ಭಾಗ್ಯಲಕ್ಷ್ಮಿ ಸೀರಿಯಲ್‌ ಶ್ರೇಷ್ಠಾ ಹಾಟ್‌ ಲುಕ್‌; ನೆಕ್ಸ್ಟ್‌ ಸ್ಯಾಂಡಲ್‌ವುಡ್ ಕ್ವೀನ್ ನೀವೇ ಅಂತಿದ್ದಾರೆ ಫ್ಯಾನ್ಸ್‌!

Published : Feb 01, 2024, 10:23 AM ISTUpdated : Feb 01, 2024, 10:51 AM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ಭಾಗ್ಯಲಕ್ಷ್ಮಿ. ಅದರಲ್ಲಿ ಧಾರಾವಾಹಿಯ ಕಥಾನಾಯಕಿ ಭಾಗ್ಯಳಂತೆಯೇ ಎಲ್ಲರ ಗಮನ ಸೆಳೆದಿರೋ ಪಾತ್ರ ಖಡಕ್ ವಿಲನ್ ಶ್ರೇಷ್ಠಾಳದ್ದು. ಸೀರಿಯಲ್‌ನಲ್ಲಿ ಮಾಡರ್ನ್‌ ಆಗಿರೋ ಕಾವ್ಯ ರಿಯಲ್‌ ಲೈಫ್‌ನಲ್ಲಿಯೂ ಸಖತ್ ಸ್ಟೈಲಿಶ್‌. ತಮ್ಮ ಲೇಟೆಸ್ಟ್ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

PREV
19
ಭಾಗ್ಯಲಕ್ಷ್ಮಿ ಸೀರಿಯಲ್‌ ಶ್ರೇಷ್ಠಾ ಹಾಟ್‌ ಲುಕ್‌; ನೆಕ್ಸ್ಟ್‌ ಸ್ಯಾಂಡಲ್‌ವುಡ್ ಕ್ವೀನ್ ನೀವೇ ಅಂತಿದ್ದಾರೆ ಫ್ಯಾನ್ಸ್‌!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದು ಭಾಗ್ಯಲಕ್ಷ್ಮಿ. ಅದರಲ್ಲಿ ಧಾರಾವಾಹಿಯ ಕಥಾನಾಯಕಿ ಭಾಗ್ಯಳಂತೆಯೇ ಎಲ್ಲರ ಗಮನ ಸೆಳೆದಿರೋ ಪಾತ್ರ ಖಡಕ್ ವಿಲನ್ ಶ್ರೇಷ್ಠಾಳದ್ದು. 

29

ನಟಿ ಕಾವ್ಯ ಗೌಡ ವಿಲನ್ ಶ್ರೇಷ್ಠಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ವಿವಾಹಿತನಾಗಿರೋ ತಾಂಡವ್‌ನ್ನೇ ಪ್ರೀತಿಸೋ ಪಾತ್ರವಿದು. ಇದರಲ್ಲಿ ಸಂಸಾರವನ್ನೇ ಹಾಳು ಮಾಡುವ ಖಳನಾಯಕಿ ಪಾತ್ರದಲ್ಲಿ ಶ್ರೇಷ್ಠಾ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ.

39

ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ತಾಂಡವ್ ನ ಪ್ರೀತಿಯಲ್ಲಿ ಬಿದ್ದು ಮನೆಯವರನ್ನೇ ದೂರ ಮಾಡೋ ಸೆಲ್ಫಿಶ್ ಶ್ರೇಷ್ಠಾ ರಿಯಲ್ ಲೈಫ್ ನಲ್ಲಿ ಮಾತ್ರ ಸಿಕ್ಕಾಪಟ್ಟೆ ಸ್ವೀಟ್‌. ಸೋಷಿಯಲ್‌ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟಿವ್‌ ಆಗಿರೋ ಕಾವ್ಯ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ.

49

ಸೀರಿಯಲ್‌ನಲ್ಲಿ ಮಾಡರ್ನ್‌ ಆಗಿರೋ ಕಾವ್ಯ ರಿಯಲ್‌ ಲೈಫ್‌ನಲ್ಲಿಯೂ ಸಖತ್ ಮಾಡರ್ನ್‌. ಸ್ಟೈಲಿಶ್ ಗೌನ್‌ ಧರಿಸಿ ಮಿಂಚುತ್ತಾರೆ. ಅಭಿಮಾನಿಗಳು ಇದಕ್ಕೆ ಲೈಕ್ಸ್‌, ಹಾರ್ಟ್‌ ಎಮೋಜಿಗಳನ್ನು ಕಳುಹಿಸಿಕೊಡುತ್ತಾರೆ.

59

ಬೆಂಗಳೂರಿನವರೇ ಆದ ಕಾವ್ಯಾ ಸೀರಿಯಲ್ ನಲ್ಲಿ ಇರುವಂತೆ ನಿಜ ಜೀವನದಲ್ಲೂ ಸಖತ್ ಸ್ಟೈಲಿಶ್ ಆಗಿದ್ದಾರೆ. ಅದನ್ನು ಅವರ ಸೋಶಿಯಲ್ ಮೀಡಿಯಾ ನೋಡಿದ್ರೇನೆ ತಿಳಿಯುತ್ತೆ. ಆದರೆ ಶ್ರೇಷ್ಠಾ ಅಂತ ವ್ಯಕ್ತಿತ್ವ ಮಾತ್ರ ನನ್ನದಲ್ಲ, ನಾನು ತುಂಬಾನೆ ಸಾಫ್ಟ್ ಹುಡುಗಿ ಎನ್ನುತ್ತಾರೆ ಕಾವ್ಯ ಗೌಡ. 

69

ಕಾವ್ಯಾ ಗೌಡಾಗೆ ಇದು ಮೊದಲ ಸೀರಿಯಲ್ ಅಲ್ಲ, ಹಲವು ವರ್ಷಗಳ ಹಿಂದೆ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಸೀರಿಯಲ್ ನಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ ಕೆಲವೇ ದಿನಗಳಲ್ಲಿ ಸೀರಿಯಲ್ ಬಿಡಬೇಕಾಗಿ ಬಂತು. ಬಳಿಕ ಐದು ವರ್ಷಗಳ ಕಾಲ ತೆಲುಗು ಕಿರುತೆರೆಯಲ್ಲಿ ಮಿಂಚಿದ ನಟಿ ಇವರು.

79

ಇನ್ನು ಕಾವ್ಯಾ ಗೌಡ ಸಿನಿಮಾದಲ್ಲೂ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಜೊತೆ ರಿಂಗ ರಿಂಗ ರೋಸಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಶೋಧ ಎನ್ನುವ ಚಿತ್ರದಲ್ಲೂ ನಟಿಸಿದ್ದಾರೆ. ಇದಾದ ಬಳಿಕ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

89

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮೊದಲು ಗೌತಮಿ ಗೌಡ ಶ್ರೇಷ್ಠಾ ಪಾತ್ರ ನಿರ್ವಹಿಸುತ್ತಿದ್ದರು. ಆ ಪಾತ್ರಕ್ಕೆ ಕಾವ್ಯಾ ಬಂದಾಗ, ಮೊದಲಿಗೆ ಈ ಪಾತ್ರ ಮಾಡಲು ಸಾಧ್ಯವೇ ಎನ್ನುವ ಭಯ ಇತ್ತಂತೆ ಇವರಿಗೆ. ಅಳುಮುಂಜಿ ಪಾತ್ರಗಳನ್ನೆ ಮಾಡುತ್ತಾ ಬಂದಿದ್ದ ಕಾವ್ಯಾಗೆ ಈ ಪಾತ್ರ ಚಾಲೆಂಜಿಗ್ ಆಗಿತ್ತಂತೆ.

99

ಸದ್ಯಕ್ಕಂತೂ ಶ್ರೇಷ್ಠಾ ಪಾತ್ರಕ್ಕೆ ಜೀವ ತುಂಬಿರೋ ನಟಿಯನ್ನು ಜನರು ಗುರುತು ಹಿಡಿಯುತ್ತಿರುವುದು ಸಂತೋಷ ತಂದಿದೆ ಅಂತೆ. ತುಂಬಾ ಜನ ಬೈದಿದ್ದು ಇದೆಯಂತೆ. ಒಬ್ಬರು ಬಂದು, ಬಿಟ್ಟು ಬಿಡಿ ತಾಂಡವನ್ನು ನಿಮಗೆ ಬೇರೊಬ್ಬ ಹುಡುಗ ಸಿಗ್ತಾನೆ ಅಂತಾನೂ ಹೇಳಿದ್ರಂತೆ.

Read more Photos on
click me!

Recommended Stories