ಫ್ಯಾಷನ್‌ ವೀಕ್‌ನಲ್ಲಿ ತುಂಡುಡುಗೆಯಲ್ಲಿ ಮಿಂಚಿದ ಬ್ಯೂಟಿಕ್ವೀನ್ ದಿವಿತಾ, 1000 ಕೋಟಿಯ ಉದ್ಯಮ ಕಟ್ಟಿದ ಚೆಲುವೆ!

First Published | Feb 25, 2024, 6:47 PM IST

ಫ್ಯಾಷನ್ ಲೋಕದಲ್ಲಿರುವವರು  ಅಥವಾ ಆಸಕ್ತಿ ಇರುವವರು ಯಾರು ತಾನೆ  ಮಿಲಾನ್ ಫ್ಯಾಷನ್ ವೀಕ್ ಹೆಸರು ಕೇಳಿಲ್ಲ? ಹೌದು ಇಲ್ಲಿನ ರೂಪದರ್ಶಿಗಳು ತಮ್ಮ ಸ್ಟೈಲಿಶ್ ಉಡುಗೆಗಳಿಂದ ಜಗತ್ತನ್ನೇ ತಮ್ಮತ್ತ ಸೆಳೆಯುತ್ತಾರೆ. ಅಂಥಾ ಪ್ರತಿಷ್ಠಿತ ಫ್ಯಾಷನ್‌ ವೀಕ್‌ನಲ್ಲಿ ಈ ಬಾರಿ ಹೆಸರಾಂತ ಬ್ಯುಸಿನೆಸ್ ವುಮೆನ್ ದಿವಿತಾ ಸರಫ್ ಭಾಗಿಯಾಗಿದ್ದಾರೆ.
 

ಫ್ಯಾಷನ್ ಲೋಕದಲ್ಲಿರುವವರು  ಅಥವಾ ಆಸಕ್ತಿ ಇರುವವರು ಯಾರು ತಾನೆ ಮಿಲಾನ್ ಫ್ಯಾಷನ್ ವೀಕ್ ಹೆಸರು ಕೇಳಿಲ್ಲ? ಹೌದು ಇಲ್ಲಿನ ರೂಪದರ್ಶಿಗಳು ತಮ್ಮ ಸ್ಟೈಲಿಶ್ ಉಡುಗೆಗಳಿಂದ ಜಗತ್ತನ್ನೇ ತಮ್ಮತ್ತ ಸೆಳೆಯುತ್ತಾರೆ. ಅಂಥಾ ಪ್ರತಿಷ್ಠಿತ ಫ್ಯಾಷನ್‌ ವೀಕ್‌ನಲ್ಲಿ ಈ ಬಾರಿ ಹೆಸರಾಂತ ಬ್ಯುಸಿನೆಸ್ ವುಮೆನ್ ಭಾಗಿಯಾಗಿದ್ದಾರೆ.

ಎಲ್ಲರೂ ಕಾತುರದಿಂದ ಕಾಯುವ ಮಿಲಾನ್ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಲು ಎಲ್ಲಾ ಸೆಲೆಬ್ರಿಟಿಗಳು, ಮಾಡೆಲ್‌ಗಳು ಕಾತುರದಿಂದ ಕಾಯುತ್ತಿರುತ್ತಾರೆ. ಅಂಥಾ ಹೆಸರಾಂತ ಫ್ಯಾಷನ್ ಶೋನಲ್ಲಿ ಈ ಬಾರಿ ಫೇಮಸ್ ಬಿಸಿನೆಸ್ ವುಮೆನ್‌ ದಿವಿತಾ ಸರಫ್ ಭಾಗವಹಿಸಿದ್ದಾರೆ. ಸ್ಟೈಲಿಶ್ ದಿರಿಸಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

Latest Videos


ದಿವಿತಾ, ಶೈನಿಂಗ್‌ ವೈಟ್‌ ಬಣ್ಣದ ಶಾರ್ಟ್‌ ಡ್ರೆಸ್ ಧರಿಸಿದ್ದರು. ಇದಕ್ಕೆ ಸೇಮ್‌ ಕಲರ್‌ನ ಕ್ಲಚ್ ಹಿಡಿದು ಕೂಲಿಂಗ್‌ ಗ್ಲಾಸ್ ಧರಿಸಿ ಪ್ರೇಕ್ಷಕರ ಗಮನ ಸೆಳೆದರು.  
ಇನ್ನೂ ಹಲವಾರು ಹೆಸರಾಂತ ಮಾಡೆಲ್‌ಗಳು ಫ್ಯಾಷನ್‌ ವೀಕ್‌ನಲ್ಲಿ ಸ್ಟೈಲಿಶ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.

ಬಹುತೇಕರು ದಿವಿತಾ ಲುಕ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಬ್ಯೂಟಿಫುಲ್‌, ಗಾರ್ಜಿಯಸ್ ಎಂದಿದ್ದಾರೆ. ಇನ್ನು ಕೆಲವರು ಶಿ ಲುಕ್ಸ್ ಬ್ಯಾಡ್ ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬರು 'ಡ್ರೆಸ್ ಗಿಫ್ಟ್ ರ್ಯಾಪರ್‌ ಥರ ಇದೆ' ಎಂದು ತೆಗಳಿದ್ದಾರೆ. 

ದಿವಿತಾ ಸರಫ್‌ ನೋಡೋಕೆ ಮಾಡೆಲ್‌ನಂತಿದರೂ ಮಾಡೆಲಿಂಗ್‌ ಕುಟುಂಬದಿಂದ ಬಂದವರಲ್ಲ. ಬದಲಿಗೆ ಯಶಸ್ವೀ ಮಹಿಳಾ ಉದ್ಯಮಿ. ಸಣ್ಣ ಕಂಪೆನಿಯನ್ನು ಬೃಹತ್‌ ಕಂಪೆನಿಯಾಗಿ ಕಟ್ಟಿ ಬೆಳೆಸಿದವರು. ಅವರ ಕಂಪನಿ ಮೊದಲ 8 ವರ್ಷಗಳಲ್ಲಿ ಕೇವಲ 30 ಕೋಟಿ ರೂಪಾಯಿ ವ್ಯವಹಾರ ಮಾಡಿದರೆ, ನಂತರದ 4 ವರ್ಷಗಳಲ್ಲಿ 1000 ಕೋಟಿ ರೂಪಾಯಿ ವ್ಯವಹಾರ ನಡೆಸಿತು.

ದೇವಿತಾ ಅವರ ಕುಟುಂಬ ಕಂಪ್ಯೂಟರ್ ತಯಾರಿಕಾ ಕ್ಷೇತ್ರದೊಂದಿಗೆ ಸಂಬಂಧ ಹೊಂದಿತ್ತು. ಆದ್ದರಿಂದ, ಭವಿಷ್ಯದಲ್ಲಿ ವ್ಯಾಪಾರ ಮಾಡುವ ಯೋಜನೆಯನ್ನು ದಿವಿತಾ ಮನಸ್ಸಿನಲ್ಲಿಟ್ಟುಕೊಂಡಿದ್ದರು. ಇದನ್ನು ಕಾರ್ಯರೂಪಕ್ಕೆ ತರಲು, ಅವರು ತಮ್ಮ 16 ನೇ ವಯಸ್ಸಿನಲ್ಲಿ ವ್ಯಾಪಾರದ ತಂತ್ರಗಳನ್ನು ಕಲಿಯಲು ಪ್ರಾರಂಭಿಸಿದರು. 

Devitha saraf

ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು, ಅವರು ಕ್ಯಾಲಿಫೋರ್ನಿಯಾದಲ್ಲಿ ವ್ಯವಹಾರವನ್ನು ಅಧ್ಯಯನ ಮಾಡಿದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ದೂರದರ್ಶನದ ದೃಷ್ಟಿಯನ್ನು ಬದಲಾಯಿಸುವದನ್ನು ಪ್ರಾರಂಭಿಸಿದರು.

ಸಣ್ಣ ವಯಸ್ಸಿನಲ್ಲೇ ಉದ್ಯಮಕ್ಕೆ ಧುಮುಕಿದ ದೇವಿತಾ ಸರಾಫ್ : ದೇವಿತಾ ಅವರು ಕೇವಲ 25 ನೇ ವಯಸ್ಸಿನಲ್ಲಿ ತಮ್ಮದೇ ಕಂಪನಿ ಶುರು ಮಾಡಿದ್ರು. ವಿಯು ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷೆಯಾಗಿರುವ ದೇವಿತಾ ಸರಾಫ್, 2006 ರಲ್ಲಿ, ಅವರು Vu ಟೆಲಿವಿಷನ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು.

ಇದು ಸ್ಮಾರ್ಟ್ ಟಿವಿ ತಯಾರಕ ಕಂಪನಿಯಾಗಿದೆ. ಟಿವಿ ಹಾಗೂ ಕಂಪ್ಯೂಟರ್ ಸಂಯೋಜಿಸುವ ಮೂಲಕ ಸಿದ್ಧವಾಗಿದೆ. ಇದರಲ್ಲಿ ಯೂಟ್ಯೂಬ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಡಿ೨ಹೆಚ್ ಚಾನೆಲ್‌ಗಳನ್ನು ಗ್ರಾಹಕರು ಆನಂದಿಸಬಹುದು.

2006ರಲ್ಲಿ ಸ್ಮಾರ್ಟ್ ಟಿವಿಯನ್ನುಜನರ ಬಳಿ ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಯಶಸ್ಸಿಗೆ ಅವರು ಅನೇಕ ವರ್ಷ ಕಾಯಬೇಕಾಯ್ತು. ಇಲ್ಲಿ ಅವರ ತಾಳ್ಮೆ ಕೆಲಸ ಮಾಡಿತು. ಮೊದಲ 8 ವರ್ಷಗಳಲ್ಲಿ ಕಂಪನಿಯು 0 ರಿಂದ 30 ಕೋಟಿಗಳವರೆಗೆ ಗಳಿಸಲು ಸಫಲವಾಯ್ತು. ಆದ್ರೆ ಮುಂದಿನ 4 ವರ್ಷಗಳಲ್ಲಿ ಕಂಪನಿ 1000 ಕೋಟಿ ರೂಪಾಯಿಗೆ ಬಂದು ನಿಂತಿತು.

click me!