ಬೋಲ್ಡ್, ಬ್ಯೂಟಿಫುಲ್ ಲುಕ್ ಗಾಗಿ ಕಾಜಲ್ ಹಚ್ಚುವಾಗ ಈ ಟ್ರಿಕ್ಸ್ ಫಾಲೋ ಮಾಡಿ

First Published | Sep 20, 2022, 5:58 PM IST

ಕಣ್ಣುಗಳು ಆಕರ್ಷಕವಾಗಿದ್ದರೆ, ಹುಡುಗಿ ತುಂಬಾನೆ ಸುಂದರವಾಗಿ ಕಾಣುತ್ತಾಳಂತೆ. ಅದಕ್ಕಾಗಿಯೇ ಹುಡುಗಿಯರು ಹೆಚ್ಚಾಗಿ ಕಣ್ಣಿನ ಅಂದವನ್ನು ಹೆಚ್ಚಿಸುವ ಪ್ರಾಡಕ್ಟ್ ಗಳತ್ತ ಒಲವು ತೋರಿಸುತ್ತಾರೆ. ಅದರಲ್ಲೂ ಹುಡುಗಿಯರು ಯಾವಾಗಲೂ ಕಾಜಲ್ ಹಚ್ಚಲು ಇಷ್ಟಪಡುತ್ತಾರೆ ಮತ್ತು ಕಾಜಲ್ ಹೆಚ್ಚಿನ ಹುಡುಗಿಯರ ಮೊದಲ ಮೇಕಪ್ ಪ್ರಾಡಕ್ಟ್ ಕೂಡ ಆಗಿದೆ. ಯಾವುದೇ ಮೇಕಪ್ ಹಚ್ಚದೆಯೂ ಕಾಜಲ್ ಹಚ್ಚೋದರಿಂದ ಕಣ್ಣುಗಳಿಗೆ ಫ್ರೆಶ್ ಮತ್ತು ಸುಂದರವಾದ ಲುಕ್ ನೀಡುತ್ತೆ. ಆದರೆ ಅದನ್ನು ಹಚ್ಚುವ ಸರಿ ವಿಧಾನ ತಿಳಿದಿರಬೇಕು ಅಷ್ಟೇ. 

ಹೆಚ್ಚಿನ ಹದಿಹರೆಯದ ಹುಡುಗಿಯರು ಶಾಲೆ, ಕಾಲೇಜು ಅಥವಾ ಕಚೇರಿಗೆ ಹೋಗುವಾಗ ಪ್ರತಿದಿನ ಕಾಜಲ್ (Kajol) ಬಳಸುತ್ತಾರೆ. ಕಾಜಲ್ ಹಚ್ಚಿದ ನಂತರ, ಅದು ಹರಡದಂತೆ(ಸ್ಮಡ್ಜ್) ತಡೆಯೋದು ಒಂದು ದೊಡ್ಡ ಸಮಸ್ಯೆಯಾಗಿದೆ. ಅನೇಕ ಬಾರಿ ನೀವು ಕೆಲಸಕ್ಕಾಗಿ ಮನೆಯ ಹೊರಗೆ ಗಂಟೆಗಟ್ಟಲೆ ಕಳೆಯಬೇಕಾಗುತ್ತೆ. ಈ ಸಮಯದಲ್ಲಿ ಕಾಜಲ್ ಸ್ಮಡ್ಜ್ ಆಗದಂತೆ ದೀರ್ಘಕಾಲದವರೆಗೆ ಕಾಪಾಡೋದು ಹೇಗೆ? 

ಕಣ್ಣಿಗೆ ಕಾಜಲ್ ಹಾಕೋದು ಮಾತ್ರವಲ್ಲ, ಅದು ಹಾಳಾಗದಂತೆ ಕಾಪಾಡೋದು ಸಹ ಒಂದು ಕಲೆಯಾಗಿದೆ. ಸೂರ್ಯನ ಬೆಳಕು ಮತ್ತು ಗಾಳಿಯಿಂದಾಗಿ, ಕಣ್ಣುಗಳಲ್ಲಿ ನೀರು ಬರುತ್ತೆ ಮತ್ತು ಕಾಜಲ್ ಹರಡುತ್ತೆ ಮತ್ತು ಕಣ್ಣುಗಳು ಸುಂದರವಾಗಿ ಕಾಣುವ ಬದಲು ಭಯಾನಕವಾಗಿ ಕಾಣಲು ಪ್ರಾರಂಭಿಸುತ್ತೆ. ಕಾಜಲ್ ಸ್ಮಡ್ಜ್ ಪ್ರೂಫ್(Mudge proof) ಮಾಡಲು ಕೆಲವು ಸುಲಭ ಸಲಹೆಗಳನ್ನು ತಿಳಿದುಕೊಳ್ಳೋಣ.

Tap to resize

ಕಾಜಲ್  ಸ್ಮಡ್ಜ್ ಪ್ರೂಫ್ ಮಾಡಲು ಈ ಸಲಹೆಗಳನ್ನು ಅನುಸರಿಸಿ:
ಕಾಜಲ್ ಹಚ್ಚುವ ಮೊದಲು, ಮುಖವನ್ನು ಚೆನ್ನಾಗಿ ತೊಳೆದು(Face wash) ಒಣಗಿಸಿ, ಮುಖವನ್ನು ಒಣಗಿಸಿದ ನಂತರ, ಕಣ್ಣುಗಳಲ್ಲಿ ನೀರಿನಿಂದ ಉಂಟಾಗುವ ತೇವಾಂಶವನ್ನು ಹತ್ತಿ ಬಟ್ಟೆ ಅಥವಾ ಹತ್ತಿ ಉಂಡೆಯ ಸಹಾಯದಿಂದ ಒಣಗಿಸಿ. ಇದನ್ನು ಮಾಡೋದರಿಂದ, ಕಾಜಲ್ ಮ್ಯಾಟ್ ಆಗಿ ಕಾಣುತ್ತೆ ಮತ್ತು ಕಡಿಮೆ ಹರಡುತ್ತೆ.
 

ಲೋವರ್ ಲ್ಯಾಶ್ ಲೈನ್ (Lower Lash line)ಮೇಲೆ ಕಾಜಲ್ ಹಚ್ಚಿ: 
ಕಾಜಲ್ ಹಚ್ಚುವಾಗಲು ಸರಿಯಾದ ರೀತಿಯಲು ಹಚ್ಚಲು ತಿಳಿದಿರಬೇಕು. ಹುಡುಗಿಯರು ಕಾಜಲನ್ನು ಕಣ್ಣಿನ ಒಳಗಡೆಯಿಂದ ಹಚ್ಚುತ್ತಾರೆ, ಇದರಿಂದಾಗಿ ಕಾಜಲ್ ಹರಡುವ ಸಾಧ್ಯತೆಗಳು ಹೆಚ್ಚು.  ಕಾಜಲ್ ಹರಡದಂತೆ ತಡೆಯಲು, ನಿಮ್ಮ ರೆಪ್ಪೆಗಳಲ್ಲಿ ಇರುವ ನೀರಿನ ರೇಖೆಯ ಬದಲು ಅದನ್ನು ನಿಮ್ಮ ಲಾಶ್ ಲೈನ್ ಗೆ ಹಚ್ಚಿ ನೋಡಿ, ಸ್ಮಡ್ಜ್ ಆಗೋದಿಲ್ಲ.

ಕೆಳಗಿನ ಲ್ಯಾಶ್ ಲೈನಿನ ಮೇಲೆ ಕಾಜಲ್ ಹಚ್ಚಿದ ನಂತರ, ನೀವು ಕಾಜಲ್ ಮೇಲೆ ಐ ಲೈನರ್ ನ(Eye Liner) ತೆಳುವಾದ ಸ್ಟ್ರೋವನ್ನು ಎಳೆಯಬಹುದು ಅಥವಾ ಕಾಜಲ್ ಮೇಲೆ ಕಪ್ಪು ಐಷಾಡೋವನ್ನು ಹಚ್ಚಬಹುದು. ಇದನ್ನು ಮಾಡೋದರಿಂದ, ಕಾಜಲ್ ಹರಡೋದಿಲ್ಲ ಮತ್ತು ಹೆಚ್ಚು ಮ್ಯಾಟ್ ಮತ್ತು ಸುಂದರವಾಗಿ ಕಾಣುತ್ತೆ.

ಕಣ್ಣುಗಳ ಕೆಳಗೆ ಬೆವರಲು(Sweating) ಬಿಡಬೇಡಿ: 
ಕಾಜಲ್ ಹರಡಲು ಪ್ರಮುಖ ಕಾರಣವೆಂದರೆ ಕಣ್ಣುಗಳಲ್ಲಿ ತೇವಾಂಶ ಮತ್ತು ಬೆವರು, ಆದ್ದರಿಂದ ನೀವು ಹೊರಗೆ ಹೋಗುವಾಗ, ಹತ್ತಿ ಬಟ್ಟೆಯಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ ಮತ್ತು ನಿಮ್ಮ ಕೈಗಳನ್ನು ಕಣ್ಣುಗಳ ಮೇಲೆ ಇಡೋದನ್ನು ತಪ್ಪಿಸಿ.

Latest Videos

click me!