ನವರಾತ್ರಿಯಲ್ಲಿ ಎಥ್ನಿಕ್ ಡ್ರೆಸ್ ಜೊತೆ ಶರ್ಟ್ ಹೀಗೆ ಕ್ಯಾರಿ ಮಾಡಿ

First Published | Sep 21, 2022, 6:09 PM IST

ನವರಾತ್ರಿ ಬರುತ್ತಿದೆ. ಪ್ರತಿ ಮನೆ ಮತ್ತು ದೇವಸ್ಥಾನ, ಊರು, ಕೇರಿಗಳಲ್ಲಿ ದೇವಿಯ ಮೂರ್ತಿಯನ್ನು ಇರಿಸಿ ಪೂಜೆ ಮಾಡಲಾಗುತ್ತದೆ. ಈ ಸಮಯದಲ್ಲಿ ಹತ್ತು ದಿನಗಳ ಕಾಲ ಪೂರ್ತಿಯಾಗಿ ಊರು ಹಬ್ಬದ ಸಂಭ್ರಮದಿಂದ ಮುಳುಗೇಳುತ್ತದೆ. ಈ ಹತ್ತು ದಿನಗಳ ಹಬ್ಬದ ಸಂಭ್ರಮವನ್ನು ಪ್ರತಿಯೊಬ್ಬರು ವಿಶೇಷ ರೀತಿಯಲ್ಲಿ ಡ್ರೆಸಿಂಗ್ ಮಾಡಿ ಸಂಭ್ರಮಿಸಲು ಇಷ್ಟ ಪಡುತ್ತಾರೆ. ನೀವೂ ಸಹ ಈ ನವರಾತ್ರಿಯನ್ನು ವಿಶೇಷವಾಗಿ ಸಂಭ್ರಮಿಸಲು ಬಯಸಿದ್ರೆ ಈ ರೀತಿಯಾಗಿ ಡ್ರೆಸ್ ಮಾಡಿ ಸಂಭ್ರಮಿಸಿ. 

ಹಬ್ಬಗಳು ಮತ್ತು ಪೂಜಾ ದಿನಗಳಲ್ಲಿ ಪ್ರತಿಯೊಬ್ಬರೂ ಸುಂದರವಾದ ಉಡುಪನ್ನು ಧರಿಸಲು ಮತ್ತು ಸಾಂಪ್ರದಾಯಿಕ ಬಟ್ಟೆಗಳನ್ನು (tradiitonal dress) ಧರಿಸಲು ಇಷ್ಟಪಡ್ತಾರೆ. ಈ ನವರಾತ್ರಿ ಮತ್ತು ದಸರಾ ಹಬ್ಬಗಳಲ್ಲಿ ನೀವು ಏನನ್ನಾದರೂ ಸ್ಪೆಷಲ್ ಆಗಿ ಟ್ರೈ ಮಾಡಲು ಬಯಸಿದರೆ, ಜೊತೆಗೆ ಆರಾಮದಾಯಕ ಲುಕ್ ಬಯಸಿದ್ರೆ, ನೀವು ಶರ್ಟ್ ಕ್ಯಾರಿ ಮಾಡಬಹುದು. ಶರ್ಟ್ ಗಳೊಂದಿಗೆ ಡ್ರೆಸ್ ಹೇಗೆ ಕ್ಯಾರಿ ಮಾಡೋದು ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ನಿಮಗಾಗಿ ಪರ್ಫೆಕ್ಟ್ ಲುಕ್ ಗಳು.  

ಸ್ಕರ್ಟ್ ನೊಂದಿಗೆ ಶರ್ಟ್ (skirt with shirt)
ಸ್ಯಾಟಿನ್ ಬಿಳಿ ಶರ್ಟ್ ನೊಂದಿಗೆ ಎ ಲೈನ್ ಸ್ಕರ್ಟ್ ಧರಿಸುವ ಮೂಲಕ ನೀವು ಸಂಪೂರ್ಣವಾಗಿ ಆರಾಮದಾಯಕ ಮತ್ತು ಟ್ರೆಡಿಶನಲ್ ಲುಕ್ ಪಡೆಯಬಹುದು. ಸ್ಯಾಟಿನ್ ಶರ್ಟ್ ಅನ್ನು ಸ್ಕರ್ಟ್ ನೊಂದಿಗೆ ಮಿಕ್ಸ್ ಮಾಡುವ ಮೂಲಕ ಅನೇಕ ನಟಿಯರು ಸುಂದರವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನೀವು ಬಯಸಿದರೆ ಈ ಲುಕ್ ನ್ನು ನೀವು ಸುಲಭವಾಗಿ ಮರುಸೃಷ್ಟಿಸಬಹುದು.

Tap to resize

ಪಲಾಝೊ ಜೊತೆ ಶರ್ಟ್ (shirt with palazzo)
ಪಲಾಝೋ ಮತ್ತು ಶರಾರಾ ಈ ದಿನಗಳಲ್ಲಿ ಸಾಕಷ್ಟು ಟ್ರೆಂಡಿಂಗ್ ನಲ್ಲಿವೆ. ನೀವು ಅದರೊಂದಿಗೆ ಎಕ್ಸ್ ಪೆರಿಮೆಂಟ್ ಮಾಡಲು ಬಯಸಿದರೆ ಖಂಡಿತವಾಗಿ ಶರ್ಟ್ ಜೊತೆ ಪಲಾಝೋ ಟ್ರೈ ಮಾಡಿ. ಇದು ಸಂಪೂರ್ಣವಾಗಿ ವಿಭಿನ್ನವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ. ಇದು ನಿಮಗೆ ಟ್ರೆಡಿಶನಲ್ ಲುಕ್ ನೀಡೋದು ಮಾತ್ರವಲ್ಲ, ನಿಮ್ಮ ಸ್ಟೈಲ್ ಕೂಡ ಸಖತ್ತಾಗಿ ಕಾಣಿಸುತ್ತೆ.

ಸೀರೆಯೊಂದಿಗಿನ ಶರ್ಟ್ (shirt with saree)
ನೀವು ಸಂಪೂರ್ಣವಾಗಿ ವಿಭಿನ್ನ ಸ್ಟೈಲ್ ನಲ್ಲಿ ಹೊಸ ಸೀರೆಯನ್ನು ಕ್ಯಾರಿ ಮಾಡಲು ಬಯಸಿದರೆ, ಅದನ್ನು ಶರ್ಟ್ ನೊಂದಿಗೆ ಟ್ರೈ ಮಾಡಿ. ಅಂದಹಾಗೆ, ಹೆಚ್ಚಿನ ಹಿರೋಯಿನ್ ಗಳು ಇಂದು ಶರ್ಟ್ ಜೊತೆ ಸೀರೆ ಕ್ಯಾರಿ ಮಾಡುತ್ತಾರೆ. ಸಾದಾ ಸೀರೆ ಜೊತೆ ಮಲ್ಟಿ ಕಲರ್ ಪ್ರಿಂಟ್ ಶರ್ಟ್ ಕ್ಯಾರಿ ಮಾಡಿದ್ರೆ ಸಖತ್ತಾಗಿರುತ್ತೆ.
 

ಲೆಹೆಂಗಾದೊಂದಿಗಿನ ಶರ್ಟ್ (shirt with lehenga)
ನೀವು ಬಯಸಿದರೆ, ನೀವು ಲೆಹೆಂಗಾವನ್ನು ಶರ್ಟ್ ನೊಂದಿಗೆ ಕಂಬೈನ್ ಮಾಡಬಹುದು. ಈ ರೀತಿಯ ಫ್ಯಾಷನ್ ಕ್ಯಾರಿ ಮಾಡೋದು ಈಗ ಟ್ರೆಂಡ್ ಆಗಿದೆ. ಹಬ್ಬದ ಸೀಸನ್ ನಲ್ಲಿ, ಶರ್ಟ್ ಗಳೊಂದಿಗೆ ಜೋಡಿ ಲೆಹೆಂಗಾಗಳು ಸಾಕಷ್ಟು ಆಕರ್ಷಕವಾಗಿ ಕಾಣುತ್ತವೆ ಮತ್ತು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಈ ಬಾರಿ ನೀವು ನವರಾತ್ರಿ ಹಬ್ಬಗಳಲ್ಲಿ ಈ ಲುಕ್ ಟ್ರೈ ಮಾಡಬಹುದು.  

Latest Videos

click me!