ್ ಇರಬಾರದು ಅನ್ನೋದು ನೆನಪಿರಲಿ. ಮಲಗುವ ಮೊದಲು ಯಾವಾಗಲೂ ಸಂಪೂರ್ಣ ಲಿಪ್ ಸ್ಟಿಕ್ ಅನ್ನು ಸ್ವಚ್ಛಗೊಳಿಸಿ ಮತ್ತು ಅದರ ಮೇಲೆ ವ್ಯಾಸಲೀನ್ ಅಥವಾ ಯಾವುದೇ ಪೆಟ್ರೋಲಿಯಂ ಜೆಲ್ ಹಚ್ಚಿ ಮಲಗಬೇಕು.

- ವಾರದಲ್ಲಿ ಕನಿಷ್ಠ 2 ಬಾರಿ ತುಟಿಗಳನ್ನು ಎಕ್ಸ್ಫೋಲಿಯೇಟ್ ಮಾಡಬೇಕು. ಇದಕ್ಕಾಗಿ, ಸಕ್ಕರೆ ಮತ್ತು ಜೇನುತುಪ್ಪ ಬಳಸಬಹುದು ಮತ್ತು ಅದನ್ನು ತುಟಿಗಳ ಮೇಲೆ ಮಸಾಜ್ ಮಾಡಬಹುದು. ಇದು ತುಟಿಗಳ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಸುಂದರ, ಸುಕೋಮಲ ತುಟಿ ನಿಮ್ಮದಾಗುತ್ತೆ.
 

click me!