ಕನ್ನಡ ಧಾರಾವಾಹಿ ನೋಡುವ ಪ್ರೇಕ್ಷಕರ ನೆಚ್ಚಿನ ಸೀರಿಯಲ್ಗಳಲ್ಲಿ ಒಂದು 'ಲಕ್ಷ್ಮಿ ಬಾರಮ್ಮ'. ಇದರಲ್ಲಿ ಸೀರಿಯಲ್ ನಾಯಕ-ನಾಯಕಿಯಷ್ಟೇ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಹೆಸರು ತನ್ವಿ ರಾವ್.
ಆದ್ರೆ ಸೀರಿಯಲ್ ವಿಲನ್ ತನ್ವಿ ರಿಯಲ್ ಲೈಫ್ನಲ್ಲಿ ಸಖತ್ ಕ್ಯೂಟು. ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಡಿಫರೆಂಟ್ ಔಟ್ಫಿಟ್ನಲ್ಲಿ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಪರ್ಪಲ್ ಕಲರ್ ಗೌನ್, ಬಣ್ಣದ ಹರಳುಗಳ ಹೆವಿ ನೆಕ್ಲೇಸ್ ಹಾಕಿ, ಹೇರ್ ಫ್ರೀ ಬಿಟ್ಟು ಮುದ್ದಾಗಿ ಪೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಸೀರಿಯಲ್ ಕೀರ್ತಿಯ ಸ್ಟೈಲಿಶ್ ಲುಕ್ ಫಿದಾ ಆಗಿದ್ದಾರೆ. ಫೆಂಟಾಸ್ಟಿಕ್ ಎಂದು ಹೊಗಳಿದ್ದಾರೆ.
ತನ್ವಿ ರಾವ್ ಪೋಟೋಗೆ ಸಾಕಷ್ಟು ಲೈಕ್ಸ್ ಹಾಗೂ ಹಾರ್ಟ್ ಎಮೋಜಿಗಳನ್ನು ಅಭಿಮಾನಿಗಳು ಸೆಂಡ್ ಮಾಡಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸೂಪರ್ಬ್, ಲವ್ಲೀ, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ.
ಮತ್ತೆ ಕೆಲವರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. 'ಸೀರಿಯಲ್ನಲ್ಲಿ ಮಾತ್ರ ನೀವು ನೋಡೋಕೆ ಸೂಪರ್. ರಿಯಲ್ ಆಗಿ ಚೆನ್ನಾಗಿ ರೆಡಿ ಆಗಲ್ಲ. ಓವರ್ ಆಗಿ ಕಾಣ್ತೀರಿ' ಎಂದು ತೆಗಳಿದ್ದಾರೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಕೀರ್ತಿ ಪಾತ್ರ ಸಖತ್ ಚಾಲೆಂಜಿಂಗ್ ಆಗಿದ್ದು, ಪ್ರೀತಿಸಿದವನನ್ನು ಕಳೆದುಕೊಂಡು ಸ್ಯಾಡಿಸ್ಟ್ ಆಗಿ ವರ್ತಿಸುತ್ತಿರುವ ಯುವತಿಯ ಪಾತ್ರ. ಎಲ್ಲ ಎಮೋಶನ್ಗಳೂ ಇರೋ ಈ ಪಾತ್ರವನ್ನು ತನ್ವಿ ರಾವ್ ಸಖತ್ತಾಗಿ ಅಭಿನಯಿಸುತ್ತಿದ್ದಾರೆ.
ಈ ಕೀರ್ತಿ ಪಾತ್ರಕ್ಕೆ ಹತ್ತಾರು ಶೇಡ್ಗಳಿವೆ. ಅದನ್ನು ನಿರ್ವಹಿಸೋದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಈ ಪಾತ್ರವನ್ನು ತನ್ವಿ ರಾವ್ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ.
‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ಗೂ ಮೊದಲು 'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್ಗಳಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ಈಕೆ ನಟಿಸಿರೋ ಸಿನಿಮಾದ ಹೆಸರು 'ರಂಗ್ ಬಿ ರಂಗ್'. ಇನ್ನೂ ಒಂದೆರಡು ಸಿನಿಮಾಗಳು ತನ್ವಿ ಕೈಯಲ್ಲಿವೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
ಇನ್ನು ತನ್ವಿ, ಭರತನಾಟ್ಯ ಕಲಾವಿದೆ ಕೂಡಾ ಹೌದು. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತ ತನ್ವಿ ರಾವ್, ಕಥಕ್, ಒಡಿಸಾ, ಬಾಲಿವುಡ್ ಸೇರಿದಂತೆ ಅನೇಕ ವಿಧದ ಡಾನ್ಸ್ ಕಲಿತಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.